Sanju Samson: ಟೀಮ್ ಇಂಡಿಯಾದಲ್ಲಿ ಸಿಗುತ್ತಾ ಸಂಜುಗೆ ಅವಕಾಶ: ಇಲ್ಲಿದೆ ಅಪ್‌ಡೇಟ್
ಇನ್ನೇನು ಎರಡು ದಿನಗಳಲ್ಲಿ ಏಷ್ಯಾ ಕಪ್ ಟಿ20 ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಭಾಗವಹಿಸಲು ಈಗಾಗಲೇ 8 ತಂಡಗಳು ಯುಎಇನತ್ತ ಮುಖ ಮಾಡಿವೆ. ಈ ಬಾರಿಯ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿ ಯುಎಇನಲ್ಲಿ ನಡೆಯಲಿದೆ. ಈ ಬಾರಿ ಮೂರನೇ ಆವೃತ್ತಿ ಏಷ್ಯಾ ಕಪ್ ಟಿ20 ಟೂರ್ನಿ ನಡೆಯಲಿದೆ. ಈ ವೇಳೆ ಟೀಮ್ ಇಂಡಿಯಾದ ಸಂಯೋಜನೆ ಹೇಗಿರಲಿದೆ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ಸಿಗುತ್ತದಾ ಎಂಬ ಪ್ರಶ್ನೆ ಆರಂಭವಾಗುತ್ತಿದೆ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಈಗಾಗಲೇ ಅಖಾಡ ಪ್ರವೇಶಿಸಿದ್ದಾರೆ. ಈ ವೇಳೆ ಗೌತಮ್ ಗಂಭೀರ್ ಮುಂದಾಳತ್ವದಲ್ಲಿ ಆಟಗಾರರು ಅಭ್ಯಾಸ ನಡೆಸಿದ್ದಾರೆ. ಈ ವೇಳೆ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಟೀಮ್ ಇಂಡಿಯಾದ ಪರ ಮೊದಲ ವಿಕೆಟ್ ಕೀಪರ್ ಆಗಿ ಕಣಕ್ಕೆ ಇಳಿಯುವುದು ಯಾರು ಎಂಬ ಬಗ್ಗೆ ಚಿತ್ರಣ ಸಿಕ್ಕಂತೆ ಆಗಿದೆ. ಸಂಜು ಸ್ಯಾಮ್ಸನ್ ಭಾರತದ ಪರ ಕಣಕ್ಕೆ ಇಳಿಯುವುದು ಡೌಟ್ ಎಂದು ತಿಳಿದು ಬರುತ್ತಿದೆ.

ಮೊದಲ ಅಭ್ಯಾಸ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರ ಅನುಪಸ್ಥಿತಿ ಕಂಡು ಬಂದಿದೆ. ಇವರನ್ನು ಬಿಟ್ಟಂತೆ ಶುಭಮನ್ ಗಿಲ್, ರಿಂಕು ಸಿಂಗ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಪಿಚ್ ಮೇಲೆ ಸಮಯ ಕಳೆದರು. ಇನ್ನು ಸಂಜು ಸ್ಯಾಮ್ಸನ್ ಟೀಮ್ ಇಂಡಿಯಾದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ ಎಂಬ ಬಗ್ಗೆ ಒಂದು ಸೂಚನೆ ಸಿಕ್ಕಂತೆ ಆಗಿದೆ. ಸದ್ಯ ತಂಡದಲ್ಲಿ ಇಬ್ಬರು ವಿಕೆಟ್‌ಗಳು ಇದ್ದಾರೆ. ದೇಶೀಯ ಟಿ20 ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಸಂಜು ಸ್ಯಾಮ್ಸನ್ ತಂಡದಲ್ಲಿ ಸ್ಥಾನ ಪಡೆಯಬಹುದು ಎಂಬ ಲೆಕ್ಕಾಚಾರಗಳು ಆರಂಭವಾಗಿವೆ.
ಅಭ್ಯಾಸದ ವೇಳೆ ಕಾಣಿಸಿಕೊಳ್ಳದ ಸಂಜು
ಸಂಜು ಸ್ಯಾಮ್ಸನ್ ಅಭ್ಯಾಸದ ವೇಳೆ ಸೈಡ್‌ಲೈನ್‌ನಲ್ಲಿ ಕಾಣಿಸಿಕೊಂಡರು. ಅಷ್ಟೇ ಅಲ್ಲದೆ ಸಂಜು ಸ್ಯಾಮ್ಸನ್ ಡ್ರಿಲ್ ಮಾಡಿದ್ರು. ಆದರೆ ವಿಕೆಟ್ ಹಿಂದೆ ವಿಕೆಟ್ ಕಿಪಿಂಗ್ ಕೆಲಸವನ್ನು ಜಿತೇಶ್ ಶರ್ಮಾ ಮಾಡಿದರು. ಮೊದಲಾವಧಿಯಲ್ಲಿ ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಜಿತೇಶ್ ಶರ್ಮಾ, ರಿಂಕು ಸಿಂಗ್ ಮೈದಾನದಲ್ಲಿ ಬೆವರು ಹರಿಸಿದರು. ಇನ್ನು ಅಭಿಷೇಕ್ ಶರ್ಮಾ, ಗಿಲ್ ಇಬ್ಬರೂ ಆರಂಭಿಕರಾಗಿ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ್ದಾರೆ. ಇವರಿಬ್ಬರು ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಅವರ ಎಸೆತಗಳನ್ನು ಎದುರಿಸಿದರು.

ಇನ್ನು ಟೀಮ್ ಇಂಡಿಯಾದ ಪರ ಫಿನಿಷರ್ ಪರ ರಿಂಕು ಸಿಂಗ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ. ಕುಲ್‌ದೀಪ್ ಯಾದವ್, ವರುಣ್ ಚಕ್ರವರ್ತಿ ಹಾಗೂ ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್ ಅಭ್ಯಾಸ ಪಂದ್ಯದಲ್ಲಿ ಕಾಣಿಸಿಕೊಂಡರು. ಟೀಮ್ ಇಂಡಿಯಾದ ಫೀಲ್ಡಿಂಗ್ ಕೋಚ್ ಸಹ ಆಟಗಾರರೊಂದಿಗೆ ಕಾಣಿಸಿಕೊಂಡರು. ಇನ್ನು ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ ಅವರೊಂದಿಗೆ ಕೋಚ್ ಗೌತಮ್ ಗಂಭೀರ್ ಚರ್ಚೆ ನಡೆಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications