Asia Cup Hockey: ಕೊರಿಯಾ ವಿರುದ್ಧ ಡ್ರಾ ಸಾಧಿಸಿದ ಭಾರತ
ಭಾರತದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಆತಿಥೇಯ ಟೀಮ್ ಇಂಡಿಯಾ 2-2 ಗೋಲುಗಳ ಡ್ರಾವನ್ನು ಕೊರಿಯಾ ವಿರುದ್ಧ ಸಾಧಿಸಿದೆ. ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ಗುರುವಾರ ಮಲೇಷ್ಯಾ ವಿರುದ್ಧ ಕಾದಾಟ ನಡೆಸಲಿದೆ.
ಬುಧವಾರ ನಡೆದ ಎರಡನೇ ಪಂದ್ಯದಲ್ಲಿ ಭಾರತದ ಆರಂಭ ಭರ್ಜರಿಯಾಗಿತ್ತು. ಈ ವೇಳೆ ಭಾರತದ ಹಾರ್ದಿಕ್ ಸಿಂಗ್ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಗೋಲು ಬಾರಿಸಿದರು. ಪರಿಣಾಮ ಭಾರತ ಮೊದಲಾವಧಿಯ ಆರಂಭದಲ್ಲಿ ಮುನ್ನಡೆ ಸಾಧಿಸಿತು. ಇನ್ನು ಕೊರಿಯಾ ಆಟಗಾರರು ಗೋಲು ಬಾರಿಸುವ ಪ್ರಯತ್ನವನ್ನು ಭಾರತೀಯ ಆಟಗಾರರು ವಿಫಲ ಮಾಡಿದರು. ಆದರೆ 12ನೇ ನಿಮಿಷದಲ್ಲಿ ಯಂಗ್ ಜಿ ಹುಂಗ್ ಗೋಲು ಬಾರಿಸಿ ಮಿಂಚಿದರು. ಈ ಗೋಲು ದಾಖಲಾದ 2 ನಿಮಿಷದ ಅಂತರದಲ್ಲಿ ಕೊರಿಯಾ ಮತ್ತೊಂದು ಗೋಲು ಸಿಡಿಸಿತು. ಕೊರಿಯಾ ಪರ ಕಿಂ ಹೆಂಹಂಗ್ ಭರ್ಜರಿ ಗೋಲು ಬಾರಿಸಿ ಅಂತರವನ್ನು ವೃದ್ಧಿಸಿದರು. ಪರಿಣಾಮ ಮೊದಲಾವಧಿಯ ಆಟ ಮುಕ್ತಾಯಗೊಂಡಾಗ ಕೊರಿಯಾ 2-1ರಿಂದ ಮುನ್ನಡೆ ಸಾಧಿಸಿತ್ತು.

ಎರಡನೇ ಅವಧಿಯಲ್ಲಿ ಒಂದು ಗೋಲು ಬಾರಿಸಿ ಗೋಲಿನ ಅಂತರವನ್ನು ಸಮನಾಗಿಸುವ ಭಾರತ ತಂಡದ ಆಸೆ ಫಲಿಸಲಿಲ್ಲ. ಈ ಅವಧಿಯಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಭಾರತೀಯ ಆಟಗಾರರು ವಿಫಲರಾದರು. ಪರಿಣಾಮ ಎರಡನೇ ಅವಧಿ ಗೋಲು ರಹಿತವಾಗಿ ಮುಗಿಯಿತು.
ಕೊನೆಯ ಕ್ಷಣದಲ್ಲಿ ಗೋಲು
ಮೂರನೇ ಅವಧಿಯ ಆಟ ಸಹ ರೋಚಕತೆ ಹುಟ್ಟಿಸಿತ್ತು. ಈ ಅವಧಿಯಲ್ಲೂ ಉಭಯ ತಂಡಗಳ ಗೋಲು ಬಾರಿಸುವ ಆಸೆ ಫಲಿಸಲಿಲ್ಲ. 45 ನಿಮಿಷದ ಆಟದಲ್ಲಿ ಕೊರಿಯಾ ನಿಶ್ಚಿತವಾಗಿ ಮುನ್ನಡೆ ಸಾಧಿಸಿತ್ತು. ಆದರೆ ಕೊನೆಯ ಅವಧಿಯ ಆಟದಲ್ಲಿ ಭಾರತ ಗೋಲು ಬಾರಿಸಿ ಗೋಲುಗಳಿಕೆಯಲ್ಲಿ ಸಮಬಲ ಸಾಧಿಸುವ ಇರಾದೆಯೊಂದಿಗೆ ಕಣಕ್ಕೆ ಇಳಿಯಿತು. ಈ ವೇಳೆ ಭಾರತದ ಮಂದೀಪ್ ಸಿಂಗ್ ಕೊನೆಯ ಕ್ಷಣದಲ್ಲಿ ಸೊಗಸಾದ ಗೋಲು ಬಾರಿಸಿ ತಂಡಕ್ಕೆ ಆಧಾರವಾದರು. ಭಾರತ ಕೊನೆಯ ಕ್ಷಣದವರೆಗೆ ಗೋಲು ಬಾರಿಸಿ ಗೋಲಿನ ಸಂಖ್ಯೆಯನ್ನು ವೃದ್ಧಿಸಿಕೊಳ್ಳುವ ಆಸೆ ಮಣ್ಣು ಪಾಲಾಯಿತು.
ಇದಕ್ಕೂ ಮೊದಲು ನಡೆದ ಇನ್ನೊಂದು ಪಂದ್ಯದಲ್ಲಿ ಮಲೇಷ್ಯಾ 2-0 ಗೋಲುಗಳಿಂದ ಚೀನಾ ತಂಡವನ್ನು ಮಣಿಸಿದೆ. ಆರಂದಿದಲೂ ಅಕ್ರಮಣಕಾರಿ ಆಟಕ್ಕೆ ಮಣೆ ಹಾಕಿದ ಮಲೇಷ್ಯಾ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications