Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯಾ ಕಪ್‌ ಟ್ರೋಫಿ: ಬಿಸಿಸಿಐ ಮಾಸ್ಟರ್‍ ಪ್ಲ್ಯಾನ್‌ ರೆಡಿ

ದುಬೈನಲ್ಲಿ ನಡೆದ ಏಷ್ಯಾ ಕಪ್ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಭಾರತ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಭಾರತ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದರೂ, ಬರೀ ಗೈಯಲ್ಲಿ ತವರಿಗೆ ಮರಳಿತು. ತಾನು ಗೆದ್ದ ಟ್ರೋಫಿಯನ್ನು ತನಗೆ ನೀಡುವಂತೆ ಬಿಸಿಸಿಐ ಪದೆ ಪದೇ ಎಸಿಸಿಗೆ ದೂರನ್ನು ನೀಡಿತ್ತು. ಆದರೆ ಇದಕ್ಕೆ ಯಾವುದೇ ರಿಸ್ಪಾನ್ಸ್‌ ಬಾರದ ಹಿನ್ನೆಲೆಯಲ್ಲಿ ಬಿಸಿಸಿಐ ಈಗ ದೊಡ್ಡ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ.

ದುಬೈನಲ್ಲಿ ನಡೆದ ಏಷ್ಯಾ ಕಪ್‌ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಭಾರತ, ಪಾಕ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈ ವೇಳೆ ಭಾರತ ಸಮಾರೋಪ ಸಮಾರಂಭವನ್ನು ಬಹಿಷ್ಕರಿಸಿತ್ತು. ಸಮಾರೋಪ ಸಮಾರಂಭದಲ್ಲಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್‌ ನಖ್ವಿ ಭಾಗವಹಿಸಿದ್ದರಿಂದ ಈ ಸಮಾರಂಭವನ್ನು ಭಾರತ ಬಹಿಷ್ಕರಿಸಿತ್ತು. ನಖ್ವಿ ಇದ್ದ ವೇದಿಕೆಯನ್ನು ತಾನು ಏರುವುದಿಲ್ಲ ಎಂದು ಭಾರತ ಬಹಿರಂಗ ಪಡಿಸಿತ್ತು. ಅಲ್ಲದೆ ಅವರಿಂದ ತಾನು ಟ್ರೋಫಿ ಪಡೆಯುವುದಿಲ್ಲ ಎಂದು ಸ್ಪಷ್ಟ ಪಡಿಸಿತ್ತು. ಇದಾಗಿ ಈಗ ದಿನಗಳೇ ಕಳೆದಿವೆ. ಆದರೂ ಸಹ ಭಾರತ ತಾನು ಗೆದ್ದ ಟ್ರೋಫಿಯನ್ನು ಇನ್ನು ಪಡೆಯಲು ಈಗ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ.

Asia Cup Trophy Tangle BCCI to Take ACC Controversy to ICC Over Unreceived Title

ಏಷ್ಯಾ ಕಪ್ ಟ್ರೋಫಿಯನ್ನು ಪಾಕ್‌ಗೆ ಕೊಂಡೊಯ್ದಿದ್ದ ಮೊಹ್ಸಿನ್ ನಖ್ವಿ, ಹಲವು ಟೀಕೆಗಳ ಬಳಿಕ ಟ್ರೋಫಿ ಮರಳಿಸಿದ್ದರು. ಈಗ ಈ ಟ್ರೋಫಿ ದುಬೈನಲ್ಲಿರುವ ಎಸಿಸಿ ಕಚೇರಿಯಲ್ಲಿ ಭದ್ರವಾಗಿ ಲಾಕರ್‌ನಲ್ಲಿದೆ. ಈ ಬಗ್ಗೆ ಬಿಸಿಸಿಐ, ಎಸಿಸಿಗೆ ಇ-ಮೇಲ್‌ ಮಾಡಿ ತನಗೆ ಟ್ರೋಫಿ ನೀಡುವಂತೆ ಕೇಳಿಕೊಂಡಿತ್ತು. ಅಲ್ಲದೆ ಟ್ರೋಫಿ ನೀಡದೇ ಇದ್ದ ಪಕ್ಷದಲ್ಲಿ ಐಸಿಸಿ ಮುಂದೆ ದೂರು ನೀಡಲು ನಿರ್ಧರಿಸುವುದಾಗಿ ತಿಳಿಸಿತ್ತು. ಈಗ ಬಿಸಿಸಿಐ ಬರೆದ ಇ-ಮೇಲ್‌ಗೆ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲ ಬಿಸಿಸಿಐ ಈ ವಿಷಯವನ್ನು ಐಸಿಸಿ ಮುಂದೆ ಪ್ರಸ್ತಾಪಿಸಲು ಪ್ಲ್ಯಾನ್ ಮಾಡಿಕೊಂಡಿದೆ.

ಟ್ರೋಫಿ ಒಯ್ಯುವ ಹಕ್ಕಿಲ್ಲ

ಮಾಧ್ಯಮ ವರದಿಗಳ ಪ್ರಕಾರ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಬಿಸಿಸಿಐ ಕಾನೂನಿನ ಪ್ರಕಾರ ಅಗತ್ಯವಿರುವ ಪ್ರತಿಯೊಂದು ಹೆಜ್ಜೆಯನ್ನೂ ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ. ಇನ್ನು ಸೆಪ್ಟಂಬರ್ 30 ರಂದು ಎಸಿಸಿ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಏಷ್ಯಾ ಕಪ್ ಟ್ರೋಫಿ ಪಡೆಯುವುದು ನಮ್ಮ ಹಕ್ಕು. ನಖ್ವಿ ಅವರು ಈ ಟ್ರೋಫಿಯನ್ನು ಮೈದಾನದಿಂದ ಹೊರಕ್ಕೆ ತೆಗೆದುಕೊಂಡು ಹೋಗಲು ಅವರಿಗೆ ಯಾವುದೇ ಹಕ್ಕಿಲ್ಲ ಎಂದು ತಿಳಿಸಿತ್ತು.

Story first published: Wednesday, October 22, 2025, 9:00 [IST]
Other articles published on Oct 22, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+