Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asia cup match 2: ಶಂಟೋ ಏಕಾಂಗಿ ಹೋರಾಟ: ಶ್ರೀಲಂಕಾಗೆ ಸುಲಭ ಸವಾಲು ನೀಡಿದ ಬಾಂಗ್ಲಾದೇಶ

ಏಷ್ಯಾಕಪ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಶ್ರೀಲಂಕಾದ ಬೌಲಿಂಗ್ ದಾಳಿಗೆ ಬಾಂಗ್ಲಾದೇಶ ಬ್ಯಾಟಿಂಗ್ ವಿಭಾಗ ತತ್ತರಿಸಿದೆ. ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ನಾಯಕ ಶಕೀಬ್ ಅಲ್ ಹಸನ್ ನಿರ್ಧಾರವನ್ನು ಸಮರ್ಥನೆ ಮಾಡಿಕೊಳ್ಳುವಂತೆ ಪ್ರದರ್ಶನ ನೀಡಲು ವಿಫಲವಾಯಿತು. ನಜ್ಮುಲ್ ಹುಸೇನ್ ಶಂಟೋ ಮಾತ್ರವೇ ಲಂಕಾ ದಾಳಿಗೆ ಪ್ರತ್ಯುತ್ತರ ನೀಡಲು ಸಮರ್ಥವಾಗಿದ್ದರು.

ಆರಂಭದಿಂದಲೇ ಹಿನ್ನಡೆ ಅನುಭವಿಸಿದ ಬಾಂಗ್ಲಾದೇಶ ತಂಡ ಬ್ಯಾಟಿಂಗ್‌ನಲ್ಲಿ ಹಿನ್ನಡೆ ಕಂಡಿತ್ತು. ಆದರೆ ಮೂರನೇ ಕ್ರಮಾಂಕದ ಆಟಗಾರ ನಜ್ಮುಲ್ ಹುಸೇನ್ ಶಂಟೋ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದರು. ಉಳಿದಂತೆ ಯಾವ ಬ್ಯಾಟರ್ ಕೂಡ ಉತ್ತಮ ಪ್ರದರ್ಶನ ನೀಡಲು ಸಫಲವಾಗಲಿಲ್ಲ. 122 ಎಸೆತಗಳನ್ನು ಎದುರಿಸಿದ ಶಂಟೋ 89 ರನ್‌ಗಳನ್ನು ಗಳಿಸಿದರು. ಹೀಗಾಗಿ 164 ರನ್‌ಗಳಿಸಿ ಬಾಂಗ್ಲಾದೇಶ ಆಲೌಟ್ ಆಯಿತು.

Asia Cup 2023: Sri Lanka need 165 runs to wins against Bangladesh

ಶ್ರೀಲಂಕಾ ತಂಡದ ಪರವಾಗಿ ಬೌಲಿಂಗ್‌ನಲ್ಲಿ ಮಿಂಚಿದ್ದು ಮತೀಶ ಪತಿರಣ. ಬಾಂಗ್ಲಾ ಪಡೆಗೆ ನಾಲ್ಕು ವಿಕೆಟ್ ಕಬಳಿಸಿ ಆಘಾತ ನೀಡಿದ್ದರು. ಉಳಿದಂತೆ ಮತೀಶ ಪತಿರಣ ಎರಡು ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ಮೂಲಕ ಬಾಂಗ್ಲಾದೇಶ ತಂಡವನ್ನು 42.2 ಓವರ್‌ಗಳಲ್ಲಿ ಕಟ್ಟಿಹಾಕಲು ಶ್ರೀಲಂಕಾ ಯಶಸ್ವಿಯಾಗಿದೆ.

ಬಾಂಗ್ಲಾದೇಶ ಆಡುವ ಬಳಗ: ಮೊಹಮ್ಮದ್ ನಯಿಮ್, ತಂಝಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ತೌಹಿದ್ ಹೃದಯೋಯ್, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ಮಹೇದಿ ಹಸನ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರೆಹಮಾನ್
ಬೆಂಚ್: ಹಸನ್ ಮಹಮೂದ್, ಅಫೀಫ್ ಹೊಸೈನ್, ಅನಾಮುಲ್ ಹಕ್, ನಸುಮ್ ಅಹ್ಮದ್, ಶಮೀಮ್ ಹೊಸೈನ್, ತಂಝಿಮ್ ಹಸನ್ ಸಾಕಿಬ್

ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೇಶ್ ತೀಕ್ಷಣ, ಕಸುನ್ ರಜಿತ, ಮತೀಶ ಪತಿರಣ
ಬೆಂಚ್: ದುಶನ್ ಹೇಮಂತ, ಕುಸಲ್ ಪೆರೇರಾ, ಪ್ರಮೋದ್ ಮದುಶನ್, ಬಿನೂರ ಫೆರ್ನಾಂಡೋ

Story first published: Thursday, August 31, 2023, 19:44 [IST]
Other articles published on Aug 31, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+