ವನಿತಾ ಟಿ20: ಥೈಲ್ಯಾಂಡ್ ವಿರುದ್ಧ ಭಾರತ 66 ರನ್ ಜಯ


ಕೌಲಾಲಂಪುರ, ಜೂ. 4: ಸೋಮವಾರ ಥೈಲ್ಯಾಂಡ್ ವಿರುದ್ಧ ನಡೆದ ಎರಡನೇ ಏಷ್ಯಾಕಪ್ ವನಿತಾ ಟಿ20 ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ 66 ರನ್ ಜಯ ಗಳಿಸಿದೆ. ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ಆಲ್ ರೌಂಡರ್ ಪ್ರದರ್ಶನ ಭಾರತ ತಂಡ ಸುಲಭ ಗೆಲುವು ಸಾಧಿಸಲು ನೆರವು ನೀಡಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ಎಂ.ಆರ್. ಮೆಶ್ರಾಮ್ 32 (45), ಸೃತಿ ಮಂಧನಾ 29 (22), ಅಂಜುಜಾ ಪಾಟಿಲ್ 22 (21), ಹರ್ಮನ್ ಪ್ರೀತ್ 27 (17), ವೇದಾ ಕೃಷ್ಣಮೂರ್ತಿ 11 (14) ರನ್ ನೆರವಿನೊಂದಿಗೆ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 132 ರನ್ ಪೇರಿಸಿ ಥೈಲ್ಯಾಂಡ್ ಗೆ 133 ರನ್ ಟಾರ್ಗೆಟ್ ನೀಡಿತ್ತು.
ಥೈಲ್ಯಾಂಡ್ ಪರ ವಾಂಗ್ಪಾಕಾ ಲೈಂಗ್ಪ್ರಾಸೆರ್ಟ್ ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ಒಟ್ಟು 16 ರನ್ ನೀಡಿದ ವಾಂಗ್ಪಾಕಾ ಅವರು ಮೆಶ್ರಾಮ್ ಮತ್ತು ವೇದಾ ವಿಕೆಟ್ ಉರುಳಿಸಿ ಭಾರತವನ್ನು ಕಾಡಿದರು. ಇನ್ನು ಎನ್ ಬೂಚಾಥಮ್, ಆರ್ ಪಾಂಡುಂಗ್ಲರ್ಡ್ ತಲಾ ಒಂದೊಂದು ವಿಕೆಟ್ ಕೆಡವಿದರು.
ಚೇಸಿಂಗ್ ಗೆ ಇಳಿದ ಥೈಲ್ಯಾಂಡ್ ಆಟಗಾರ್ತಿಯರು ಯಾರೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ. ಎನ್ ಬೂಚಾಥಮ್ 21 (40), ನರುಮೊಲ್ ಚೈವಾಯಿ 14 (28), ಚಾನಿಡಾ ಸುತಿರುವಾಂಗ್ 12 (16) ರನ್ ಗಳಿಸಿದ್ದು ಬಿಟ್ಟರೆ ಬೇರೆ ಯಾರೂ 10 ರನ್ ಗಿಂತ ಹೆಚ್ಚಿನ ರನ್ ಗಳಿಸಲಿಲ್ಲ.
20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 66 ರನ್ ಪೇರಿಸಿದ ಥೈಲ್ಯಾಂಡ್ ಶರಣಾಯಿತು. ಥೈಲ್ಯಾಂಡ್ ಇನ್ನಿಂಗ್ಸ್ ವೇಳೆ ನಾಯಕಿ ಹರ್ಮನ್ ಪ್ರೀತ್ ಉತ್ತಮ ಬೌಲಿಂಗ್ ಮೂಲಕ ಗಮನ ಸೆಳೆದರು. ಕೌರ್ 3 ಓವರ್ ನಲ್ಲಿ 11 ರನ್ ನೀಡಿ 3 ವಿಕೆಟ್ ಕಬಳಿಸಿದರು. ಆಲ್ ರೌಂಡರ್ ಪ್ರದರ್ಶನಕ್ಕಾಗಿ ಪ್ಲೇಯರ್ ಆಫ್ ದ ಮ್ಯಾಚ್ ಪ್ರಶಸ್ತಿ ಕೌರ್ ಪಾಲಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications