For Quick Alerts
ALLOW NOTIFICATIONS  
For Daily Alerts
 

Asia cup 2023: ಫೈನಲ್‌ನಲ್ಲಿ ಅತ್ಯಮೋಘ ವಿಜಯ: ಭಾರತದ ಮುಡಿಗೆ ಏಷ್ಯಾಕಪ್ ಕಿರೀಟ!!

ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಗೆಲುವು ಸಾಧಿಸಿದೆ. ಶ್ರೀಲಂಕಾ ವಿರುದ್ಧದ ನಡೆದ ಫೈನಲ್ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಆರ್ಭಟಿಸಿದ ಭಾರತ ಶ್ರೀಲಂಕಾ ತಂಡವನ್ನು ಕೇವಲ 50 ರನ್‌ಗಳಿಗೆ ಆಲೌಟ್ ಮಾಡಿತ್ತು. ಅದಾದ ಬಳಿಕ ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ ದಾಖಲೆಯ ಗೆಲುವು ಸಾಧಿಸಿದೆ. ಟೀಮ್ ಇಂಡಿಯಾ ಪರವಾಗಿ ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ನೀಡಿದ ಆಕ್ರಮಣಕಾರಿ ಪ್ರದರ್ಶನ ಲಂಕಾಗೆ ಸಣ್ಣ ಅವಕಾಶವನ್ನೂ ಇಲ್ಲದಂತೆ ಮಾಡಿತು.

ಈ ಪಂದ್ಯದಲ್ಲಿ ಗೆಲ್ಲು ಭಾರತ ತಂಡಕ್ಕೆ ಕೇವಲ 51 ರನ್‌ಗಳ ಅಗತ್ಯ ಮಾತ್ರವೇ ಇತ್ತು. ಈ ಮೊತ್ತವನ್ನು ಬೆನ್ನಟ್ಟಲು ಆರಂಭಿಕರಾಗಿ ಕಣಕ್ಕಿಳಿದ ಶುಬ್ಮನ್ ಗಿಲ್ ಹಾಗೂ ಇಶಾನ್ ಕಿಶನ್ ವಿಕೆಟ್ ಕಳೆದುಕೊಳ್ಳದೆ ಕೇವಲ 6.1 ಓವರ್‌ನಲ್ಲಿ ಗುರಿಯನ್ನು ತಲುಪಿಸಿದರು. ಇಶಾನ್ ಕಿಶನ್ 18 ಎಸೆತಗಳಲ್ಲಿ 23 ರನ್ ಬಾರಿಸಿದರೆ ಶುಬ್ಮನ್ ಗಿಲ್ 19 ಎಸೆತಗಳಲ್ಲಿ 27 ರನ್‌ಗಳನ್ನು ಚಚ್ಚಿದರು. ಈ ಮೂಲಕ ಭಾರತ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಉಳಿದಿರುವ ಎಸೆತಗಳ ಆಧಾರದಲ್ಲಿ ತನ್ನ ಅತಿ ದೊಡ್ಡ ಗೆಲುವು ಸಾಧಿಸಿದೆ.

Asia cup Final: India win by 10 wickets against Sri Lanka became 8th time Champion

8ನೇ ಬಾರಿಗೆ ಚಾಂಪಿಯನ್ ಆದ ಭಾರತ

ಶ್ರೀಲಂಕಾ ತಂಡದ ವಿರುದ್ಧ ಫೈನಲ್ ಪಂದ್ಯದಲ್ಲಿ ಅಮೋಘ ಗೆಲುವು ಸಾಧಿಸುವ ಟೀಮ್ ಇಂಡಿಯಾ 8ನೇ ಬಾರಿಗೆ ಏಷ್ಯಾಕಪ್ ಚಾಂಪಿಯನ್ ಎನಿಸಿಕೊಂಡಿದೆ. ಈ ಟೂರ್ನಿಗೂ ಮುನ್ನ ಭಾರತ ಹಾಗೂ ಶ್ರೀಲಂಕಾ ತಂಡಗಳು ತಲಾ 7 ಬಾರಿ ಗೆದ್ದು ಸಮಾನ ಸ್ಥಾನದಲ್ಲಿತ್ತು. ಇದೀಗ ಭಾರತ ಲಂಕಾ ಪಡೆಯನ್ನು ಹಿಂದಿಕ್ಕಿ ಏಷ್ಯಾದ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ. ಅಲ್ಲದೆ ವಿಶ್ವಕಪ್‌ಗೆ ಇನ್ನು ಕೆಲವೇ ದಿನಗಳಿರುವಾಗ ಭಾರತ ಬಹುರಾಷ್ಟ್ರೀಯ ಟೂರ್ನಿಯೊಂದರಲ್ಲಿ ಸಾಧಿಸಿದ ಗೆಲುವು ಅತ್ಯಂತ ಮಹತ್ವದ್ದಾಗಿದೆ.

ಟಾಸ್ ಗೆದ್ದರೂ ಲಂಕಾಗಿಲ್ಲ ಅದೃಷ್ಟ

ಈ ಪಂದ್ಯದಲ್ಲಿ ಶ್ರೀಲಂಕಾ ತಂಡ ಟಾಸ್ ಗೆದ್ದು ಮೊದಲಿಗೆ ಭಾರತ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಹೀಗಾಗಿ ಟಾಸ್ ಸೋತು ಮೊದಲಿಗೆ ಬೌಲಿಂಗ್ ನಡೆಸುವ ಸವಾಲು ಪಡೆದುಕೊಂಡಿತು. ಆದರೆ ಆರಂಭಿಕ ಓವರ್‌ನಲ್ಲಿಯೇ ಅನುಭವಿ ಜಸ್ಪ್ರೀತ್ ಬೂಮ್ರಾ ಎರಡನೇ ಎಸೆತದಲ್ಲಿಯೇ ವಿಕೆಟ್ ಪಡೆಯುವ ಮೂಲಕ ಅಬ್ಬರಿಸಲು ಆರಂಭಿಸಿದರು. ಈ ಮೂಲಕ ಲಂಕಾ ತಂಡಕ್ಕೆ ಆರಂಭದಲ್ಲಿಯೇ ಒತ್ತಡಕ್ಕೆ ಸಿಲುಕಿತು. ನಂತರ ಇತಿಹಾಸ ನಿರ್ಮಿಸಿದ್ದು ವೇಗಿ ಮೊಹಮ್ಮದ್ ಸಿರಾಜ್

ಸಿರಾಜ್ ಮ್ಯಾಜಿಕಲ್ ಸ್ಪೆಲ್

ಈ ಪಂದ್ಯದಲ್ಲಿ ಶ್ರೀಲಂಕಾ ತಂಡದ ಸದ್ದನ್ನು ಸಂಪೂರ್ಣವಾಗಿ ಅಡಗಿಸಿದ್ದು ಮೊಹಮ್ಮದ್ ಸಿರಾಜ್. ಎರಡನೇ ಓವರ್ ಎಸೆದ ಸಿರಾಜ್ ಮೇಡನ್ ಓವರ್ ಮಾಡಿದ್ದರು. ನಂತರ ಇನ್ನಿಂಗ್ಸ್‌ನ ನಾಲ್ಕನೇ ಓವರ್ ಎಸೆಯಲು ಬಂದ ಸಿರಾಜ್ ಮೊದಲ ಎಸೆತದಲ್ಲಿಯೇ ಫಾತುಮ್ ನಿಸ್ಸಾಂಕ ಜಡೇಜಾ ಪಡೆದ ಅದ್ಭುತ ಕ್ಯಾಚ್‌ಗೆ ಬಲಿಯಾಗಿ ಫೆವಿಲಿಯನ್‌ಗೆ ತೆರಳಿದರು. ಓವರ್ನ ಎರಡನೇ ಎಸೆತದಲ್ಲಿ ಯಾವುದೇ ರನ್ ಹರಿದುಬಾರಲಿಲ್ಲ. ಮೂರನೇ ಎಸೆತದಲ್ಲಿ ಸದೀರ ಸಮತವಿಕ್ರಮ ಎಲ್‌ಬಿಡಬ್ಲ್ಯು ಆಗಿ ವಿಕೆಟ್ ಕಳೆದುಕೊಂಡರು. ನಂತರದ ಎಸೆತದಲ್ಲಿ ಚರಿತ ಅಸಲಂಕಾ ಇಶಾನ್ ಕಿಶನ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರದ ಎಸೆತ ಎದುರಿಸಿದ ಧನಂಜಯ ಡಿಸಿಲ್ವ ಬೌಂಡರಿ ಬಾರಿಸಿದರು. ಆದರೆ ಕೊನೆಯ ಎಸೆತದಲ್ಲಿ ಅವರು ಕೂಡ ರಾಹುಲ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

6 ವಿಕೆಟ್‌ಗಳ ಗೊಂಚಲು ಪಡೆದ ಸಿರಾಜ್

ಇನ್ನು ಸಿರಾಜ್ ಅಬ್ಬರ ಅಷ್ಟಕ್ಕೇ ನಿಲ್ಲಲಿಲ್ಲ. ತನ್ನ ಮುಂದಿನ ಓವರ್‌ನಲ್ಲಿ ಸಿರಾಜ್ ಲಂಕಾ ನಾಯಕ ದಾಸುನ್ ಶನಕ ಅವರನ್ನು ಬೌಲ್ಡ್ ಮಾಡುವ ಮೂಲಕ ಫೆವಿಲಿಯನ್‌ಗೆ ಅಟ್ಟಿದ್ದಾರೆ. ಈ ಮೂಲಕ ಶ್ರೀಲಂಕಾ ತಂಡದ ಸ್ಥಿತಿ ಕೇವಲ 12 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಸಿರಾಜ್ ತಮ್ಮ 5ನೇ ವಿಕೆಟ್ ಕೂಡ ಪೂರ್ಣಗೊಳಿಸಿ ವೇಗವಾಗಿ ಐದು ವಿಕೆಟ್ ಗೊಂಚಲು ಪಡೆದ ದಾಖಲೆಯನ್ನು ಸರಿಗಟ್ಟಿದರು. ಬಳಿಕ 17 ರನ್‌ಗಳಿಸಿದ್ದ ಕುಸಾಲ್ ಮೆಂಡಿಸ್ ಅವರನ್ನು ಕೂಡ ಬೌಲ್ಡ್ ಮಾಡುವ ಮೂಲಕ 6 ವಿಕೆಟ್‌ಗಳ ಗೊಂಚಲು ಪೂರ್ಣಗೊಳಿಸಿದರು.

ನಂತರ ಹಾರ್ದಿಕ್ ಪಾಂಡ್ಯ ಶ್ರೀಲಂಕಾದ ಕೊನೆಯ ಮೂರು ವಿಕೆಟ್‌ಗಳನ್ನು ಕಬಳಿಸಿ ಲಂಕಾ ಇನ್ನಿಂಗ್ಸ್‌ಗೆ ಅಂತ್ಯಹಾಡಿದರು. ಹೀಗಾಗಿ ಶ್ರೀಲಂಕಾ ಕೇವಲ 50 ರನ್‌ಗಳನ್ನು ಗಳಿಸಿ ಶ್ರೀಲಂಕಾ ತಂಡ ಆಲೌಟ್ ಆಯಿತು. ಈ ಮೂಲಕ ಟೀಮ್ ಇಂಡಿಯಾಗೆ ಶ್ರೀಲಂಕಾ ಸುಲಭ ಸವಾಲು ನೀಡಿದ್ದು ಸೋಲಿನತ್ತ ಮುಖಮಾಡಿತು.

ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್

ಬೆಂಚ್: ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಪ್ರಸಿದ್ಧ್ ಕೃಷ್ಣ, ತಿಲಕ್ ವರ್ಮಾ

ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ಕುಸಲ್ ಪೆರೇರಾ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ದಸುನ್ ಶನಕ (ನಾಯಕ), ದುನಿತ್ ವೆಲ್ಲಲಗೆ, ದುಶನ್ ಹೇಮಂತ, ಪ್ರಮೋದ್ ಮದುಶನ್, ಮತೀಶ ಪತಿರಣ
ಬೆಂಚ್: ಕಸುನ್ ರಜಿತಾ, ಬಿನೂರ ಫೆರ್ನಾಂಡೋ, ದಿಮುತ್ ಕರುಣಾರತ್ನೆ, ಸಹನ್ ಅರಚ್ಚಿಗೆ

Story first published: Sunday, September 17, 2023, 18:07 [IST]
Other articles published on Sep 17, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+