Asia Cup T20: ಇಬ್ಬರು ವಿಕೆಟ್ ಕೀಪರ್ಸ್‌ಗಳಲ್ಲಿ ಯಾರು ಬೆಸ್ಟ್? ಯಾರಿಗೆ ಸ್ಥಾನ ನೀಡಿದರೆ ಏನು ಲಾಭ?
ಏಷ್ಯಾ ಕಪ್‌ಗೆ ಭಾರತ ತಂಡವನ್ನು ಮಂಗಳವಾರ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡವನ್ನು ಪ್ರಕಟಿಸಿದಾಗ ಹಲವು ಪ್ರಶ್ನೆಗಳು ಎದ್ದಿವೆ. ಯಾರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಗುತ್ತದೆ ಎಂಬ ಚರ್ಚೆಗಳು ಆರಂಭವಾಗಿವೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಶುಭಮನ್ ಗಿಲ್ ತಂಡಕ್ಕೆ ಕಂ ಬ್ಯಾಕ್ ಮಾಡಿದ್ದು ಇವರು, ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯುವುದು ಪಕ್ಕಾ ಆದಂತೆ ಆಗಿದೆ. ಇನ್ನು ಏಷ್ಯಾ ಕಪ್ ತಂಡದಲ್ಲಿ ಇಬ್ಬರು ವಿಕೆಟ್ ಕೀಪರ್‌ಗಳಿಗೆ ಸ್ಥಾನ ನೀಡಲಾಗಿದೆ. ಯಾರಿಗೆ ಅವಕಾಶ ಸಿಗಬಹುದು ಎಂಬ ಚರ್ಚೆಗಳು ಆರಂಭವಾಗಿವೆ.
ಏಷ್ಯಾ ಕಪ್‌ಗೆ ಪ್ರಕಟಿಸಲಾಗಿರುವ ತಂಡದಲ್ಲಿ ಸಂಜು ಸ್ಯಾಮ್ಸನ್ ಹಾಗೂ ಜಿತೇಶ್ ಶರ್ಮಾ ಅವರಿಗೆ ಅವಕಾಶ ನೀಡಲಾಗಿದೆ. ಈ ಇಬ್ಬರು ಟಿ20 ಫಾರ್ಮೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಆಟಗಾರರು. ದೇಶೀಯ ಫಾರ್ಮೆಟ್‌ನಲ್ಲಿ ಜಿತೇಶ್ ಶರ್ಮಾ ಅವರು ಅಬ್ಬರಿಸಿದರೆ, ಸಂಜು ಸ್ಯಾಮ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಬ್ಬರದ ಪ್ರದರ್ಶನ ನೀಡಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ. ಈಗ ಈ ಇಬ್ಬರೂ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದರಿಂದ ಯಾರಿಗೆ ಅವಕಾಶ ಸಿಹಬಹುದು ಎಂಬ ಚರ್ಚೆಗಳು ಶುರುವಾಗಿವೆ.

ಯಾರಿಗೆ ಅವಕಾಶ ನೀಡಿದರೆ ಏನು ಲಾಭ?
ಟೀಮ್ ಇಂಡಿಯಾ ಏಷ್ಯಾ ಕಪ್‌ಗೆ ತಂಡದಲ್ಲಿ ಸಂಜು, ಜಿತೇಶ್ ಇಬ್ಬರೂ ವಿಕೆಟ್ ಕೀಪರ್ ಸ್ಥಾನ ಪಡೆದಿದ್ದಾರೆ. ಈ ಇಬ್ಬರೂ ಅಮೋಘ ಬ್ಯಾಟಿಂಗ್ ಮಾಡುವ ಆಟಗಾರರು. ಸಂಜು ಸ್ಯಾಮ್ಸನ್ ಆರಂಭಿಕರಾಗಿ ಕಣಕ್ಕೆ ಇಳಿದಲ್ಲಿ, ಜಿತೇಶ್ ಶರ್ಮಾ ಮಧ್ಯಮ ಕ್ರಮಾಂಕ ಹಾಗೂ ಫಿನಿಷರ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಆಟಗಾರ. ಹೀಗಾಗಿಈ ಇಬ್ಬರಲ್ಲಿ ಯಾರನ್ನು ಉಳಿಸಿಕೊಳ್ಳಬೇಕು ಎಂಬ ಪ್ರಶ್ನೆ ಉದ್ಭವಿಸಿವೆ.
ಸಂಜು ಸ್ಯಾಮ್ಸನ್
ಟೀಮ್ ಇಂಡಿಯಾದ ಪರ ಕಳೆದ ಒಂದು ವರ್ಷದಿಂದ ಆರಂಭಿಕರಾಗಿ ಕಣಕ್ಕೆ ಇಳಿಯುತ್ತಿರುವ ಸಂಜು ಸ್ಯಾಮ್ಸನ್ ಆರ್ಭಟ ನಡೆಸಿದ್ದಾರೆ. ಇವರು ಆಡಿರುವ 38 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 861 ರನ್ ಬಾರಿಸಿದ್ದಾರೆ. ಈ ವೇಳೆ ಇವರ ಸ್ಟ್ರೈಕ್ ರೇಟ್ 152.39 ಆಗಿದೆ. ಆದರೆ ಇವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದಾಗ ರನ್ ಕಲೆ ಹಾಕಿದಾಗ ಪರದಾಟ ನಡೆಸಿದ್ದಾರೆ. ಒಂದೊಮ್ಮೆ ಇವರು ನೆಲಕಚ್ಚಿ ನಿಂತಿದ್ದೇ ಆದಲ್ಲಿ ರನ್ ಮಹಲ್ ಕಟ್ಟ ಬಹುದು.
ಜಿತೇಶ್ ಶರ್ಮಾ
ಜಿತೇಶ್ ಶರ್ಮಾ ಸಂಜು ಸ್ಯಾಮ್ಸನ್ ಅವರಿಗೆ ಹೋಲಿಸಿದರೆ ಕಡಿಮೆ ಪಂದ್ಯಗನ್ನು ಆಡಿದ್ದಾರೆ. ಅಲ್ಲದೆ ಸ್ಟ್ರೈಕ್ ರೇಟ್ (147.06) ಕಡಿಮೆ ಇದೆ. ಇವರು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ತಂಡಕ್ಕೆ ಆಧಾರವಾಗುವ ಪ್ಲೇಯರ್. ಅಲ್ಲದೆ ಇವರು ಫಿನಿಷರ್ ಪಾತ್ರದಲ್ಲಿ ಆಡುವ ಆಟಗಾರ. ಅಲ್ಲದೆ ಆರ್‌ಸಿಬಿ ಈ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವಲ್ಲಿ ಇವರ ಪಾತ್ರ ದೊಡ್ಡದಾಗಿದೆ. ಹೀಗಾಗಿ ಈ ಇಬ್ಬರಲ್ಲಿ ಯಾರಿಗೆ ಸ್ಥಾನ ಲಭಿಸುತ್ತದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications