For Quick Alerts
ALLOW NOTIFICATIONS  
For Daily Alerts
 

IND vs SL: ಸೂರ್ಯ ಪಡೆಗೆ ಸೂಪರ್ ಗೆಲುವು: ಪತನು ಶತಕ ವ್ಯರ್ಥ

ಕೊನೆಯ ವರೆಗೂ ರೋಚಕತೆ ಹುಟ್ಟಿಸಿದ್ದ ಪಂದ್ಯದಲ್ಲಿ ಗೆಲುವು ಯಾರ ಪರ ವಾಲುತ್ತದೆ ಎಂದು ನಿರ್ಣಯಿಸುವುದು ಕಷ್ಟವಾಗಿತ್ತು. ಉಭಯ ತಂಡಗಳು ನಿಗದಿತ ಓವರ್ಗಳಲ್ಲಿ ಸಮನಾದ ರನ್ ಬಾರಿಸಿದಾಗ ಪಂದ್ಯ ಸೂಪರ್ ಓವರ್ ನತ್ತ ಮುಖಮಾಡಿತು. ಸೂಪರ್ ಓವರ್ ನಲ್ಲಿ ಭಾರತದ ಅರ್ಷದೀಪ್ ಸಿಂಗ್ ನಡೆಸಿದ ಬಿಗುವಿನ ದಾಳಿಯಿಂದ ಲಂಕಾ ಕಂಗಾಲಾಯಿತು. ಪರಿಣಾಮ ಲಂಕಾ 3 ರನ್ ಗಳ ಗುರಿಯನ್ನು ಭಾರತಕ್ಕೆ ನೀಡಿತು. ಬ್ಲ್ಯೂ ಬಾಯ್ಸ್ ಈ ಗುರಿಯನ್ನು ಒಂದೇ ಎಸೆತದಲ್ಲಿ ಕಲೆ ಹಾಕಿತು.

ಭಾರತ ನೀಡಿದ್ದ ಸವಾಲಿನ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ತಂಡದ ಆರಂಭ ಕಳಪೆಯಾಗಿತ್ತು. 2ನೇ ವಿಕೆಟ್ ಗೆ ಪತನು ನಿಸಂಕ ಹಾಗೂ ಕುಸಾಲ್ ಪೆರೆರಾ ಜೋಡಿ ಟೀಮ್ ಇಂಡಿಯಾ ಬೌಲರ್ ಗಳನ್ನು ಕಾಡಿತು. ಈ ಜೋಡಿ ಲಂಕಾ ಡ್ರೆಸ್ಸಿಂಗ್ ರೂಮ್ ನಲ್ಲಿ ಕುಳಿತಿದ್ದ ಆಟಗಾರರ ಮುಖದಲ್ಲಿ ಮಂದಹಾಸ ಮೂಡಿಸಿತು. ಈ ಜೋಡಿ ಪವರ್ ಪ್ಲೇನಲ್ಲಿ 72 ರನ್ ಸೇರಿಸುವಲ್ಲಿ ಸಫಲವಾಯಿತು. ಪೆರೆರಾ ಹಾಗೂ ನಿಸ್ಸಂಕಾ ಜೋಡಿ 70 ಎಸೆತಗಳಲ್ಲಿ 127 ರನ್ ಸೇರಿಸಿತು.

Asia Cup Arshdeep s Super Over Heroics Seal Thrilling India Win Over Sri Lanka

ಕುಸಾಲ್ ಪೆರೆರಾ 8 ಬೌಂಡರಿ, 1 ಸಿಕ್ಸರ್ ನೆರವಿನಿಂದ 58 ರನ್ ಬಾರಿಸಿದರು. ಉಳಿದಂತೆ ದಶನು ಶನಕ್ 22 ರನ್ ಬಾರಿಸಿ ಮಿಂಚಿದರು. ಲಂಕಾ ತಂಡದ ಭರವಸೆಯ ಬ್ಯಾಟರ್ ಪತನು ನಿಸ್ಸಂಕಾ 7 ಬೌಂಡರಿ, 6 ಸಿಕ್ಸರ್ ಸಹಾಯದಿಂದ 107 ರನ್ ಬಾರಿಸಿದರು. ಇದು ಟಿ 20 ಅಂತಾರಾಷ್ಟ್ರೀಯ ಮೊದಲ ಶತಕವಾಗಿದೆ.‌

ಅಭಿಷೇಕ್‌ ಅಬ್ಬರ

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಆರಂಭ ಕಳಪೆಯಾಗಿತ್ತು. ಆರಂಭಿಕ ಶುಭಮನ್‌ ಗಿಲ್‌ (4) ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ಆರಂಭಿಕ ಅಭಿಷೇಕ್‌ ಶರ್ಮಾ ಹಾಗೂ ಸೂರ್ಯಕುಮಾರ್‌ (14) ಜೋಡಿ ಸಮಯೋಚಿತ ಬ್ಯಾಟಿಂಗ್ ನಡೆಸಿತು. ಅಲ್ಲದೆ ಎರಡನೇ ವಿಕೆಟ್‌ಗೆ 59 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ ತಮ್ಮ ಅಮೋಘ ಬ್ಯಾಟಿಂಗ್ ಮುಂದುವರೆಸಿದರು.

Asia Cup Arshdeep s Super Over Heroics Seal Thrilling India Win Over Sri Lanka

ಅಭಿಷೇಕ್‌ ಶರ್ಮಾ ಸತತ ಮೂರನೇ ಅರ್ಧಶತಕ ಬಾರಿಸಿ ಮಿಂಚಿದರು. ಇವರು 8 ಬೌಂಡರಿ, 2 ಸಿಕ್ಸರ್‌ ಸಹಾಯದಿಂದ 61 ರನ್‌ ಬಾರಿಸಿ ಲಂಕಾ ಬೌಲರ್‌ಗಳನ್ನು ಕಾಡಿದರು. ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ 4 ಬೌಂಡರಿ, 1 ಸಿಕ್ಸರ್‌ ಒಳಗೊಂಡಂತೆ ಅಜೇಯ 49 ರನ್‌ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು. ಆಲ್‌ರೌಂಡರ್ ಅಕ್ಷರ್ ಪಟೇಲ್ 1 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 21 ರನ್‌ ಬಾರಿಸಿ ಅಬ್ಬರಿಸಿದರು.

Story first published: Saturday, September 27, 2025, 8:52 [IST]
Other articles published on Sep 27, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+