ದಾಖಲೆಗಳು, ಮೈಲಿಗಲ್ಲುಗಳು ನನಗೆ ಅಪ್ರಸ್ತುತ: ಅರ್ಧ ಶತಕ ಬಾರಿಸಿದ ವಿರಾಟ್ ಕೊಹ್ಲಿ ಖಡಕ್ ಹೇಳಿಕೆ

ಏಷ್ಯಾ ಕಪ್‌ನ ಎರಡನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ್ದು ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಸೂರ್ಯಕುಮಾರ್ ಯಾದವ್ ಜೊತೆಗೆ ಮೂರನೇ ವಿಕೆಟ್‌ಗೆ 98 ರನ್‌ಗಳ ಜೊತೆಯಾಟ ನೀಡಿದ್ದಾರೆ. ಈ ಭರ್ಜರಿ ಪ್ರದರ್ಶನದ ಬಳಿಕ ವಿರಾಟ್ ಕೊಹ್ಲಿ ಮಾತನಾಡಿದ್ದು ಪಾಕಿಸ್ತಾನದ ವಿರುದ್ಧವೂ ಕೂಡ ಬ್ಯಾಟಿಂಗ್‌ಅನ್ನು ಚೆನ್ನಾಗಿ ಆನಂದಿಸಿರುವುದಾಗಿ ಹೇಳಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಕೊಹ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ವಿರಾಮ ಎಂದು ಪರಿಗಣಿಸಬಹುದಾದ ಆರು ವಾರಗಳ ವಿರಾಮ ಪಡೆದು ನಾನು ವಾಪಾಸಾಗಿದ್ದೇನೆ ಎಂದಿದ್ದಾರೆ. ಈ ಕಾರಣದಿಂದಾಗಿ ಮನಸ್ಸು ತಾಜಾತನದಿಂದ ಕೂಡಿದೆ ಎಂದು ಕೂಡ ಕೊಹ್ಲಿ ಹೇಳಿಕೊಂಡಿದ್ದಾರೆ.

ದೊಡ್ಡ ಬ್ರೇಕ್ ಪಡೆದು ಬಂದಿದ್ದೆ
"ನಾನು ಉತ್ತಮ ಪ್ರಮಾಣದ ವಿರಾಮವನ್ನು ಪಡೆದು ವಾಪಾಸಾಗಿದ್ದೇನೆ. ಆರು ವಾರಗಳ ವಿರಾಮ ಎಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ವಿರಾಮವೇ ಆಗಿದೆ. ಆದರೆ ನಾನು ಮಾನಸಿಕವಾಗಿ ಹೊಸತನದೊಂದಿಗೆ ಆಗಮಿಸಿದ್ದೇನೆ. ನಾನು ನನ್ನ ಕಳೆದ ಪಂದ್ಯದಲ್ಲಿ ಕೂಡ ಬ್ಯಾಟಿಂಗ್‌ಅನ್ನು ಚೆನ್ನಾಗಿ ಆನಂದಿಸಿದ್ದೇನೆ. ಈಗ ಹಾಂಕಾಂಗ್‌ನ ಉತ್ತಮ ಗುಣಮಟ್ಟದ ವೇಗವನ್ನು ಕೂಡ ಚೆನ್ನಾಗಿ ಆನಂದಿಸಿದ್ದೇನೆ" ಎಂದಿದ್ದಾರೆ ವಿರಾಟ್ ಕೊಹ್ಲಿ.

ದಾಖಲೆಗಳು, ಮೈಲಿಗಲ್ಲುಗಳು ಅಪ್ರಸ್ತುತ
ಮುಂದುವರಿದು ಮಾತನಾಡಿದ ವಿರಾಟ್ ಕೊಹ್ಲಿ ತಾನ ದಾಖಲೆಗಳು ಮೈಲಿಗಲ್ಲುಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದಿದ್ದಾರೆ. "ನನ್ನ ಜ್ಞಾನ ಏನಿದೆ ಅದನ್ನು ನಾನು ಬಳಸಿಕೊಳ್ಳುತ್ತಿದ್ದೇನೆ. ಬಹಳ ಕಾಲದಿಂದ ತಂಡದ ಪರವಾಗಿ ನಾನು ಆಡುತ್ತಿದ್ದೇನೆ. ಬ್ಯಾಟಿಂಗ್‌ನಲ್ಲಿ ಎರಡು ಉತ್ತಮ ಇನ್ನಿಂಗ್ಸ್‌ಗಳು ಬಂದಿರುವುದು ಖುಷಿ ನೀಡಿದೆ. ನನ್ನ ಪಾಲಿಗೆ ಮೈಲಿಗಲ್ಲುಗಳು, ಅಂಕಿಅಂಶಗಳು, ದಾಖಲೆಗಳು ಅಪ್ರಸ್ತುತ. ನೀವು ಬ್ಯಾಟಿಂಗ್ ಮಾಡುವಾಗ ಎಷ್ಟು ಆನಂದಿಸುತ್ತೀರಿ ಎಂಬುದು ಮುಖ್ಯವಾಗುತ್ತದೆ. ನಾನೀಗ ಬಹಳ ಉತ್ತಮವಾದ ಅನುಭವ ಪಡೆದುಕೊಳ್ಳುತ್ತಿದ್ದೇನೆ" ಎಂದಿದ್ದಾರೆ ವಿರಾಟ್ ಕೊಹ್ಲಿ.

ಕೊಹ್ಲಿ ಪ್ರದರ್ಶನದಿಂದ ಅಭಿಮಾನಿಗಳು ನಿರಾಳ
ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೀಡಿದ ಪ್ರದರ್ಶನದಿಂದ ಕೊಹ್ಲಿ ಅಭಿಮಾನಿಗಳು ನಿರಾಳಗೊಂಡಿದ್ದಾರೆ. ಪಾಕಿಸ್ತಾನ ಹಾಗೂ ಹಾಂಕಾಂಕ್ ವಿರುದ್ಧ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಂಕಾಂಗ್ ವಿರುದ್ಧ ಕೊಹ್ಲಿ ಅರ್ಧ ಶತಕವನ್ನು ಕೂಡ ಸಿಡಿಸಿರುವುದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿರುವ ಸಾಧ್ಯತೆಯಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾದ ಇನ್ನಿಂಗ್ಸ್‌ಗಳನ್ನು ಕೊಹ್ಲಿಯಿಮದ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.
ಟೀಮ್ ಇಂಡಿಯಾ ಸಂಪೂರ್ಣ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್), ರವೀಂದ್ರ ಜಡೇಜಾ, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ದೀಪಕ್ ಹೂಡಾ, ರವಿಚಂದ್ರನ್ ಅಶ್ವಿನ್, ರವಿ ಬಿಷ್ಣೋಯ್, ಹಾರ್ದಿಕ್ ಪಾಂಡ್ಯ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications