Asia cup: ನಮ್ಮ ಅತ್ಯುತ್ತಮ ಪ್ರದರ್ಶನ ಈವರೆಗೆ ಬಂದಿಲ್ಲ ಎಂದ ನಾಯಕ ರೋಹಿತ್ ಶರ್ಮಾ
ಏಷ್ಯಾಕಪ್‌ನ ಲೀಗ್ ಹಂತದ ಎರಡನೇ ಹಾಗೂ ಅಂತಿಮ ಪಂದ್ಯದಲ್ಲಿ ನೇಪಾಳ ತಂಡವನ್ನು ಭಾರತ 10 ವಿಕೆಟ್‌ಗಳ ಅಂತರದಿಂದ ಮಣಿಸಿದ್ದು ಸೂಪರ್ 4ಗೆ ಪ್ರವೇಶ ಪಡೆದಿದೆ. ಈ ಪಂದ್ಯಕ್ಕೂ ಮುಳೆ ಅಡ್ಡಿಯಾಗಿದ್ದು ಪೂರ್ಣ ಪ್ರಮಾಣದ ಪಂದ್ಯ ನಡೆದಿಲ್ಲ. ಬ್ಯಾಟಿಂಗ್‌ನಲ್ಲಿ ಭಾರತ ಉತ್ತಮವಾಗಿ ಕಾಣಿಸಿದ್ದರೂ ಬೌಲಿಂಗ್ ಹಾಗೂ ಫೀಲ್ಡಿಂಗ್ ವಿಭಾಗದ ಪ್ರದರ್ಶನ ಚಿಂತೆ ಹೆಚ್ಚಿಸಿದೆ.
ನೇಪಾಳ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತನ್ನ ಅತ್ಯುತ್ತಮ ಪ್ರದರ್ಶನವನ್ನು ಈವರೆಗೆ ನೀಡಿಲ್ಲ ಎಂದಿದ್ದಾರೆ. ಹಾಗಾಗು ಸೂಪರ್ 4 ಹಂತದಲ್ಲಿ ಉತ್ತಮ ಪ್ರದರ್ಶನ ನೀಡುವ ಅಗತ್ಯವಿದೆ ಎನ್ನುವುದನ್ನು ರೋಹಿತ್ ಒಪ್ಪಿಕೊಂಡಿದ್ದಾರೆ.

"ನಾವು ನಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದರೆ ಕೆಲ ಆಟಗಾರರು ಸುದೀರ್ಘ ಕಾಲದ ಬಳಿಕ ಮೈದಾನದಲ್ಲಿ ಆಡಲಿಳಿದರು. ಇಲ್ಲಿ ನಾವು ಸೂಪರ್ 4 ಹಂತಕ್ಕೆ ಪ್ರವೇಶ ಪಡೆದ ನಂತರ ಸಮಾಧಾನ ಪಟ್ಟುಕೊಳ್ಳುವಂತಾ ಪ್ರದರ್ಶನ ನೀಡಿದರೆ ಸಾಕಾಗುವುದಿಲ್ಲ" ಎಂದು ರೋಹಿತ್ ಶರ್ಮಾ ಹೇಳಿಕೆ ನೀಡಿದ್ದಾರೆ.
"ಮೊದಲ ಪಂದ್ಯದಲ್ಲಿ ಒತ್ತಡದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಇಶಾನ್ ಕಿಶನ್ ಅವರಿಂದ ಅದ್ಭುತವಾದ ಪ್ರದರ್ಶನ ಬಂದಿತ್ತು. ನಾವು ಉತ್ತಮ ಸ್ಥಿತಿಯಲ್ಲಿದ್ದೆವು. ಇಂದು ನಮ್ಮ ಬೌಲಿಂಗ್ ಪರವಾಗಿರಲಿಲ್ಲ, ಆದರೆ ಫೀಲ್ಡಿಂಗ್ ಮಾತ್ರ ಕಳಪೆಯಾಗಿತ್ತು" ಎಂದು ರೋಹಿತ್ ಶರ್ಮಾ ತಮ್ಮ ಅನಿಸಿಕೆಯನ್ನು ನೇರವಾಗಿ ಹಂಚಿಕೊಂಡಿದ್ದಾರೆ.
ಸೋಮವಾರ ನಡೆದ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ್ದ ನೇಪಾಳ ತಂಡ 48.2 ಓವರ್‌ಗಳಲ್ಲಿ 230 ರನ್‌ಗಳನ್ನು ಗಳಿಸಿ ಆಲೌಟ್ ಆಗಿತ್ತು. ನಂತರ ಮಳೆಯಿಂದಾಗಿ ಡಕ್ವರ್ತ್ ಲೂಯೀಸ್ ನಿಯಮದಲ್ಲಿ ಭಾರತಕ್ಕೆ ಗೆಲ್ಲಲು 23 ಓವರ್‌ಗಳಲ್ಲಿ 145 ರನ್‌ಗಳನ್ನು ನಿಗದಿಪಡಿಸಲಾಗಿತ್ತು. ಆದರೆ ಭಾರತ ಇದನ್ನು ಕೇವಲ 20.1 ಓವರ್‌ನಲ್ಲಿ ಒಂದೂ ವಿಕೆಟ್ ಕಳೆದುಕೊಳ್ಳದೆ ಮೀರಿ ನಿಂತಿತ್ತು. ಆರಂಬಿಕರಾದ ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಅಮೋಘ ಆಟವನ್ನು ಪ್ರದರ್ಶಿಸಿ ತಂಡದ ಬೃಹತ್ ಗೆಲುವಿಗೆ ಕಾರಣವಾದರು. ರೋಹಿತ್ ಶರ್ಮಾ 74 ರನ್‌ಗಳಿಸಿದ್ದರೆ ಶುಬ್ಮನ್ ಗಿಲ್ 67 ರನ್‌ಗಳನ್ನು ಕಲೆಹಾಕಿದ್ದರು.
ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಬೆಂಚ್: ಸೂರ್ಯಕುಮಾರ್ ಯಾದವ್, ಅಕ್ಷರ್ ಪಟೇಲ್, ಪ್ರಸಿದ್ಧ್ ಕೃಷ್ಣ, ತಿಲಕ್ ವರ್ಮಾ
ನೇಪಾಳ: ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್ ಕೀಪರ್), ರೋಹಿತ್ ಪೌಡೆಲ್ (ನಾಯಕ), ಭೀಮ್ ಶರ್ಕಿ, ಸೋಂಪಾಲ್ ಕಾಮಿ, ಗುಲ್ಸನ್ ಝಾ, ದೀಪೇಂದ್ರ ಸಿಂಗ್ ಐರಿ, ಕುಶಾಲ್ ಮಲ್ಲಾ, ಸಂದೀಪ್ ಲಮಿಚಾನೆ, ಕರಣ್ ಕೆಸಿ, ಲಲಿತ್ ರಾಜಬನ್ಶಿ
ಪೀಠ: ಕಿಶೋರ್ ಮಹತೋ, ಸಂದೀಪ್ ಜೋರಾ, ಪ್ರತಿಸ್ ಜಿಸಿ, ಅರ್ಜುನ್ ಸೌದ್, ಮೌಸಮ್ ಧಕಲ್, ಆರಿಫ್ ಶೇಖ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications