ಈ 6 ಕ್ರಿಕೆಟಿಗರು ಏಷ್ಯಾಕಪ್‌ನ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು ಎಂದರೆ ನಂಬ್ತೀರಾ?!
ಏಷ್ಯಾದ ರಾಷ್ಟ್ರಗಳಿಗಾಗಿಯೇ ಇರುವ ಅತ್ಯುನ್ನತ ಕ್ರಿಕೆಟ್ ಟೂರ್ನಿಯೆಂದರೆ ಅದು ಏಷ್ಯಾಕಪ್ ಟೂರ್ನಿ. ಬಹುತೇಕ 40 ವರ್ಷಗಳ ಹಿಂದೆ ಈ ಕ್ರಿಕೆಟ್ ಟೂರ್ನಿ ಆರಂಬವಾಗಿದ್ದು ಏಷ್ಯಾದ ರಾಷ್ಟ್ರಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಾಟ ನಡೆಸುತ್ತಿದೆ. ಆರಂಭದಲ್ಲಿ ಭಾರತ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ಮಧ್ಯೆ ಮಾತ್ರ ನಡೆಯುತ್ತಿದ್ದ ಈ ಟೂರ್ನಿಯಲ್ಲಿ ಈಗ ಭಾಗವಹಿಸುವ ತಂಡಗಳ ಸಂಖ್ಯೆ ಹೆಚ್ಚಾಗಿದೆ.
ಬುಧವಾರದಿಂದ ಆರಂಭವಾಗಲಿರುವ ಏಷ್ಯಾಕಪ್ ಟೂರ್ನಿಯಲ್ಲಿ 6 ತಂಡಗಳು ಭಾಗವಹಿಸುತ್ತಿವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ ತಂಡಗಳ ಜೊತೆಗೆ ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ನೇಪಾಳ ತಂಡಗಳು ಕೂಡ ಸ್ಪರ್ಧಿಸಲಿದೆ. ಈ ಬಾರಿಯ ಕ್ರೀಡಾಕೂಟಕ್ಕೆ ಭಾರತ ತಂಡ ಸ್ಟಾರ್ ಆಟಗಾರರನ್ನು ಒಳಗೊಂಡ ಬಲಿಷ್ಠ ತಂಡವನ್ನು ಪ್ರಕಟಿಸಿದ್ದು ಟೂರ್ನಿಗೆ ಸಿದ್ಧವಾಗಿದೆ.

ಈ ಸಂದರ್ಭದಲ್ಲಿ ಏಷ್ಯಾಕಪ್‌ಗೆ ಸಂಬಂಧಿಸಿದ ಕುತೂಹಲಕಾರಿ ಮಾಹಿತಿಯೊಂದನ್ನು ನಿಮ್ಮ ಮುಂದಿಡುತ್ತಿದ್ದೇವೆ. ಏಷ್ಯಾಕಪ್‌ನಂಥಾ ಪ್ರತಿಷ್ಠಿತ ಟೂರ್ನಿಯಲ್ಲಿ ಸ್ಥಾನ ಪಡೆದುಕೊಂಡಿದ್ದು ನೀವು ಮರೆತಿರಬಹುದಾದ 6 ಭಾರತೀಯ ಕ್ರಿಕೆಟಿಗರ ಬಗ್ಗೆ ಇಲ್ಲಿದೆ ಮಾಹಿತಿ.
2010ರ ಏಷ್ಯಾಕಪ್ ತಂಡದಲ್ಲಿದ್ದ ಸೌರಬ್ ತಿವಾರಿ
2010ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ನೀಡಿದ್ದ ಅದ್ಭುತ ಪ್ರದರ್ಶನದಿಂದಾಗಿ ಗಮನಸೆಳೆದಿದ್ದರು ಸೌರಬ್ ತಿವಾರಿ. ನಂತರ 2010ರಲ್ಲಿ ನಡೆದಿದ್ದ ಏಷ್ಯಾಕಪ್ ಟೂರ್ನಿಯಲ್ಲಿಯೂ ಸೌರಬ್ ತಿವಾರಿ ಸ್ಥಾನವನ್ನು ಪಡೆದುಕೊಂಡಿದ್ದರು. ಆದರೆ ಟೂರ್ನಿಯಲ್ಲಿ ಆಡಲು ಒಂದು ಅವಕಾಶವೂ ಅವರಿಗೆ ದೊರೆತಿರಲಿಲ್ಲ.
