2023ರ ಏಷ್ಯಾ ಕಪ್ ಪಂದ್ಯಾವಳಿಗೆ ಕೇವಲ ಒಂದೂವರೆ ತಿಂಗಳು ಮಾತ್ರ ಬಾಕಿ ಇದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಮತ್ತು ಅಫ್ಘಾನಿಸ್ತಾನದಂತಹ ತಂಡಗಳನ್ನು ಒಳಗೊಂಡಿರುವ ಏಷ್ಯಾ ಕಪ್ ಪಂದ್ಯಾವಳಿಯು ಆಗಸ್ಟ್ 31ರಿಂದ ಸೆಪ್ಟೆಂಬರ್ 17ರ ನಡುವೆ ನಡೆಯಲಿದೆ.
ಈ ಮೊದಲು ಸಂಪೂರ್ಣ ಪಂದ್ಯಾವಳಿಯು ಪಾಕಿಸ್ತಾನದಲ್ಲಿ ನಡೆಯಬೇಕಿತ್ತು. ಆದರೆ ಭದ್ರತಾ ಕಾರಣಗಳಿಂದಾಗಿ ಬಿಸಿಸಿಐ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿತು. ಹೀಗಾಗಿ ಏಷ್ಯಾ ಕಪ್ ಪಂದ್ಯಾವಳಿಯು ಇದೀಗ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಎರಡು ದೇಶಗಳಲ್ಲಿ ನಡೆಯಲಿದೆ.

ಹೈಬ್ರಿಡ್ ಮಾದರಿಯಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ ಪಾಕಿಸ್ತಾನ ನಾಲ್ಕು ಪಂದ್ಯಗಳನ್ನು ಆಯೋಜಿಸಲಿದ್ದರೆ, ಫೈನಲ್ ಪಂದ್ಯ ಸೇರಿದಂತೆ ಒಂಬತ್ತು ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯ ವಹಿಸಲಿದೆ.
ಈವರೆಗಿನ 15 ಆವೃತ್ತಿಗಳ ಏಷ್ಯಾ ಕಪ್ ಪಂದ್ಯಾವಳಿ ಇತಿಹಾಸದಲ್ಲಿ ಭಾರತ ತಂಡ 7 ಬಾರಿ ಪ್ರಶಸ್ತಿ ಗೆಲ್ಲುವ ಮೂಲಕ ಹೆಚ್ಚು ಬಾರಿ ಗೆದ್ದ ತಂಡವಾಗಿದೆ. ಇನ್ನು ಶ್ರೀಲಂಕಾ ತಂಡ 6 ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರೆ, ಪಾಕಿಸ್ತಾನ 2 ಬಾರಿ ಗೆದ್ದಿದೆ.

ಸನತ್ ಜಯಸೂರ್ಯ ಅವರು 53.04ರ ಅದ್ಭುತ ಸರಾಸರಿ ಮತ್ತು 102.52ರ ಸ್ಟ್ರೈಕ್‌ರೇಟ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಅಲ್ಲದೆ, ಏಷ್ಯಾ ಕಪ್‌ನಲ್ಲಿ 6 ಶತಕ ಹಾಗೂ 3 ಅರ್ಧಶತಕ ಬಾರಿಸಿದ್ದಾರೆ. ಇದು ಪಂದ್ಯಾವಳಿಯ ಏಕದಿನ ಆವೃತ್ತಿಗಳ ಅಂಕಿಅಂಶವಾಗಿದೆ.
ಇನ್ನು ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಶ್ರೀಲಂಕಾದವರೇ ಆದ ಕುಮಾರ ಸಂಗಕ್ಕಾರ ಎರಡನೇ ಸ್ಥಾನದಲ್ಲಿದ್ದಾರೆ. ಅವರು 23 ಇನ್ನಿಂಗ್ಸ್‌ಗಳಲ್ಲಿ 1,075 ರನ್ ಗಳಿಸಿದ್ದಾರೆ.
ಮೂರನೇ ಸ್ಥಾನದಲ್ಲಿ ಭಾರತದ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಇದ್ದು, 21 ಇನ್ನಿಂಗ್ಸ್‌ಗಳಲ್ಲಿ 971 ರನ್ ಗಳಿಸಿದ್ದಾರೆ. ಏಷ್ಯಾ ಕಪ್ ಏಕದಿನ ಆವೃತ್ತಿಗಳಲ್ಲಿ ಹೆಚ್ಚು ರನ್ ಗಳಿಸಿದವರ ಅಗ್ರ ಐವರ ಪೈಕಿ ಕೇವಲ ಒಬ್ಬ ಪಾಕಿಸ್ತಾನ ಬ್ಯಾಟರ್ ಮಾತ್ರ ಸ್ಥಾನ ಪಡೆದಿದ್ದಾರೆ. ಆಲ್‌ರೌಂಡರ್ ಶೋಯೆಬ್ ಮಲಿಕ್ 15 ಇನ್ನಿಂಗ್ಸ್‌ಗಳಲ್ಲಿ 786 ರನ್ ಬಾರಿಸಿದ್ದಾರೆ.
ನಂತರದ ಸ್ಥಾನದಲ್ಲಿ ಭಾರತದ ಹಾಲಿ ನಾಯಕ ರೋಹಿತ್ ಶರ್ಮಾ 21 ಇನ್ನಿಂಗ್ಸ್‌ಗಳಲ್ಲಿ 754 ರನ್ ಗಳಿಸಿದ್ದರೆ, ವಿರಾಟ್ ಕೊಹ್ಲಿ 10 ಇನ್ನಿಂಗ್ಸ್‌ಗಳಲ್ಲಿ 61.30ರ ಸರಾಸರಿಯಲ್ಲಿ 613 ರನ್ ಗಳಿಸಿದ್ದಾರೆ.
ಈ ಉತ್ತಮ ಸಂಖ್ಯೆಯ ಹೊರತಾಗಿಯೂ ಏಷ್ಯಾ ಕಪ್‌ನಲ್ಲಿ ರನ್‌ಗಳ ವಿಷಯದಲ್ಲಿ ಅಗ್ರ 10 ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಇವರ ಹೆಸರು ಇಲ್ಲ. ಎಂಎಸ್ ಧೋನಿ 16 ಇನ್ನಿಂಗ್ಸ್‌ಗಳಲ್ಲಿ 648 ರನ್‌ಗಳೊಂದಿಗೆ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ.
ರೋಹಿತ್ ಶರ್ಮಾ ಅವರು ಸನತ್ ಜಯಸೂರ್ಯ ಅವರನ್ನು ಹಿಂದಿಕ್ಕಿ ಪಂದ್ಯಾವಳಿಯಲ್ಲಿ ಗರಿಷ್ಠ ರನ್ ಸ್ಕೋರರ್ ಆಗಲು 476 ರನ್‌ಗಳ ಅಗತ್ಯವಿದೆ. ರೋಹಿತ್ ಈ ಪಂದ್ಯಾವಳಿಯಲ್ಲಿ ಕನಿಷ್ಠ ನಾಲ್ಕು ಶತಕಗಳನ್ನು ಬಾರಿಸಿದರೆ, ಮಾತ್ರ ಸಾಧ್ಯವಾಗುತ್ತದೆ. ಆದರೆ ಅವರ ಬ್ಯಾಟಿಂಗ್ ಫಾರ್ಮ್ ಅನುಮಾನ ಮೂಡಿಸಿದೆ.