Asia Cup 2023: ಐದು ದೊಡ್ಡ ದಾಖಲೆ ಮೇಲೆ ರೋಹಿತ್ ಶರ್ಮಾ ಕಣ್ಣು
ಆಗಸ್ಟ್ 30ರಿಂದ ಏಷ್ಯಾಕಪ್ 2023ರ ಪಂದ್ಯಾವಳಿ ಆರಂಭವಾಗಲಿದೆ. ಟೀಂ ಇಂಡಿಯಾ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಈ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಜಸ್ಪ್ರಿತ್ ಬುಮ್ರಾ ತಂಡಕ್ಕೆ ವಾಪಸಾಗಿದ್ದಾರೆ.
ನಾಯಕ ರೋಹಿತ್ ಶರ್ಮಾ ಈ ಬಾರಿ ಭರ್ಜರಿ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ತಮ್ಮ ಧಮಾಕೆದಾರ್ ಬ್ಯಾಟಿಂಗ್ ಪ್ರದರ್ಶನದ ಬಲದಿಂದ ರೋಹಿತ್, ಮೈದಾನದಲ್ಲಿ ರನ್‌ಗಳನ್ನು ಕಲೆ ಹಾಕಿ ಮಿಂಚಿದ್ದಾರೆ. ಅಲ್ಲದೆ ಹಲವು ಬಾರಿ ಬಿಗ್ ಇನಿಂಗ್ಸ್ ಕಟ್ಟಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಒಟ್ಟು ಮೂರು ಬಾರಿ ಡಬಲ್ ಸೆಂಚುರಿ ಸಾಧನೆ ಮಾಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಟೀಮ್ ಇಂಡಿಯಾ ಏಷ್ಯಾ ಕಪ್‌ನಲ್ಲಿ ತನ್ನ ಶಕ್ತಿ ಪ್ರದರ್ಶನ ನೀಡಲಿದೆ. ಈ ವೇಳೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಹ ಐದು ದೊಡ್ಡ ದಾಖಲೆ ಮಾಡುವ ಪ್ಲ್ಯಾನ್ ಹಾಕಿಕೊಂಡಿದ್ದಾರೆ.
5 ದಾಖಲೆ ನಿರ್ಮಿಸಲು ಸಜ್ಜಾದ ರೋಹಿತ್
ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡ ಸೆಪ್ಟೆಂಬರ್ 2 ರಂದು ಪಾಕಿಸ್ತಾನ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಏಷ್ಯಾ ಕಪ್ ಟೂರ್ನಿಗೆ ಅಭಿಮಾನಿಗಳು ಕಾಯುತ್ತಿದ್ದು, ಟೀಮ್ ಇಂಡಿಯಾ ಕಪ್ ಗೆಲ್ಲುವ ನೆಚ್ಚಿನ ತಂಡ. ಈ ಬಾರಿ ಏಕದಿನ ವಿಶ್ವಕಪ್ ಭಾರತದಲ್ಲೇ ನಡೆಯಲಿದ್ದು, ಏಷ್ಯಾ ಕಪ್ ಮಹತ್ವ ಪಡೆದಿದೆ.
ರೋಹಿತ್ ಶರ್ಮಾ 2008ರಿಂದ ಏಷ್ಯಾಕಪ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಏಷ್ಯಾಕಪ್ ನಲ್ಲಿ ರೋಹಿತ್ ಇದುವರೆಗೆ ಒಟ್ಟು 22 ಪಂದ್ಯಗಳನ್ನು ಆಡಿದ್ದಾರೆ. ಏಷ್ಯಾಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಕೀರ್ತಿ ಸಚಿನ್ ತೆಂಡುಲ್ಕರ್ ಅವರ ಹೆಸರಿನಲ್ಲಿದೆ. ಸಚಿನ್ 23 ಪಂದ್ಯಗಳನ್ನು ಆಡಿರುವ ದಾಖಲೆ ಹೊಂದಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಅಂಗಳಕ್ಕೆ ಇಳಿದಲ್ಲಿ ಈ ಸಾಧನೆಯನ್ನು ಸರಿ ಗಟ್ಟಬಹುದು.
