Asia Cup 2023: ರೋಹಿತ್ ಶರ್ಮಾಗೆ ದೊಡ್ಡ ಚಿಂತೆಯಾದ 'ಆ ಸ್ಥಾನ'!
2023ರ ಏಷ್ಯಾಕಪ್‌ಗಾಗಿ ಘೋಷಿಸಲಾದ 17 ಸದಸ್ಯರ ಭಾರತ ತಂಡದಲ್ಲಿ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ತಂಡಕ್ಕೆ ಮರಳಿದ್ದು, ಬ್ಯಾಟಿಂಗ್ ವಿಭಾಗಕ್ಕೆ ಬೂಸ್ಟ್ ನೀಡಿದಂತಾಗಿದೆ. ಇದೇ ವೇಳೆ ಎಡಗೈ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ಇಶಾನ್ ಕಿಶನ್ ಕೂಡ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಟೂರ್ನಿಯ ಮೊದಲ ಕೆಲವು ಪಂದ್ಯಗಳಲ್ಲಿ ಫಿಟ್‌ನೆಸ್ ಕೊರತೆಯಿಂದಾಗಿ ಲೋಕೇಶ್ ರಾಹುಲ್ ಆಡುತ್ತಿಲ್ಲ.
ಇಂತಹ ಪರಿಸ್ಥಿತಿಯಲ್ಲಿ, ಇಶಾನ್ ಕಿಶನ್ ಪ್ಲೇಯಿಂಗ್ 11 ರಲ್ಲಿ ಅವಕಾಶ ಪಡೆಯುವುದು ಖಚಿತ. ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಸೆಪ್ಟಂಬರ್ 2 ರಂದು ನಡೆಯುವ ಪಂದ್ಯದಲ್ಲಿ ಇಶಾನ್ ಆಡಲಿದ್ದಾರೆ. ತಂಡದ ರಚನೆ ಮೇಲ್ನೋಟಕ್ಕಂತೂ ಸೂಪರ್ ಆಗಿ ಕಾಣುತ್ತಿದೆ. ಆದರೆ ನಾಯಕನಿಗೆ ಚಿಂತೆ ಹೆಚ್ಚಿದೆ. ಟೀಮ್ ನಲ್ಲಿ ಸ್ಪೇಷಲಿಸ್ಟ್ ಆರಂಭಿಕರಾಗಿ ಇಬ್ಬರು ಕಾಣಿಸಿಕೊಳ್ಳಲಿದ್ದಾರೆ.

ಇಬ್ಬರೂ ಏಷ್ಯಾಕಪ್‌ಗೆ ಪ್ರಕಟವಾದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಉಭಯ ಆಟಗಾರರು ಮೊದಲ ಪಂದ್ಯದಲ್ಲಿ ಕಣಕ್ಕೆ ಇಳಿಯುವುದು ಫಿಕ್ಸ್. ಹೀಗಾಗಿ ಯಾವ ಆಟಗಾರನಿಗೆ ತನ್ನ ಜೊತೆ ಕ್ರೀಸ್‌ಗೆ ಕರೆದುಕೊಂಡು ಹೋಗಬೇಕು ಎಂಬ ಪ್ರಶ್ನೆ ರೋಹಿತ್ ಅವರನ್ನು ಕಾಡುತ್ತಿದೆ.
ಇದಕ್ಕೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಆರಂಭವಾಗಿರುವ ಏಷ್ಯಾಕಪ್ ತಯಾರಿ ಶಿಬಿರದಲ್ಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಉತ್ತರ ಕಂಡುಕೊಳ್ಳಲು ಖಂಡಿತವಾಗಿಯೂ ಪ್ರಯತ್ನಿಸುತ್ತಾರೆ. ರೋಹಿತ್ ಜೊತೆ ಶುಭಮನ್ ಗಿಲ್ ಇನ್ನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತ. ಇಲ್ಲಿಯವರೆಗೆ ಏಕದಿನ ಮಾದರಿಯಲ್ಲಿ 23 ಇನ್ನಿಂಗ್ಸ್‌ಗಳಲ್ಲಿ ಆರಂಭಿಕರಾಗಿ ಗಿಲ್ ಆಡಿದ್ದಾರೆ.
ಹೈದರಾಬಾದ್‌ನಲ್ಲಿ ಕಿವೀಸ್ ವಿರುದ್ಧ ಡಬಲ್ ಸೆಂಚುರಿ
ಮತ್ತು ಇದರಲ್ಲಿ ಅವರು 66.21 ಸರಾಸರಿಯಲ್ಲಿ 1258 ರನ್ ಗಳಿಸಿದ್ದಾರೆ. ಪ್ರಸಕ್ತ ವರ್ಷ ಭರ್ಜರಿ ಫಾರ್ಮ್‌ನಲ್ಲಿರುವ ಶುಭಮನ್ ಗಿಲ್ ತವರಿನಲ್ಲಿ ನಡೆದ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ವಿರುದ್ಧ ರನ್ ಮಳೆ ಸುರಿಸಿದ್ದರು. ಅಲ್ಲದೆ ಹೈದರಾಬಾದ್‌ನಲ್ಲಿ ಕಿವೀಸ್ ವಿರುದ್ಧ ಡಬಲ್ ಸೆಂಚುರಿ ಬಾರಿಸಿ ಅಬ್ಬರಿಸಿದ್ದರು. ಈ ಅಂಕಿ ಅಂಶಗಳನ್ನು ನೋಡಿದರೆ ಗಿಲ್‌ಗೆ ಅವಕಾಶ ನೀಡುವುದು ಬಹುತೇಕ ಖಚಿತ.
ಆರಂಭಿಕ ಬ್ಯಾಟ್ಸ್‌ಮನ್ ಆಗಿ ಆಡುವ ಅವಕಾಶ
ಗಿಲ್ ಅವರ ಬ್ಯಾಟ್ ದ್ವಿಶತಕ ಸೇರಿದಂತೆ 3 ಶತಕ ಮತ್ತು 6 ಅರ್ಧಶತಕಗಳ ಇನ್ನಿಂಗ್ಸ್‌ಗಳನ್ನು ಸಹ ಕಂಡಿದೆ. ಇಶಾನ್ ಕಿಶನ್ ಗೆ ಹೋಲಿಸಿದರೆ ಗಿಲ್ ತಾಂತ್ರಿಕವಾಗಿ ಸಮರ್ಥವಾಗಿ ಕಾಣುತ್ತಾರೆ. ಏಕದಿನದಲ್ಲಿ ಗಿಲ್ ಅವರ ಸರಾಸರಿ 68.18 ಈ ವರ್ಷ ಕಂಡುಬಂದಿದೆ. ಇಶಾನ್ ಕಿಶನ್ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಆಡಿದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಆಡುವ ಅವಕಾಶ ಪಡೆದರು.
ಏಕದಿನದಲ್ಲಿ ಇಶಾನ್ ಅವರ ಗರಿಷ್ಠ ಸ್ಕೋರ್ 210 ರನ್
ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡ ಕಿಶನ್ 61.33ರ ಸರಾಸರಿಯಲ್ಲಿ ಒಟ್ಟು 184 ರನ್ ಗಳಿಸಿದರು. ಈ ವೇಳೆ ಅವರ ಬ್ಯಾಟ್‌ನಿಂದಲೂ 3 ಅರ್ಧಶತಕಗಳ ಇನ್ನಿಂಗ್ಸ್‌ಗಳು ಕಂಡುಬಂದವು. 25ರ ಹರೆಯದ ಕಿಶನ್ ಇದುವರೆಗೆ 17 ಪಂದ್ಯಗಳಲ್ಲಿ ಏಕದಿನ ಮಾದರಿಯಲ್ಲಿ 46.27ರ ಸರಾಸರಿಯಲ್ಲಿ 694 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 6 ಅರ್ಧಶತಕ ಸೇರಿವೆ. ಏಕದಿನದಲ್ಲಿ ಇಶಾನ್ ಅವರ ಗರಿಷ್ಠ ಸ್ಕೋರ್ 210 ರನ್. ಈ ಇಬ್ಬರಲ್ಲಿ ಯಾರಿಗೆ ಆರಂಭಿಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದೇ ದೊಡ್ಡ ಪ್ರಶ್ನೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications