For Quick Alerts
ALLOW NOTIFICATIONS  
For Daily Alerts
 

Asia Cup 2023 Super 4: ತೌಹಿದ್ ಹೃದೋಯ್ ಹೋರಾಟ ವ್ಯರ್ಥ; ಬಾಂಗ್ಲಾ ವಿರುದ್ಧ ಲಂಕಾಗೆ ಭರ್ಜರಿ ಗೆಲುವು

ಶನಿವಾರ, ಸೆಪ್ಟೆಂಬರ್ 9ರಂದು ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ 2023ರ ಏಷ್ಯಾ ಕಪ್ ಪಂದ್ಯಾವಳಿಯ ಎರಡನೇ ಸೂಪರ್ 4 ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡವು ಬಾಂಗ್ಲಾದೇಶ ತಂಡದ ವಿರುದ್ಧ ಅಮೋಘ ಗೆಲುವು ದಾಖಲಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಸದೀರ್ ಸಮರವಿಕ್ರಮ ಮತ್ತು ಕುಸಾಲ್ ಮೆಂಡೀಸ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 257 ರನ್ ಗಳಿಸಿತ್ತು.

Asia Cup 2023: Sri Lanka Beat Bangladesh By 21 Runs In Super 4 Match

ಇನ್ನು 258 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ 48.1 ಓವರ್‌ಗಳಲ್ಲಿ 236 ರನ್‌ಗಳಿಗೆ ಆಲೌಟ್ ಆಗಿ ಸೋಲು ಕಂಡಿತು. ಈ ಹಾದಿಯಲ್ಲಿ ತೌಹಿದ್ ಹೃದೋಯ್ ಅವರ ಕೆಚ್ಚೆದೆಯ ಹೋರಾಟವು ವ್ಯರ್ಥವಾಯಿತು.

ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡದ ಆರಂಭಿಕರಾದ ಪಾಥುಮ್ ನಿಸ್ಸಾಂಕ 60 ಎಸೆತಗಳಲ್ಲಿ 5 ಬೌಂಡರಿ ಸಮೇತ 40 ರನ್ ಗಳಿಸಿದರೆ, ದಿಮುತ್ ಕರುಣಾರತ್ನೆ 17 ಎಸೆತಗಳಲ್ಲಿ 3 ಬೌಂಡರಿ ಮೂಲಕ 18 ರನ್ ಗಳಿಸಿದರು.

ನಂತರ ಬಂದ ಕುಸಾಲ್ ಮೆಂಡೀಸ್ 73 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 50 ರನ್ ಗಳಿಸಿದರೆ, ಸದೀರ್ ಸಮರವಿಕ್ರಮ 72 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಾಯದಿಂದ ಬಿರುಸಿನ 93 ರನ್ ಬಾರಿಸಿದರು.

Asia Cup 2023: Sri Lanka Beat Bangladesh By 21 Runs In Super 4 Match

ಚರಿತ್ ಅಸಲಂಕ 10 ರನ್, ಧನಂಜಯ್ ಡಿ ಸಿಲ್ವಾ 6 ರನ್, ದಸುನ್ ಶನಕ 24 ರನ್, ದುನಿತ್ ವೆಲ್ಲಾಲಗೆ 3 ರನ್ ಗಳಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.

ಬೌಲಿಂಗ್‌ನಲ್ಲಿ ಬಾಂಗ್ಲಾದೇಶ ತಂಡದ ಪರ ತಸ್ಕಿನ್ ಅಹ್ಮದ್ 10 ಓವರ್‌ಗಳಲ್ಲಿ 60 ರನ್ ನೀಡಿ 3 ವಿಕೆಟ್ ಪಡೆದರೆ, ಹಸನ್ ಮಹ್ಮುದ್ 9 ಓವರ್‌ಗಳಲ್ಲಿ 57 ರನ್ ನೀಡಿ 3 ವಿಕೆಟ್ ಕಬಳಿಸಿದರು. ಉಳಿದಂತೆ ಶೋರಿಫುಲ್ ಇಸ್ಲಾಂ 2 ವಿಕೆಟ್ ಪಡೆದರು.

ಇನ್ನು ಶ್ರೀಲಂಕಾ ನೀಡಿದ್ದ 258 ರನ್‌ಗಳ ಗುರಿ ಚೇಸ್ ಮಾಡಿದ ಬಾಂಗ್ಲಾದೇಶ ತಂಡದ ಪರ ಆರಂಭಿಕರಾದ ಮೊಹಮ್ಮದ್ ನಯಿಮ್ 21 ರನ್ ಮತ್ತು ಮೆಹಿದಿ ಹಸನ್ ಮಿರಾಜ್ 28 ರನ್ ಗಳಿಸಿ ಮೊದಲ ವಿಕೆಟ್‌ಗೆ 55 ರನ್‌ಗಳ ಜೊತೆಯಾಟ ನೀಡಿದರು.

ಬಳಿಕ ಬಂದ ಲಿಟ್ಟನ್ ದಾಸ್ 15 ರನ್, ನಾಯಕ ಶಕೀಬ್ ಅಲ್ ಹಸನ್ 3 ರನ್, ಮುಶ್ಫಿಕರ್ ರಹೀಮ್ 29 ರನ್ ಗಳಿಸಿದರೆ, ತೌಹಿದ್ ಹೃದೋಯ್ 97 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 82 ರನ್ ಬಾರಿಸಿದರು. ಆದರೆ ಗೆಲುವಿನ ದಡ ಸೇರಿಸಲು ವಿಫಲರಾದರು.

ಉಳಿದಂತೆ ಶಮೀಮ್ ಹೊಸೈನ್ 5 ರನ್, ನಸುಮ್ ಅಹ್ಮದ್ 15 ರನ್, ತಸ್ಕಿನ್ ಅಹ್ಮದ್ 1 ರನ್, ಶೋರಿಫುಲ್ ಇಸ್ಲಾಂ 7 ರನ್, ಹಸನ್ ಮಹಮೂದ್ 10 ರನ್ ಗಳಿಸಿದರು.

ಶ್ರೀಲಂಕಾ ತಂಡದ ಪರ ಬೌಲಿಂಗ್‌ನಲ್ಲಿ ಮಹೀಶ್ ತೀಕ್ಷಣ 9 ಓವರ್‌ಗಳಲ್ಲಿ 69 ರನ್ ನೀಡಿ 3 ವಿಕೆಟ್ ಪಡೆದರೆ, ನಾಯಕ ದಸುನ್ ಶನಕ 9 ಓವರ್‌ಗಳಲ್ಲಿ 28 ರನ್‌ಗೆ 3 ಪಡೆದರು. ಇನ್ನು ಮತೀಶ್ ಪತಿರಾಣ 9.1 ಓವರ್‌ಗಳಲ್ಲಿ 58 ರನ್ ನೀಡಿ 3 ಕಬಳಿಸಿದರೆ, ಉಳಿದಂತೆ ದುನಿತ್ ವೆಲ್ಲಾಲಗೆ 1 ವಿಕೆಟ್ ಕಬಳಿಸಿದರು.

Story first published: Saturday, September 9, 2023, 23:20 [IST]
Other articles published on Sep 9, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+