ಇನ್ನೇನು ಕೆಲವೇ ದಿನಗಳಲ್ಲಿ ಏಷ್ಯಾ ಕಪ್‌ಗೆ ಟೀಮ್ ಇಂಡಿಯಾವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ವೇಳೆ ತಂಡದಲ್ಲಿ ಸ್ಥಾನ ಪಡೆಯಲು ಹಲವು ಆಟಗಾರರು ಸ್ಥಾನ ಪಡೆಯಲು ಕನಸು ಕಾಣುತ್ತಿದ್ದಾರೆ. ಈ ತಂಡದಲ್ಲಿ ಸ್ಥಾನ ಪಡೆಯಲು ಇಂಗ್ಲೆಂಡ್ ಸರಣಿಯಲ್ಲಿ ಮಿಂಚಿದ ಆಟಗಾರರು ಸಹ ಸಜ್ಜಾಗಿದ್ದಾರೆ. ಈ ವೇಳೆ ಟೀಮ್ಇಂಡಿಯಾದ ಆರಂಭಿಕ ಸ್ಥಾನದ ಮೇಲೆ ನಾಲ್ಕು ಆಟಗಾರರು ಚಿತ್ತ ನೆಟ್ಟಿದ್ದಾರೆ. ಆರಂಭಿಕರಾಗಿ ಯಾವೆಲ್ಲಾ ಆಟಗಾರರು ಹೇಗೆ ಪ್ರದರ್ಶನ ನೀಡಿದ್ದಾರೆ, ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಟಿ20 ಕ್ರಿಕೆಟ್‌ನ ನಂಬರ್ 1 ಬ್ಯಾಟರ್ ಅಭಿಷೇಕ್ ಶರ್ಮಾ ಅಬ್ಬರದ ಆಟವನ್ನು ಆಡಲು ಹೆಸರುವಾಸಿ. ಇವರು ತಮ್ಮ ಬಿರುಸಿನ ಬ್ಯಾಟಿಂಗ್‌ಗೆ ಹೆಸರುವಾಸಿ. ಇವರು ಒಂದೊಮ್ಮೆ ನೆಲಕಚ್ಚಿ ನಿಂತಲ್ಲಿ ದೊಡ್ಡ ಸ್ಕೋರ್ ಮಾಡಬಹುದು. ಇವರು 2024ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು. ಅಂದಿನಿಂದ ಅಭಿಷೇಕ್ ಟೀಮ್ ಇಂಡಿಯಾದ ಖಾಯಂ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ.

ಅಭಿಷೇಕ್ ಶರ್ಮಾ ತಮ್ಮ ನೈಜ್ಯ ಆಟದಿಂದಲೇ ಹೆಸರುವಾಸಿ. ಇವರು ಇಲ್ಲಿಯವರೆಗೆ 17 ಟಿ20 ಪಂದ್ಯಗಳನ್ನು ಆಡಿದ್ದು 535 ರನ್ ಸಿಡಿಸಿದ್ದಾರೆ. ಈ ವೇಳೆ ಇವರು ಬ್ಯಾಟ್ ನಿಂದ 2 ಶತಕ ಹಾಗೂ 2 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇವರು ಇಂಗ್ಲೆಂಡ್ ವಿರುದ್ಧದ T20 ಪಂದ್ಯದಲ್ಲಿ ಅವರು 135 ರನ್‌ಗಳ ಇನ್ನಿಂಗ್ಸ್ ಆಡಿದರು.
ಟೀಮ್ ಇಂಡಿಯಾದ ವಿಕೆಟ್ ಕೀಪರ್ ಆಗಿ ಕಾಣಿಸಿಕೊಳ್ಳುವ ಸಂಜು ಸ್ಯಾಮ್ಸನ್, ಸ್ಥಿರ ಪ್ರದರ್ಶನ ನೀಡಿದ್ದಾರೆ. ಇವರು ಈಗಾಗಲೇ ಭಾರತದ ಪರ ಟಿ20ಗೆ ಪದಾರ್ಪಣೆ ಮಾಡಿ ದಶಕಗಳು ಕಳೆದಿವೆ. ಇವರು ಈಗಾಗಲೇ ಅಮೋಘ ಬ್ಯಾಟಿಂಗ್ ನಡೆಸಿ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ. ಇಲ್ಲಿಯವರೆಗೆ 42 ಟಿ20 ಪಂದ್ಯಗಳಲ್ಲಿ ಒಟ್ಟು 861 ರನ್‌ಗಳನ್ನು ಗಳಿಸಿದ್ದಾರೆ, ಇದರಲ್ಲಿ 3 ಶತಕಗಳು ಮತ್ತು 2 ಅರ್ಧಶತಕಗಳು ಸೇರಿವೆ.

ಯಶಸ್ವಿ ಜೈಸ್ವಾಲ್ 2023 ರಲ್ಲಿ ಭಾರತದ ಪರ ಟಿ20ಗೆ ಪದಾರ್ಪಣೆ ಮಾಡಿದ್ದರು. ಈ ವೇಳೆ 23 ಪಂದ್ಯಗಳಲ್ಲಿ ಒಟ್ಟು 723 ರನ್‌ಗಳನ್ನು ಗಳಿಸಿದ್ದಾರೆ, ಇದರಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕಗಳು ಸೇರಿವೆ.
ಶುಬ್ಮನ್ ಗಿಲ್ 2023 ರಲ್ಲಿ ಭಾರತೀಯ ತಂಡಕ್ಕಾಗಿ ಟಿ 20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು, 21 ಟಿ 20 ಐ ಪಂದ್ಯಗಳಲ್ಲಿ ಒಟ್ಟು 578 ರನ್ ಗಳಿಸಿದ್ದಾರೆ.