Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asia Cup 2023: ಸೂಪರ್ 4 ಪಂದ್ಯಗಳ ಸ್ಥಳ ಬದಲಾವಣೆ: ಈ ಕ್ರೀಡಾಂಗಣದಲ್ಲಿ ನಡೆಯಲಿವೆ ಪಂದ್ಯಗಳು!

ಶ್ರೀಲಂಕಾದಲ್ಲಿ ನಡೆಯುತ್ತಿರುವ ಏಷ್ಯಾಕಪ್ 2023ರ ಪಂದ್ಯಗಳು ಮಳೆಯಿಂದ ರದ್ದಾಗುತ್ತಿದ್ದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ)ನ ತಲೆಬಿಸಿ ಹೆಚ್ಚಿಸಿವೆ. ಇದರಿಂದಾಗಿ ಸೂಪರ್ 4 ಹಂತದ ಪಂದ್ಯಗಳ ಸ್ಥಳ ಬದಲಾವಣೆ ಮಾಡಲು ಚಿಂತನೆ ನಡೆಸಿದೆ.

ಮೂಲಗಳ ಪ್ರಕಾರ ಕೊಲಂಬೊದಲ್ಲಿ ನಡೆಯಲಿರುವ ಸೂಪರ್ 4 ಹಂತದ ಪಂದ್ಯಗಳನ್ನು ಡಂಬುಲಾಗೆ ಸ್ಥಳಾಂತರಿಸುವ ಸಾಧ್ಯತೆ ಇದೆ. ಶನಿವಾರ ನಡೆದ ಬಹು ನಿರೀಕ್ಷಿತ ಭಾರತ - ಪಾಕಿಸ್ತಾನ ಪಂದ್ಯ ಕೂಡ ಮಳೆಯಿಂದ ರದ್ದಾಗಿತ್ತು. ಇದು ಅಭಿಮಾನಿಗಳಲ್ಲಿ ಭಾರಿ ನಿರಾಸೆ ಉಂಟುಮಾಡಿತ್ತು.

Asia Cup 2023

ಭಾರತ-ಪಾಕಿಸ್ತಾನ ಪಂದ್ಯ ರದ್ದಾದರೆ ಎಸಿಸಿ ಕೂಡ ಆರ್ಥಿಕವಾಗಿ ನಷ್ಟ ಅನುಭವಿಸಲಿದೆ. ಸೂಪರ್ 4 ಹಂತದಲ್ಲಿ ಭಾರತ ಪಾಕಿಸ್ತಾನ ಮತ್ತೆ ಮುಖಾಮುಖಿಯಾಗುವುದು ಬಹುತೇಕ ಖಚಿತವಾಗಿದೆ. ಎರಡೂ ತಂಡಗಳು ಫೈನಲ್ ತಲುಪಿದರೆ ಮೂರನೇ ಬಾರಿ ಮುಖಾಮುಖಿಯಾಗಲಿವೆ. ಪಾಕಿಸ್ತಾನ ಈಗಾಗಲೇ ಸೂಪರ್ 4 ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ. ಭಾರತ ಸೋಮವಾರ ನಡೆಯಲಿರುವ ನೇಪಾಳ ವಿರುದ್ಧದ ಪಂದ್ಯದಲ್ಲಿ ಗೆದ್ದರೂ, ಪಂದ್ಯ ರದ್ದಾದರೂ ಸೂಪರ್ 4 ಹಂತಕ್ಕೆ ಪ್ರವೇಶ ಪಡೆಯಲಿದೆ.

ಸೆಪ್ಟೆಂಬರ್ 6ರಿಂದ ಸೂಪರ್ 4 ಪಂದ್ಯಗಳು

ಸದ್ಯ ಏಷ್ಯಾಕಪ್‌ನ ಲೀಗ್ ಹಂತದ ಪಂದ್ಯಗಳು ನಡೆಯುತ್ತಿದ್ದು ಸೆಪ್ಟೆಂಬರ್ 6ರಿಂದ ಸೂಪರ್ 4 ಹಂತದ ಪಂದ್ಯಗಳು ಶುರುವಾಗಲಿವೆ. ಸೆಪ್ಟೆಂಬರ್ 6ರಂದು ನಡೆಯುವ ಸೂಪರ್ 4 ಪಂದ್ಯ ಲಾಹೋರ್ ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪಾಕಿಸ್ತಾನ ಬಿ2 ತಂಡದ ವಿರುದ್ಧ ಸೆಣೆಸಲಿದೆ.

ಸೂಪರ್ 4 ಹಂತದ ಎರಡನೇ ಪಂದ್ಯ ಸೆಪ್ಟೆಂಬರ್ 9ರಂದು ಕೊಲಂಬೋದಲ್ಲಿ ನಡೆಯಲಿದೆ. ಸೂಪರ್ 4 ಪಂದ್ಯಗಳ ವೇಳೆಗೆ ಕೊಲಂಬೋದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವ ಕಾರಣ ಕೊಲಂಬೋದಿಂದ ದಂಬುಲಾ ಅಥವಾ ಪಲ್ಲೆಕೆಲೆಗೆ ಸ್ಥಳಾಂತರಿಸುವ ಸಾಧ್ಯತೆ ಇದೆ.

ಮೊದಲೇ ಮಾಹಿತಿ ನೀಡಿದ್ದ ಶ್ರೀಲಂಕಾ ಕ್ರಿಕೆಟ್ ಮಂಡಳಿ

ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿನ ಹವಾಮಾನ ಪರಿಸ್ಥಿತಿಯ ಬಗ್ಗೆ ತಂಡಗಳಿಗೆ ತಿಳಿಸಲಾಗಿದೆ ಪಲ್ಲೆಕೆಲೆ ಮತ್ತು ದಂಬುಲಾ ಕ್ರೀಡಾಂಗಣಗಳಿಗೆ ಪಂದ್ಯ ಸ್ಥಳಾಂತರಿಸಲು ಯೋಜಿಸಲಾಗುತ್ತಿದೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿ ಈ ಮೊದಲೇ ಇಲ್ಲಿನ ಹವಾಮಾನ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿತ್ತು ಎಂದು ಹೇಳಲಾಗಿದೆ. ಕೊಲಂಬೋ ಬದಲು ದಂಬುಲಾದಲ್ಲಿ ಪಂದ್ಯಗಳನ್ನು ಆಯೋಜಿಸಲು ಸಲಹೆ ನೀಡಿತ್ತು, ಇದು ದೇಶದ ಮಧ್ಯಭಾಗದಲ್ಲಿ ಮಳೆ ಪ್ರಮಾಣ ಕೂಡ ಕಡಿಮೆ ಇದ್ದ ಕಾರಣ ಈ ಸಲಹೆ ನೀಡಿತ್ತು.

ಆದರೆ, ದಂಬುಲಾಗೆ ಸೂಕ್ತ ಪ್ರಯಾಣದ ವ್ಯವಸ್ಥೆ ಇಲ್ಲದ ಕಾರಣ, ಕೊಲಂಬೋದಲ್ಲೇ ವಿಮಾನ ನಿಲ್ದಾಣ ಇದ್ದ ಕಾರಣ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಕೊಲಂಬೋ ಮತ್ತು ಪಲ್ಲೆಕೆಲೆಯಲ್ಲಿ ಪಂದ್ಯಗಳನ್ನು ಆಯೋಜನೆ ಮಾಡಿತ್ತು.

ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ

ಹೈಬ್ರಿಡ್ ಮಾದರಿಯಲ್ಲಿ ಏಷ್ಯಾಕಪ್ 2023ರ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನೇಪಾಳ ಮುಖಾಮುಖಿಯಾಗಿದ್ದವು, ಪಾಕಿಸ್ತಾನದ ಮುಲ್ತಾನ್‌ನಲ್ಲಿ ಈ ಪಂದ್ಯ ನಡೆದಿತ್ತು. ಪಾಕಿಸ್ತಾನದಲ್ಲಿ 4 ಪಂದ್ಯಗಳು ನಡೆಯಲಿದ್ದು, ಶ್ರೀಲಂಕಾದಲ್ಲಿ 9 ಪಂದ್ಯಗಳು ನಡೆಯಲಿವೆ.

Story first published: Sunday, September 3, 2023, 20:29 [IST]
Other articles published on Sep 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+