ಅಫ್ಘಾನ್‌ನಿಂದ ಮತ್ತೊಂದು ಅಮೋಘ ಪ್ರದರ್ಶನ: ಟಿ20Iನಲ್ಲಿ ದೊಡ್ಡ ಮೈಲಿಗಲ್ಲು ದಾಖಲಿಸಿದ ರಶೀದ್ ಖಾನ್

ಏಷ್ಯಾ ಕಪ್ ಟೂರ್ನಿಯ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧದ ಅಪ್ಘಾನಿಸ್ತಾನ ಅಮೋಘ ಪ್ರದರ್ಶನ ನೀಡಿದ್ದು ಸತತ ಎರಡನೇ ಗೆಲುವು ದಾಖಲಿಸಿದೆ. ಈ ಮೂಲಕ ಟೂರ್ನಿಯಲ್ಲಿ ಸೂಪರ್4 ಹಂತಕ್ಕೇರಿದ ಮೊದಲ ತಂಡ ಎನಿಸಿಕೊಂಡಿದೆ. ಬ್ಯಾಟಿಂಗ್ ಬೌಲಿಂಗ್ ಎಲ್ಲಾ ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ ಮೊಹಮ್ಮದ್ ನಬಿ ನೇತೃತ್ವದ ಪಡೆ ಬಾಂಗ್ಲಾದೇಶವನ್ನು ಸುಲಭವಾಗಿ ಮಣಿಸಿದೆ. ಈ ಮೂಲಕ ಇತರ ತಂಡಗಳಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ಪ್ರಮುಖ ಆಟಗಾರ ರಶೀದ್ ಖಾನ್ ಟಿ20 ಕ್ರಿಕೆಟ್‌ನಲ್ಲಿ ಮಹತ್ವದ ಮೈಲಿಗಲ್ಲೊಂದನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
23ರ ಹರೆಯದ ಯುವ ಬೌಲರ್ ರಶೀದ್ ಖಾನ್ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ನಾಲ್ಕು ಓವರ್‌ಗಳ ತಮ್ಮ ಕೋಟಾದಲ್ಲಿ ಕೇವಲ 22 ರನ್‌ಗಳನ್ನು ನೀಡಿ 3 ವಿಕೆಟ್ ಸಂಪಾದಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ರಶೀದ್ ಖಾನ್ ಅವರ ಒಟ್ಟು ವಿಕೆಟ್‌ಗಳ ಸಂಖ್ಯೆ 115ಕ್ಕೆ ಏರಿಕೆಯಾಗಿದೆ. ಇದು ಚುಟುಕು ಮಾದರಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಅತ್ಯುತ್ತಮ ಸಾಧನೆಯಾಗಿದೆ.

ಟಿಮ್ ಸೌಥಿಯನ್ನು ಹಿಂದಿಕ್ಕಿದ ರಶೀದ್ ಖಾನ್
ಐತಿಹಾಸಿಕ ಶಾರ್ಜಾ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಅಫ್ಘನ್ ಬೌಲರ್‌ಗಳಾದ ಮುಜೀಬ್ ಉರ್ ರಹ್ಮಾನ್ ಹಾಗೂ ರಶೀದ್ ಖಾನ್ ಬೌಲಿಂಗ್ ದಾಳಿಗೆ ಬಾಂಗ್ಲಾದೇಶ ಸಂಪೂರ್ಣವಾಗಿ ನಿರುತ್ತರವಾಗಿತ್ತು. ಈ ಇಬ್ಬರು ಬೌಲರ್‌ಗಳು ಕೂಡ ತಲಾ ಮೂರು ವಿಕೆಟ್ ಪಡೆದು ಮಿಂಚಿದ್ದರು. ಈ ಮೂಲಕ ರಶೀದ್ ಖಾನ್ ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ 115 ವಿಕೆಟ್ ಸಂಪಾದಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಟಿ20Iನಲ್ಲಿ 114 ವಿಕೆಟ್ ಪಡೆದಿರುವ ನ್ಯೂಜಿಲೆಂಡ್‌ನ ವೇಗದ ಬೌಲರ್ ಟಿಮ್ ಸೌಥಿ ಅವರನ್ನು ರಶೀದ್ ಖಾನ್ ಹಿಂದಿಕ್ಕಿದ್ದು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಮೊದಲ ಸ್ಥಾನದಲ್ಲಿ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಇದ್ದು 122 ವಿಕೆಟ್ ಸಂಪಾದಿಸಿದ್ದಾರೆ.

ಬೃಹತ್ ಸಾಧನೆಯತ್ತ ರಶೀದ್ ಖಾನ್
ಅಫ್ಘಾನಿಸ್ತಾನದ ಪ್ರತಿಭಾನ್ವಿತ ಆಟಗಾರ ರಶೀದ್ ಖಾನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ 2015ರಲ್ಲಿ ಪದಾರ್ಪಣೆ ಮಾಡಿದ್ದು ಅದ್ಭುತ ಪ್ರದರ್ಶನಗಳನ್ನು ನೀಡುವ ಮೂಲಕ ಕ್ರಿಕೆಟ್‌ನ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರೆನಿಸಿದ್ದಾರೆ. ಅದರಲ್ಲೂ ಟಿ20 ಮಾದರಿಯಲ್ಲಿ ರಶೀದ್ ಖಾನ್ ಅಮೋಗ ಯಶಸ್ಸು ಸಾಧಿಸುತ್ತಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ವೇಗವಾಗಿ 100 ವಿಕೆಟ್ ಸಂಪಾದಿಸಿರುವ ಆಟಗಾರ ಎನಿಸಿಕೊಂಡಿದ್ದು ಈ ಮೈಲಿಗಲ್ಲಿಗಾಗಿ ರಶೀದ್ ಕೇವಲ 53 ಪಂದ್ಯಗಳನ್ನು ಬಳಸಿಕೊಂಡಿದ್ದರು.

ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳು
ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ) - 99 ಪಂದ್ಯಗಳಲ್ಲಿ 121 ವಿಕೆಟ್
ರಶೀದ್ ಖಾನ್ (ಅಫ್ಘಾನಿಸ್ತಾನ) - 68 ಪಂದ್ಯಗಳಲ್ಲಿ 115 ವಿಕೆಟ್
ಟಿಮ್ ಸೌಥಿ (ನ್ಯೂಜಿಲೆಂಡ್) - 95 ವಿಕೆಟ್‌ಗಳಲ್ಲಿ 114 ವಿಕೆಟ್
ಲಸಿತ್ ಮಲಿಂಗ (ಶ್ರೀಲಂಕಾ) - 84 ಪಂದ್ಯಗಳಲ್ಲಿ 107 ವಿಕೆಟ್
ಇಶ್ ಸೋಧಿ (ನ್ಯೂಜಿಲೆಂಡ್) - 76 ಪಂದ್ಯಗಳಲ್ಲಿ 99 ವಿಕೆಟ್

ಏಷ್ಯಾ ಕಪ್‌ನಲ್ಲಿ ಅಬ್ಬರದ ಆರಂಭ ಪಡೆದ ಅಫ್ಘಾನಿಸ್ತಾನ
ಈ ಬಾರಿಯ ಏಷ್ಯಾ ಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡ ಅಮೋಘ ಪ್ರದರ್ಶನವನ್ನು ನೀಡುತ್ತಿದ್ದು ಅಬ್ಬರದ ಆರಂಭವನ್ನು ಪಡೆದುಕೊಂಡಿದೆ. ಮೊದಲ ಎರಡು ಪಂದ್ಯಗಳಲ್ಲಿಯೂ ಟೂರ್ನಿಯ ಎರಡು ಪ್ರಮುಖ ತಂಡಗಳನ್ನು ಭರ್ಜರಿಯಾಗಿ ಮಣಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಪಂದ್ಯದಲ್ಲಿ 8 ವಿಕೆಟ್‌ಗಳ ಅಂತರದಿಂದ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿದ್ದರೆ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 7 ವಿಕೆಟ್‌ಗಳ ಅಂತರದಿಂದ ಮಣಿಸಿದೆ. ಬಾಂಗ್ಲಾದೇಶ ಸರ್ವಾಂಗೀಣ ಪ್ರದರ್ಶನ ನೀಡಿಕೊಂಡು ಬರುತ್ತಿದ್ದು ಮುಂದಿನ ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳಿಗೂ ಕಠಿಣ ಸವಾಲೊಡ್ಡುವ ವಿಶ್ವಾಸದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications