ಏಷ್ಯಾಕಪ್‌ನಲ್ಲಿ ಶನಿವಾರ ನಡೆಯಲಿದೆ ಮತ್ತೊಂದು ರಣರೋಚಕ ಸೆಣೆಸಾಟ: ಪಂದ್ಯದ ಸಂಪೂರ್ಣ ವಿವರ
ಏಷ್ಯಾಕಪ್ ಟೂರ್ನಿಯಲ್ಲಿ ಶನಿವಾರ ಮತ್ತೊಂದು ಕುತೂಹಲಕಾರಿ ಸೆಣೆಸಾಟವೊಂದು ನಡೆಯಲಿದೆ. ಸೂಪರ್ 4 ಹಂತದ ಎರಡನೇ ಪಂದ್ಯ ಇದಾಗಿದ್ದು ಶ್ರೀಲಂಕಾ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ. ಬಾಂಗ್ಲಾದೇಶ ಸೂಪರ್ 4 ಹಂತದಲ್ಲಿ ಈಗಾಗಲೇ ಒಂದು ಪಂದ್ಯ ಆಡಿದ್ದು ಪಾಕಿಸ್ತಾನದ ವಿರುದ್ಧ ಸೋಲು ಅನುಭವಿಸಿದೆ. ಹೀಗಾಗಿ ಈ ಪಂದ್ಯ ಬಾಂಗ್ಲಾದೇಶ ತಂಡದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.
ಶ್ರೀಲಂಕಾ ತಂಡ ಗ್ರೂಪ್ ಹಂತದಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧ ರೋಚಕ ಗೆಲುವು ಸಾಧಿಸುವ ಮೂಲಕ ಸೂಪರ್ 4 ಹಂತದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿತ್ತು. ಆದರೆ ಅದಕ್ಕೂ ಮುನ್ನ ಲೀಗ್ ಹಂತದ ಮೊದಲ ಪಂದ್ಯವನ್ನು ಬಾಂಗ್ಲಾದೇಶ ತಂಡದ ವಿರುದ್ಧವೇ ಆಡಿದ್ದು ಆ ಪಂದ್ಯದಲ್ಲಿ 5 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿತ್ತು. ಇದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಅಲ್ಲದೆ ಈ ಪಂದ್ಯ ಕೂಡ ತವರಿನ ಮೈದಾನದಲ್ಲಿಯೇ ನಡೆಯುತ್ತಿರುವುದು ಶ್ರೀಲಂಕಾಗೆ ಮತ್ತೊಂದು ಸಕಾರಾತ್ಮಕ ಅಂಶ.

ಪಂದ್ಯದ ಸಮಯ ಹಾಗೂ ನೇರಪ್ರಸಾರ
ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಸೂಪರ್ 4 ಹಂತದ ಸೆಣೆಸಾಟ ಶನಿವಾರ ನಡೆಯಲಿದೆ. ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜನೆಯಾಗಲಿದ್ದು ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭಗೊಳ್ಳಲಿದೆ. 2:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಈ ಪಂದ್ಯ ಸ್ಟಾರ್‌ಸ್ಪೋರ್ಟ್ಸ್ ವಾಹಿನಿಯಲ್ಲಿ ನಡೆಯಲಿದ್ದು ಹಾಟ್‌ಸ್ಟಾರ್‌ನಲ್ಲಿಯೂ ಪಂದ್ಯವನ್ನು ವೀಕ್ಷಿಸಬಹುದಾಗಿದೆ.
ಪಿಚ್ ರಿಪೋರ್ಟ್ ಹೀಗಿದೆ
ಕೊಲಂಬೋದ ಪ್ರೇಮದಾಸ ಕ್ರೀಡಾಂಗಣ ಸಾಮಾನ್ಯವಾಗಿ ಸ್ಪಿನ್ನರ್‌ಗಳ ಸ್ವರ್ಗ ಎನಿಸಿಕೊಳ್ಳುತ್ತದೆ. ಆದರೆ ಎರಡು ದಿನಗಳ ಕಾಲ ಮಳೆಯಾಗಿರುವ ಕಾರಣದಿಂದಾಗಿ ವೇಗಿಗಳಿಗೂ ಇಲ್ಲಿ ನೆರವು ದೊರೆಯುವ ಸಾಧ್ಯತೆಯಿದೆ. ಪಂದ್ಯ ಮುಂದುವರುಯುತ್ತಿದ್ದಂತೆಯೇ ಪಿಚ್ ನಿಧಾನವಾಗಲಿದ್ದು ಬ್ಯಾಟರ್‌ಗಳಿಗೆ ರನ್‌ಗಳಿಸುವುದು ಸವಾಲಾಗಲಿದೆ. ಆದರೆ ಬ್ಯಾಟರ್‌ಗಳು ಕೆಲ ಕಾಲ ಕ್ರೀಸ್‌ನಲ್ಲಿ ನೆಲೆಯೂರುವ ಪ್ರಯತ್ನ ನಡೆಸಿ ಯಶಸ್ವಿಯಾದರೆ ಉತ್ತಮವಾಗಿ ರನ್ ಹರಿದುಬರುವ ನಿರೀಕ್ಷೆಯಿದೆ.
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ದಿಮುತ್ ಕರುಣರತ್ನೆ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವ, ದಸುನ್ ಶನಕ (ನಾಯಕ), ದುನಿತ್ ವೆಲ್ಲಲಗೆ, ಮಹೇಶ್ ತೀಕ್ಷಣ, ಕಸುನ್ ರಜಿತ, ಮಥೀಶ ಪತಿರಣ
ಬಾಂಗ್ಲಾದೇಶ: ಮೊಹಮ್ಮದ್ ನಯಿಮ್, ಮೆಹಿದಿ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್ (ನಾಯಕ), ತೌಹಿದ್ ಹೃದಯೋಯ್, ಮುಶ್ಫಿಕರ್ ರಹೀಮ್(ವಿಕೆಟ್), ಶಮೀಮ್ ಹೊಸೈನ್, ಅಫೀಫ್ ಹೊಸೈನ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಹಸನ್ ಮಹಮೂದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications