Asia Cup Rising Star: ಸೆಮಿಫೈನಲ್‌ನಲ್ಲಿ ಭಾರತ ಸೋಲು: ಬಾಂಗ್ಲಾ ಫೈನಲ್‌ಗೆ
ಏಷ್ಯಾ ಕಪ್ ರೈಸಿಂಗ್ ಸ್ಟಾರ್ ಮೊದಲ ಸೆಮಿಫೈನಲ್ ಪಂದ್ಯ ರೋಚಕತೆಯಿಂದ ಕೂಡಿತ್ತು. ಉಭಯ ತಂಡಗಳು ನಿಗದಿತ ಓವರ್‌ಗಳಲ್ಲಿ 194 ರನ್‌ಗಳನ್ನು ಸೇರಿಸಿದವು. ಪರಿಣಾಮ ಪಂದ್ಯದ ಫಲಿತಾಂಶವನ್ನು ಅರಿಯಲು ಸೂಪರ್ ಓವರ್ ಮೊರೆ ಹೋಗಲಾಯಿತು. ಸೂಪರ್ ಓವರ್‌ನಲ್ಲಿ ರನ್‌ಗಳನ್ನು ಗಳಿಸದೇ ಒಟ್ಟು 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ
ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ಉತ್ತಮ ಆರಂಭವನ್ನು ಕಂಡಿತು. ಆರಂಭಿಕರಾದ ಜಿಶಾನ್ ಆಲಂ (26), ಹಬೀಬುರ್ ರೆಹಮಾನ್ ಸೋಹನ್ ಮೊದಲ ವಿಕೆಟ್‌ಗೆ 4.2 ಓವರ್‌ಗಳಲ್ಲಿ 43 ರನ್ ಸೇರಿಸಿತು. ಮಧ್ಯಮ ಕ್ರಮಾಂಕದಲ್ಲಿ ಜವಾದ್ ಅಬ್ರಾರ್ (13) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ನಾಯಕ ಅಕ್ಬರ್ ಅಲಿ (9), ಅಬು ಹೈದರ್ (0) ರನ್ ಬರವನ್ನು ಅನುಭವಿಸಿದರು. ಎಸ್.ಎಂ. ಮೆಹೆರೋಬ್ 18 ಎಸೆತಗಳಲ್ಲಿ 1 ಬೌಂಡರಿ, 6 ಸಿಕ್ಸರ್ ಸಹಾಯದಿಂದ ಅಜೇಯ 48 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಬಾಂಗ್ಲಾದೇಶ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 194 ರನ್ ಸೇರಿಸಿತು.

ಗುರಿಯನ್ನು ಬೆನ್ನಟ್ಟಿದ ಭಾರತ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ವೈಭವ್ ಸೂರ್ಯವಂಶಿ ಹಾಗೂ ಪ್ರಿಯಾಂಶ್ ಆರ್ಯ ಜೋಡಿ ಮೊದಲ ವಿಕೆಟ್‌ಗೆ 3.4 ಓವರ್‌ಗಳಲ್ಲಿ 53 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯ ಆಟಕ್ಕೆ ಬಾಂಗ್ಲಾ ಬೌಲರ್‌ಗಳು ತಬ್ಬಿಬ್ಬಾದರು. ವೈಭವ್ ಸೂರ್ಯವಂಶಿ 15 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಸಹಾಯದಿಂದ 38 ರನ್ ಬಾರಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ನಮನ್ ಧೀರ್ (7) ರನ್ ಬರ ಅನುಭವಿಸಿದರು. ಆರಂಭಿಕ ಪ್ರಿಯಾಂಶ್ ಆರ್ಯ ನೈಜ್ಯ ಆಟವನ್ನು ಆಡಿ 23 ಎಸೆತಗಳಲ್ಲಿ 44 ರನ್ ಬಾರಿಸಿದರು.
ಸೂಪರ್ ಓವರ್ ವೈಫಲ್ಯ
4ನೇ ವಿಕೆಟ್‌ಗೆ ಜಿತೇಶ್ ಶರ್ಮಾ ಹಾಗೂ ನಮನ್ ವಧೇರ್ ಜೋಡಿ ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಈ ಜೋಡಿ 33 ಎಸೆತಗಳಲ್ಲಿ 52 ರನ್ ಸಿಡಿಸಿತು. ನಾಯಕ ಜಿತೇಶ್ ಶರ್ಮಾ 23 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ನೆರವಿನಿಂದ 33 ರನ್ ಸಿಡಿಸಿದರು. ನೇಹಲ್ ವಧೇರಾ 29 ಎಸೆತಗಳಲ್ಲಿ 32 ರನ್ ಬಾರಿಸಿ ಮಿಂಚಿದರು. ರಮಣ್‌ದೀಪ್ ಸಿಂಗ್ (17), ಆಶುತೋಷ್ ಶರ್ಮಾ (13) ಜವಾಬ್ದಾರಿ ಮರೆತರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 194 ರನ್ ಸೇರಿಸಿತು.
ಉಭಯ ತಂಡಗಳು ನಿಗದಿತ ಓವರ್‌ಗಳಲ್ಲಿ 194 ರನ್ ಸಿಡಿಸಿದ್ದರಿಂದ ಪಂದ್ಯ ಸೂಪರ್ ಓವರ್ ನತ್ತ ಮುಖ ಮಾಡಿದೆ. ಭಾರತದ ಪರ ಜಿತೇಶ್ ಶರ್ಮಾ, ಅಶುತೋಶ್ ಶರ್ಮಾ ರನ್ ಬಾರಿಸುವಲ್ಲಿ ವಿಫಲರಾದರು. ಪರಿಣಾಮ ಬಾಂಗ್ಲಾದೇಶಕ್ಕೆ ಗೆಲುವಿಗೆ 1 ರನ್ ಗುರಿಯನ್ನು ನೀಡಲಾಯಿತು. ಬಾಂಗ್ಲಾ 1 ವಿಕೆಟ್ ಕಳೆದುಕೊಂಡು ಗುರಿಯನ್ನು ಮುಟ್ಟಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications