Asia Cup T20: ಇಂದು ಭಾರತ, ಯುಎಇ ಫೈಟ್: ಶುಭಾರಂಭದ ಕನಸಿನಲ್ಲಿ ಸೂರ್ಯ ಪಡೆ
ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ, ಹಾಂಗ್ ಕಾಂಗ್ ತಂಡವನ್ನು ಮಣಿಸಿ ಶುಭಾರಂಭ ಮಾಡಿದೆ. ಬುಧವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಭಾರತ ಹಾಗೂ ಆತಿಥೇಯ ಯುಎಇ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಂಭಿಸಲಿದೆ. ಸೂರ್ಯಕುಮಾರ್ ಯಾದವ್ ಪಡೆ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿ ಶುಭಾರಂಭ ಮಾಡುವ ಕನಸಿನಲ್ಲಿದೆ.
ಭಾರತ ಹಾಗೂ ಯುಎಇ ನಡುವೆ ಏಕೈಕ ಟಿ20 ಅಂತರರಾಷ್ಟ್ರೀಯ ಪಂದ್ಯ ನಡೆದಿದೆ. 2016 ರ ಏಷ್ಯಾ ಕಪ್‌ನಲ್ಲಿ ಭಾರತ ಮತ್ತು ಯುಎಇ ಮುಖಾಮುಖಿಯಾಗಿದ್ದು, ಇದರಲ್ಲಿ ಟೀಮ್ ಇಂಡಿಯಾ ಒಂಬತ್ತು ವಿಕೆಟ್‌ಗಳಿಂದ ಸುಲಭವಾಗಿ ಗೆದ್ದಿದೆ. ಈ ಪಿಚ್‌ನಲ್ಲಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಮಾಡಲು ಇಶ್ಚಿಸುತ್ತಿದೆ. ಈ ಮೈದಾನದಲ್ಲಿ ಒಟ್ಟು 93 ಪಂದ್ಯಗಳನ್ನು ಆಡಲಾಗಿದ್ದು, 47 ಬಾರಿ ಎರಡನೇ ಬಾರಿ ಬ್ಯಾಟ್ ಮಾಡಿರುವ ತಂಡಡವೇ ಗೆದ್ದಿದೆ. ಈ ಪಿಚ್ ಮೇಲೆ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯ ಪಂದ್ಯಗಳನ್ನು ಆಡಿದ್ದು, ಇದರ ಅನುಭವ ತಂಡಕ್ಕೆ ಇದೆ. ಈ ಪಿಚ್ ಬ್ಯಾಟರ್ ಹಾಗೂ ಬೌಲರ್‌ಗಳಿಗೆ ನೆರವು ನೀಡಬಲ್ಲದು. ಸ್ಪಿನ್ ಬೌಲರ್‌ಗಳು ನಿರ್ಣಾಯಕ ಪಾತ್ರವನ್ನು ವಹಿಸಲಿದ್ದಾರೆ.

ಆರಂಭಿಕರಾಗಿ ಕಣಕ್ಕೆ ಇಳಿಯುವುದು ಯಾರು?
ಟೀಮ್ ಇಂಡಿಯಾ ಪರ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿಯುವುದು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ವಿಶ್ವದ ನಂಬರ್ 1 ಬ್ಯಾಟರ್ ಅಭಿಷೇಕ್ ಶರ್ಮಾ ಅವರು ಆರಂಭಿಕರಾಗಿ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ. ಇನ್ನು ಇವರಿಂದಿಗೆ ಸಂಜು ಸ್ಯಾಮ್ಸನ್ ಅಥವಾ ಶುಭಮನ್ ಗಿಲ್ ಇಬ್ಬರಲ್ಲಿ ಒಬ್ಬರು ಆರಂಭಿಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಿನ ವಾತಾವರಣ ನೋಡಿದರೆ ಸಂಜು ಬೆಂಚ್ ಕಾಯಬಹುದಾಗಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ, ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಆಡಲಿದ್ದಾರೆ. ಈ ಇಬ್ಬರು ಬ್ಯಾಟರ್‌ಗಳು ತಂಡದ ಅಗತ್ಯಕ್ಕೆ ಅನುಗುಣವಾಗಿ ಬ್ಯಾಟ್ ಮಾಡಬಲ್ಲರು.
ಆಲ್‌ರೌಂಡರ್ ರೂಪದಲ್ಲಿ ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ ತಂಡದಲ್ಲಿ ಸ್ಥಾನ ಪಡೆದಿದ್ದು ಪರಿಸ್ಥಿತಿಗೆ ಅನುಗುಣವಾಗಿ ತಂಡದ ರಚನೆ ನಡೆಯಲಿದೆ. ಇನ್ನು ನುರಿತ ಸ್ಪಿನ್ ಬೌಲರ್ ರೂಪದಲ್ಲಿ ವರುಣ್ ಚಕ್ರವರ್ತಿ ಹಾಗೂ ಕುಲ್‌ದೀಪ್ ಯಾದವ್ ಆಡಬಹುದು. ವೇಗದ ಬೌಲಿಂಗ್ ನೊಗವನ್ನು ಅರ್ಷದೀಪ್ ಸಿಂಗ್ ಹಾಗೂ ಜಸ್ಪ್ರೀತ್ ಬುಮ್ರಾ ಹೊರಲಿದ್ದಾರೆ. ಟೀಮ್ ಇಂಡಿಯಾ ಈ ಪಂದ್ಯವನ್ನು ಗೆದ್ದು ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ. ಆದರೆ ಯುಎಇ ತಂಡವನ್ನು ಸಹ ಹಗುರವಾಗಿ ಪರಿಗಣಿಸುವಂತಿಲ್ಲ.
ಭಾರತದ ಸಂಭಾವ್ಯ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ರಮನ್ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಹರ್ಷಿತ್ ಸಿಂಗ್ ರಾಣಾ, ರಿಂಕು ಸಿಂಗ್
ಯುಎಇ ತಂಡ: ಮುಹಮ್ಮದ್ ವಾಸಿಂ (ನಾಯಕ), ಅಲಿಶಾನ್ ಶರಾಫು, ಆರ್ಯನ್ಶ್ ಶರ್ಮಾ, ಆಸಿಫ್ ಖಾನ್, ಧ್ರುವ್ ಪರಾಶರ್, ಎಥಾನ್ ಡಿಸೋಜಾ, ಹೈದರ್ ಅಲಿ, ಹರ್ಷಿತ್ ಕೌಶಿಕ್, ಜುನೈದ್ ಸಿದ್ದಿಕಿ, ಮತಿಯುಲ್ಲಾ ಖಾನ್, ಮುಹಮ್ಮದ್ ಫಾರೂಕ್, ಮುಹಮ್ಮದ್ ಜವಾದುಲ್ಲಾ, ಮುಹಮ್ಮದ್ ಜೊಹೈಬ್, ರಾಹುಲ್ ಖಾನ್ ಚೋಪ್ರಾ, ರೋಹಿತ್, ರೋಹಿತ್, ರಾಹುಲ್ ಖಾನ್ ಚೋಪ್ರಾ, ರೋಹಿತ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications