Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asia Cup Rising Stars 2025: ಸೆಮಿಫೈನಲ್‌ಗೆ ಅರ್ಹತೆ ಪಡೆದ ಭಾರತ

ಏಷ್ಯಾ ಕಪ್‌ ರೈಸಿಂಗ್ ಸ್ಟಾರ್ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ "ಎ" ಸ್ಥಿರ ಪ್ರದರ್ಶನ ನೀಡಿದ್ದು 6 ವಿಕೆಟ್‌ಗಳಿಂದ ಒಮನ್‌ ವಿರುದ್ಧ ಜಯ ಸಾಧಿಸಿತು. ಮಹತ್ವದ ಪಂದ್ಯದಲ್ಲಿ ಉತ್ತಮ ಆಟದ ಪ್ರದರ್ಶನ ನೀಡಿದ ಪರಿಣಾಮ ಜಿತೇಶ್‌ ಶರ್ಮಾ ಪಡೆ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ.

ಮಹತ್ವದ ಪಂದ್ಯದಲ್ಲಿ ಭಾರತ "ಎ" ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಒಮನ್ ಪರ ಕರಣ್ ಸೋನಾವಾಲೆ (12), ಹಮ್ಮದ್ ಮಿರ್ಜಾ (32) ಆರಂಭಿಕರು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ನಾರಯಣ್‌ ಸಾಯಿಶಿವ್ (16) ರನ್ ಕಲೆ ಹಾಕಿ ಮಿಂಚಿದರು. ಟಾಪ್‌ ಆರ್ಡರ್‌ನಲ್ಲಿ ನಾಲ್ಕು ಆಟಗಾರರು ಡಬಲ್‌ ಅಂಕಿ ಮುಟ್ಟಿದರು. ಬಿಟ್ಟರೆ ಬೇರೆಯಾವ ಬ್ಯಾಟರ್‌ ಡಬಲ್‌ ಡಿಜಿಟ್ ಮುಟ್ಟಲಿಲ್ಲ.

Asia Cup Rising Star Harsha Dubey s 53 Leads India A to Semis with 6-Wicket Win Over Oman

ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ವಾಸೀಮ್ ಅಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 45 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 54 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಒಮನ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 135 ರನ್ ಸೇರಿಸಿತು. ಭಾರತ ಪರ ಗುರ್ಜಪ್ನೀತ್ ಸಿಂಗ್ ಹಾಗೂ ಸುಯಶ್‌ ಶರ್ಮಾ ತಲಾ 2 ವಿಕೆಟ್‌ ಕಬಳಿಸಿದರು.

ಹರ್ಷ ಅರ್ಧಶತಕ

136 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ "ಎ" ತಂಡದ ಸ್ಥಿರವಾಗಿರಲಿಲ್ಲ. ಸ್ಫೋಟಕ ಬ್ಯಾಟರ್‌ ವೈಭವ್ ಸೂರ್ಯವಂಶಿ (12) ಸಿಕ್ಸರ್ ಬಾರಿಸುವಲ್ಲಿ ವಿಫಲರಾಗಿ ಬೌಂಡರಿ ಲೈನ್‌ನಲ್ಲಿ ಬಿಷ್ತಾ ಬಿ ಹಿಡಿದ ಕ್ಯಾಚ್‌ಗೆ ಬಲಿಯಾದರು. ಪ್ರಿಯಾಂಶ್‌ ಆರ್ಯ (10) ರನ್ ಕಲೆ ಹಾಕುವಲ್ಲಿ ವಿಫಲರಾದರು. ಮೂರನೇ ಕ್ರಮಾಂಕದಲ್ಲಿ ನಮನ್‌ ಧೀರ್ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 30 ರನ್‌ ಸಿಡಿಸಿ ಔಟ್ ಆದರು. 4ನೇ ವಿಕೆಟ್‌ಗೆ ಹರ್ಷಾ ದುಬೆ ಹಾಗೂ ನೇಹಾಲ್ ವಧೆರಾ ಜೋಡಿ 66 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ನೇಹಲ್ 23ರನ್ ಬಾರಿಸಿ ಔಟ್ ಆದರು. ಹರ್ಷಾ ದುಬೆ 44 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 53 ರನ್ ಬಾರಿಸಿ ಜಯದಲ್ಲಿ ಮಿಂಚಿದರು. ಭಾರತ 17.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 138 ರನ್‌ ಸೇರಿಸಿ ಜಯ ಸಾಧಿಸಿತು.

Story first published: Wednesday, November 19, 2025, 6:05 [IST]
Other articles published on Nov 19, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+