ಏಷ್ಯಾಕಪ್‌ನಲ್ಲಿ ಇದುವರೆಗಿನ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದವರ ಪಟ್ಟಿಯಲ್ಲಿ ಶಾಹಿದ್ ಅಫ್ರಿದಿಗೆ ಮೊದಲ ಸ್ಥಾನ. ಪಾಕ್‌ನ ಸ್ಟಾರ್ ಆಟಗಾರ ಟೂರ್ನಿಯಲ್ಲಿ ಒಟ್ಟು 26 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಟೀಮ್ ಇಂಡಿಯಾದ ಹಿಟ್ ಮ್ಯಾನ್ ಸದ್ಯ ಟೂರ್ನಿಯಲ್ಲಿ 17 ಸಿಕ್ಸರ್ ಸಿಡಿಸಿದ್ದಾರೆ. ಇನ್ನು 10 ಸಿಕ್ಸರ್‌ಗಳನ್ನು ಬಾರಿಸಿದಲ್ಲಿ ಅಫ್ರಿದಿ ದಾಖಲೆ ಅಳಿಸಿ ಹಾಕಬಹುದು.
ಏಷ್ಯಾಕಪ್ ಇತಿಹಾಸದಲ್ಲಿ ಇದುವರೆಗೆ ಕೇವಲ 2 ಬ್ಯಾಟ್ಸ್‌ಮನ್‌ಗಳು ಮಾತ್ರ 1000 ರನ್ ಗಡಿ ದಾಟುವಲ್ಲಿ ಯಶಸ್ವಿಯಾಗಿದ್ದಾರೆ. ಇದರಲ್ಲಿ ಒಬ್ಬರು ಶ್ರೀಲಂಕಾದ ಕುಮಾರ್ ಸಂಗಕ್ಕಾರ ಮತ್ತು ಇನ್ನೊಬ್ಬರು ಸನತ್ ಜಯಸೂರ್ಯ. ಮುಂಬರುವ ಟೂರ್ನಿಯಲ್ಲಿ ರೋಹಿತ್‌ಗೆ ಈ ಸಾಧನೆ ಮಾಡುವ ಅವಕಾಶವಿದೆ. ಏಷ್ಯಾಕಪ್ ನಲ್ಲಿ ರೋಹಿತ್ ಇದುವರೆಗೆ 745 ರನ್ ಗಳಿಸಿದ್ದಾರೆ.
ಇನ್ನು ರೋಹಿತ್ ಶರ್ಮಾ ಏಷ್ಯಾಕಪ್ ಟೂರ್ನಿಯನ್ನು ಅವಿಸ್ಮರಣೀಯವಾಗಿಸುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ನಾಯಕ ರೋಹಿತ್ ಏಷ್ಯಾಕಪ್‌ನಲ್ಲಿ ತಮ್ಮ ಏಕದಿನ ವೃತ್ತಿಜೀವನದಲ್ಲಿ 10,000 ರನ್‌ಗಳ ಪೂರೈಸಬಹುದು. ಈ ಸಾಧನೆಯನ್ನು ಮಾಡಲು ರೋಹಿತ್‌ಗೆ ಇನ್ನು 163 ರನ್‌ಗಳ ಅವಶ್ಯಕತೆ ಇದೆ. ಸದ್ಯ ರೋಹಿತ್ 244 ಪಂದ್ಯಗಳಲ್ಲಿ 9837 ರನ್ ಗಳಿಸಿದ್ದಾರೆ. ರೋಹಿತ್ ಈ ಸಾಧನೆ ಮಾಡಿದರೆ, ಸಚಿನ್, ದ್ರಾವಿಡ್, ಗಂಗೂಲಿ, ಧೋನಿ ಮತ್ತು ಕೊಹ್ಲಿ ನಂತರ ಆರನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ರೋಹಿತ್ ಶರ್ಮಾ ಅವರಿಗೆ ಸಿಕ್ಸರ್ ಬಾರಿಸುವುದು ನೀರು ಕುಡಿದಷ್ಟೇ ಸುಲಭ. ಒಂದು ವೇಳೆ ರೋಹಿತ್ ಕ್ರಿಸ್‌ಗೆ ಕಚ್ಚಿ ನಿಂತು ಬಿಟ್ಟಿದ್ದೇ ಆದಲ್ಲಿ, ಸಿಕ್ಸರ್‌ಗಳ ಸುರಿಮಳೆ ಫಿಕ್ಸ್. ರೋಹಿತ್ ವಿಶ್ವ ಕ್ರಿಕೆಟ್‌ನಲ್ಲಿ ಒಟ್ಟು 534 ಸಿಕ್ಸರ್‌ಗಳನ್ನು ಹೊಂದಿದ್ದಾರೆ. ಒಟ್ಟು 553 ಸಿಕ್ಸರ್ ಸಿಡಿಸಿರುವ ಕ್ರಿಸ್ ಗೇಲ್ ಹೆಸರಿನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ದಾಖಲೆ ಇದೆ. ಈ ದಾಖಲೆಯ ಮೇಲೂ ರೋಹಿತ್ ಕಣ್ಣು ನೆಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications