For Quick Alerts
ALLOW NOTIFICATIONS  
For Daily Alerts
 

ಏಷ್ಯಕಪ್ ನಲ್ಲಿ ಭಾರತ ಹ್ಯಾಟ್ರಿಕ್ ಗೆಲುವಿನೊಂದಿಗೆ ಬೀಗಿದ ಮೆಲುಕಿದು..

Asia Cup history : Jayasuriyas big feats and Indias hat-trick of title wins

ಬೆಂಗಳೂರು, ಸೆಪ್ಟೆಂಬರ್ 10: ಏಷ್ಯಕಪ್ 2018ರ ಪಂದ್ಯಗಳು ಸೆಪ್ಟೆಂಬರ್ 15ರಿಂದ ಯುಎಇಯಲ್ಲಿ ಶುರುವಾಗಲಿದೆ. 1984ರಲ್ಲಿ ಮೊದಲ ಟೂರ್ನಿ ಆರಂಭವಾಗಿದ್ದೂ ಯುಎಇಯ ಶಾರ್ಜಾದಲ್ಲೇ. ಏಷ್ಯ ಕ್ರಿಕೆಟ್ ಕೌನ್ಸಿಲ್ ಈ ಟೂರ್ನಿಯನ್ನು ಆರಂಭಿಸಿತ್ತು.

ಹಾಲಿ ಚಾಂಪಿಯನ್ ಭಾರತ ಶಾರ್ಜಾದಲ್ಲಿ ನಡೆದಿದ್ದ ಆರಂಭಿಕ ಪಂದ್ಯಾಟದಲ್ಲಿ ಗೆಲುವು ಸಾಧಿಸಿತ್ತು ಎನ್ನುವುದು ವಿಶೇಷ. ಮೊದಲ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಕಣಕ್ಕಿಳಿದಿದ್ದವು. ಈ ಟೂರ್ನಿಯನ್ನು ಒಟ್ಟು 6 ಬಾರಿ ಗೆದ್ದ ಸಾಧನೆ ಭಾರತದ್ದು.

ಏಷ್ಯಕಪ್ ನಲ್ಲಿ ಭಾರತ ಹ್ಯಾಟ್ರಿಕ್ ಸಾಧನೆಯೊಂದಿಗೆ ಗೆದ್ದು ಬೀಗಿದ್ದಲ್ಲಿಂದ ಹಿಡಿದು ಏಷ್ಯಕಪ್ ನಲ್ಲಿ ವೈಯಕ್ತಿಕ ದಾಖಲೆಗಳನ್ನೂ ಸೇರಿಸಿ ಕೆಲ ಅಪರೂಪದ ಕ್ಷಣಗಳ ಮೆಲುಕು ಇಲ್ಲಿದೆ..

ಶ್ರೀಲಂಕಾಕ್ಕೆ ಎರಡನೇ ಸ್ಥಾನ

ಶ್ರೀಲಂಕಾಕ್ಕೆ ಎರಡನೇ ಸ್ಥಾನ

ಏಷ್ಯಕಪ್ ಟೂರ್ನಿ ಹೆಚ್ಚು ಸಾರಿ ಗೆದ್ದ ಹಿರಿಮೆ (ಆರು ಬಾರಿ) ಭಾರತದ್ದಾಗಿದ್ದರೆ, 5 ಸಾರಿ ಗೆದ್ದಿರುವ ಶ್ರೀಲಂಕಾ ದ್ವಿತೀಯ ಸ್ಥಾನದಲ್ಲಿ, ಎರಡು ಸಾರಿಯ ಚಾಂಪಿಯನ್ ಪಾಕಿಸ್ಥಾನ ತೃತೀಯ ಸ್ಥಾನದಲ್ಲಿದೆ. 2012 ಮತ್ತು 2016ರಲ್ಲಿ ಬಾಂಗ್ಲಾದೇಶ ರನ್ನರ್ಸ್ ಪ್ರಶಸ್ತಿ ಗೆದ್ದಿತ್ತು.

ಹ್ಯಾಟ್ರಿಕ್ ಸಾಧನೆ

ಹ್ಯಾಟ್ರಿಕ್ ಸಾಧನೆ

ಏಷ್ಯಕಪ್ ಟೂರ್ನಿಯನ್ನು ಬೆನ್ನುಬೆನ್ನಿಗೆ ಮೂರುಸಾರಿ ಗೆದ್ದ ಸಾಧನೆ ಭಾರತದ್ದೇ ಹೆಸರಿನಲ್ಲಿದೆ. 1988, 1991 ಮತ್ತು 1995ರ ಆವೃತ್ತಿಗಳನ್ನು ಭಾರತ ಗೆದ್ದು ಬೀಗಿತ್ತು. ವೈಯಕ್ತಿಕ ರನ್ ಪರಿಗಣಿಸಿದರೆ ಜಯಸೂರ್ಯ 1220 ರನ್ ಸಾಧನೆಯೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ಏಷ್ಯಕಪ್ ನಲ್ಲಿ 6 ಶತಕದ ಸಾಧನೆ ಜಯಸೂರ್ಯ ಮಾಡಿದ್ದರು.

ಮೂರನೇ ಸ್ಥಾನದಲ್ಲಿ ಕೊಹ್ಲಿ

ಮೂರನೇ ಸ್ಥಾನದಲ್ಲಿ ಕೊಹ್ಲಿ

ವೈಯಕ್ತಿಕ ರನ್ ಸಾಧನೆಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ದಾಖಲೆಗಳನ್ನು ಸರಿಗಟ್ಟುತ್ತ ಸಾಗುತ್ತಿರುವ ಕೊಹ್ಲಿ ಮೂರು ಶತಕದ ಸಾಧನೆಯೊಂದಿಗೆ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ (ನಾಲ್ಕು ಶತಕ) ಅವರ ನಂತರದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕೊಹ್ಲಿ ಈ ಬಾರಿಯ ಏಷ್ಯಕಪ್ ನಲ್ಲಿ ಪಂದ್ಯವಾಡದೆ ವಿಶ್ರಾಂತಿ ಪಡೆಯಲಿದ್ದಾರೆ.

ಮುರಳೀಧರನ್ ಮುಂದು

ಮುರಳೀಧರನ್ ಮುಂದು

ಏಷ್ಯಕಪ್ ಕ್ರಿಕೆಟ್ ನಲ್ಲಿ ಅಧಿಕ ವಿಕೆಟ್ ಸಾಧನೆಯಲ್ಲಿ ಶ್ರೀಲಂಕಾದ ಸ್ಪಿನ್ ದಂತಕತೆ ಮುತ್ತಯ್ಯ ಮುರಳೀಧರನ್ ಅಗ್ರ ಸ್ಥಾನದಲ್ಲಿದ್ದಾರೆ. ಮುರಳೀಧರನ್ 30 ವಿಕೆಟ್ ಗಳೊಂದಿಗೆ ಮೊದಲಿಗನಾಗಿ, ಶ್ರೀಲಂಕಾದವರೇ ಆದ ಅಜಂತ ಮೆಂಡಿಸ್ 26 ವಿಕೆಟ್ ನೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ.

Story first published: Monday, September 10, 2018, 22:23 [IST]
Other articles published on Sep 10, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+