2008ರ ಏಷ್ಯಾಕಪ್‌ನಲ್ಲಿ ಸ್ಥಾನ ಪಡೆದಿದ್ದ ಮನ್‌ಪ್ರೀತ್ ಗೂನಿ
ಇನ್ನು ಭರವಸೆ ಮೂಡಿಸಿದ್ದ ಮತ್ತೋರ್ವ ಕ್ರಿಕೆಟಿಗ ಮನ್‌ಪ್ರೀತ್ ಗೂನಿ 2008ರ ಏಷ್ಯಾಕಪ್ ಟೂರ್ನಿಯ ಮೂಲಕ ಅದ್ದೂರಿಯಾಗಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಪಾಕಿಸ್ತಾನದಲ್ಲಿ ನಡೆದಿದ್ದ ಆ ಟೂರ್ನಿಯಲ್ಲಿ ಕೇವಲ ಎರಡು ಏಕದಿನ ಪಂದ್ಯಗಳಲ್ಲಿ ಮಾತ್ರವೇ ಆಡುವ ಅವಕಾಶವನ್ನು ಗೂನಿ ಪಡೆದುಕೊಂಡಿದ್ದರು.
2014ರ ಏಷ್ಯಾಕಪ್ ತಂಡದಲ್ಲಿದ್ದರು ಚೇತೇಶ್ವರ್ ಪೂಜಾರ
ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಟೆಸ್ಟ್ ಸ್ಪೆಶಲಿಸ್ಟ್ ಎಂದೇ ಖ್ಯಾತರಾಗಿದ್ದಾರೆ. ಆದರೆ ಅವರು ಭಾರತ ತಂಡವನ್ನು ಏಕದಿನ ಮಾದರಿಯಲ್ಲಿ ಆಯೋಜನೆಯಾಗಿದ್ದ ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸಿದ್ದರು. 2014ರಲ್ಲಿ ನಡೆದಿದ್ದ ಏಷ್ಯಾಕಪ್‌ನಲ್ಲಿ ಚೇತೇಶ್ವರ್ ಪೂಜಾರ ಸ್ಥಾನ ಪಡೆದುಕೊಂಡಿದ್ದರು.
ಈಶ್ವರ್ ಪಾಂಡೆ
ಈಶ್ವರ್ ಪಾಂಡೆ ಭಾರತ ಕ್ರಿಕೆಟ್ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರತಿನಿಧಿಸುವ ಅವಕಾಶವನ್ನು ಪಡೆಯಲೇ ಇಲ್ಲ. ಹಾಗಿದ್ದರೂ 2014ರಲ್ಲಿ ನಡೆದಿದ್ದ ಏಷ್ಯಾಕಪ್ ಟೂರ್ನಿಯಲ್ಲಿ ಪಾಂಡೆ ಭಾರತ ತಂಡಕ್ಕೆ ಆಯ್ಕೆಯಾಗುವ ಮೂಲಕ ತಂಡದ ಡ್ರೆಸ್ಸಿಂಗ್‌ರೂಮ್ ಹಂಚಿಕೊಂಡಿದ್ದರು.
ವೇಗದ ಬೌಲರ್ ಸಿದ್ಧಾರ್ಥ್ ಕೌಲ್
ಈ ಪಟ್ಟಿಯಲ್ಲಿರುವ ಮತ್ತೋರ್ವ ಕ್ರಿಕೆಟಿಗ ವೇಗದ ಬೌಲರ್ ಸಿದ್ಧಾರ್ಥ್ ಕೌಲ್. 2018ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಮಡದ ಪರವಾಗಿ ಅದ್ಭುತ ಪ್ರದರ್ಶನ ನೀಡಿದ್ದ ಕೌಲ್ ಅದೇ ವರ್ಷ ನಡೆದಿದ್ದ ಏಷ್ಯಾಕಪ್ ಟೂರ್ನಿಗೂ ಆಯ್ಕೆಯಾಗುವ ಮೂಲಕ ಗಮನಸೆಳೆದಿದ್ದರು.
ಪವನ್ ನೇಗಿ
2015ರಲ್ಲಿ ಏಷ್ಯಾಕಪ್ ಟೂರ್ನಿಯನ್ನು ಏಕದಿನ ಹಾಗೂ ಟಿ20 ಎರಡು ಮಾದರಿಯಲ್ಲಿಯೂ ರೊಟೇಶನ್ ಮಾದರಿಯಲ್ಲಿ ಆಡಿಸಲಾಗುತ್ತದೆ ಎಂದು ಪ್ರಕಟಿಸಲಾಗಿತ್ತು. 2016ರಲ್ಲಿ ಪ್ರಪ್ರಥಮ ಬಾರಿಗೆ ಏಷ್ಯಾಕಪ್ ಟೂರ್ನಿಯನ್ನು ಟಿ20 ಮಾದರಿಯಲ್ಲಿ ಆಡಿಸಲಾಗಿತ್ತು. ಈ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಪವನ್ ನೇಗಿ ಕೂಡ ಅವಕಾಶ ಗಿಟ್ಟಿಸಿಕೊಂಡಿದ್ದರು. ಅಲ್ಲದೆ ಯುಎಇ ವಿರುದ್ಧದ ಪಂದ್ಯದಲ್ಲಿ ನೇಗಿ ಭಾರತ ತಂಡಕ್ಕೆ ಪದಾರ್ಪಣೆ ಕೂಡ ಮಾಡಿದ್ದರು. ಆದರೆ ಅದಾದ ಬಳಿಕ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಶಶ ದೊರೆಯಲೇ ಇಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications