Asia Cup T20: ಒಂದೇ ಇನಿಂಗ್ಸ್‌ನಲ್ಲಿ ಹೆಚ್ಚು ರನ್ ನೀಡಿದ ಬೌಲರ್ಸ್
ಯುಎಇನಲ್ಲಿ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿ ಆರಂಭವಾಗಿದೆ. ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗವಹಿಸಲು ಭಾರತ ಸೇರಿದಂತೆ 8 ರಾಷ್ಟ್ರಗಳು ಭಾಗವಹಿಸಲಿವೆ. ಈ ಟೂರ್ನಿಯಲ್ಲಿ ಭಾರತ ಬುಧವಾರ ಅಂಗಳಕ್ಕೆ ಪ್ರವೇಶಿಸಲಿದೆ. ಈ ಬಾರಿಯ ಟಿ20 ಕ್ರಿಕೆಟ್ ಮೂರನೇ ಆವೃತ್ತಿಯದ್ದಾಗಿದೆ. ಚುಟುಕು ಫಾರ್ಮೆಟ್‌ನಲ್ಲಿ ಬ್ಯಾಟರ್‌ಗಳು ಹಾಗೂ ಬೌಲರ್‌ಗಳು ಅಬ್ಬರಿಸಿದ್ದಾರೆ. ಈ ವರದಿಯಲ್ಲಿ ಏಷ್ಯಾ ಕಪ್ ಪಂದ್ಯದ ಒಂದೇ ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ನೀಡಿದ ಬೌಲರ್ಸ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.
ಚುಟುಕು ಫಾರ್ಮೆಟ್ ಅಂದರೆ ಬ್ಯಾಟರ್‌ಗಳ ಅಬ್ಬರ ಜೋರಾಗಿರುತ್ತದೆ. ಈ ಫಾರ್ಮೆಟ್‌ನಲ್ಲಿ ಬೌಂಡರಿ ಸಿಕ್ಸರ್‌ಗಳನ್ನು ಸಿಡಿಸಿ ಬ್ಯಾಟರ್‌ಗಳು ಅಬ್ಬರಿಸುತ್ತಾರೆ. ಬೌಲರ್‌ಗಳ ರಣ ತಂತ್ರವನ್ನು ಮೆಟ್ಟಿನಿಂತು ರನ್ ಮಹಲ್ ಕಟ್ಟುವ ಬ್ಯಾಟರ್‌ಗಳು, ಸ್ಟಾರ್ ಬೌಲರ್‌ಗಳ ಲೈನ್ ಹಾಗೂ ಲೆಂಥ್‌ಗಳನ್ನು ಹಾಳು ಮಾಡುತ್ತಾರೆ. ಏಷ್ಯಾ ಕಪ್ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ನೀಡಿದ ಬೌಲರ್ಸ್‌ಗಳ ಪಟ್ಟಿಯಲ್ಲಿ ಅಫ್ಘಾನಿಸ್ತಾನದ ಫರೀದ್ ಅಹ್ಮದ್‌ಗೆ ಅಗ್ರಸ್ಥಾನ.

2022ರ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ಹಾಗೂ ಭಾರತ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಭಾರತ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಆಫ್ಘನ್ ಬೌಲರ್‌ಗಳನ್ನು ಕಾಡಿತ್ತು. ಇದೇ ಪಂದ್ಯದಲ್ಲಿ ಟೀಮ್ ಇಂಡಿಯಾ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದರು. ಆಫ್ಘನ್ ಪರ ಬೌಲಿಂಗ್ ಮಾಡಿದ್ದ ಫರೀದ್ ಅಹ್ಮದ್ ರನ್‌ಗಳನ್ನು ನೀಡಿ ಕೈ ಸುಟ್ಟುಕೊಂಡಿದ್ದರು. ಇವರು 4 ಓವರ್ ಬೌಲಿಂಗ್ ನಡೆಸಿ 57 ರನ್ ನೀಡಿದ್ದರು. ಇದರಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್‌ಗಳು ಸೇರಿದ್ದವು.
ಏಷ್ಯಾಕಪ್‌ನ ಒಂದೇ ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ನೀಡಿದ ಬೌಲರ್ಸ್
ಫರೀದ್ ಅಹ್ಮದ್, ಅಫ್ಘಾನಿಸ್ತಾನ, 4 ಓವರ್, 57 ರನ್
ಜೀಶಾನ್ ಮಕ್ಸೂದ್, ಓಮನ್, 4 ಓವರ್, 54 ರನ್
ಆಯುಶ್ ಶುಕ್ಲಾ, ಹಾಂಗ್ ಕಾಂಗ್, 4 ಓವರ್, 54 ರನ್
ಆವೀಶ್ ಖಾನ್, ಭಾರತ, ಓವರ್, 53 ರನ್
ಹರೂನ್ ಹರ್ಷದ್, ಹಾಂಗ್ ಕಾಂಗ್, 4 ಓವರ್, 53 ರನ್
ಟೀಮ್ ಇಂಡಿಯಾ ಪರ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಆವೀಶ್ ಖಾನ್‌ಗೆ ಮೊದಲ ಸ್ಥಾನ. ಇವರು 2022ರ ಏಷ್ಯಾಕಪ್‌ನಲ್ಲಿ ಹಾಂಗ್‌ಕಾಂಗ್ ವಿರುದ್ಧ 4 ಓವರ್ ಬೌಲಿಂಗ್ ನಡೆಸಿ 54 ರನ್ ನೀಡಿದ್ದರು.
ಭಾರತದ ಪರ ಹೆಚ್ಚು ರನ್ ನೀಡಿದ ಬೌಲರ್ಸ್
ಆವೀಶ್ ಖಾನ್, 4 ಓವರ್, 53 ರನ್
ಅರ್ಷದೀಪ್ ಸಿಂಗ್, 4 ಓವರ್, 44 ರನ್
ಹಾರ್ದಿಕ್ ಪಾಂಡ್ಯ, 4 ಓವರ್, 44 ರನ್
ಯುಜುವೇಂದ್ರ ಚಹಾಲ್, 4 ಓವರ್, 43 ರನ್
ಭುವನೇಶ್ವರ್ ಕುಮಾರ್, 4 ಓವರ್, 40 ರನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications