
ಆಟಗಾರರ ಆಯ್ಕೆಯಲ್ಲಿ ಎಡವಿತು
ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಸೋತ ಬಳಿಕ ಭಾರತ ತಂಡ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾಜಿ ಭಾರತ ತಂಡ ಆಡುವ ಬಳಗವನ್ನು ಆಯ್ಕೆ ಮಾಡುವ ವಿಚಾರದಲ್ಲಿ ಎಡವಿತು ಎಂದಿದ್ದಾರೆ. ಇದು ತಂಡದ ಮೇಲೆ ಕೆಟ್ಟದಾಗಿ ಪ್ರಭಾವ ಬೀರಿದ್ದು ಸೋಲಿಗೆ ಕಾರಣವಾಯಿತು. ಏಷ್ಯಾ ಕಪ್‌ನಲ್ಲಿ ಭಾರತ ಇನ್ನೂ ಅಂತಿಮ ಆಡುವ ಬಳಗದವನ್ನು ನಿರ್ಧರಿಸಲು ಸಾಧ್ಯವಾಗಿಯೇ ಇಲ್ಲ ಎಂದಿದ್ದಾರೆ.

ಗುಣಮಟ್ಟದ ಆಟಗಾರರ ಪಡೆ ಹೊಂದಿದ್ದರೂ ವೈಫಲ್ಯ
ವಾಸಿಂ ಜಾಫರ್ ಪ್ರಕಾರ ಭಾರತ ತಂಡ ಪ್ರಮುಖ ಆಟಗಾರರ ಅಲಭ್ಯತೆಯ ಮಧ್ಯೆಯೂ ಗುಣಮಟ್ಟದ ಆಟಗಾರರ ಪಡೆಯನ್ನು ಹೊಂದಿತ್ತು ಆದರೆ ಸೂಕ್ತವಾದ ಸಂಯೋಜನೆಯೊಂದಿಗೆ ಆಡಲು ವಿಫಲವಾಯಿತು ಎಂದಿದ್ದಾರೆ. "ಈ ತಂಡ ಸಾಕಷ್ಟು ಗುಣಮಟ್ಟವನ್ನು ಹೊಂದಿದೆ. ಇದು ಬುಮ್ರಾ ಮತ್ತು ಹರ್ಷಲ್ ಪಟೇಲ್ ಮತ್ತು ರವೀಂದ್ರ ಜಡೇಜಾ ಅವರ ಅನುಪಸ್ಥಿತಿಯಿಂದಾಗಿ ಅನುಭವಿಸಿದ ಹಿನ್ನಡೆ ಅಲ್ಲ. ಸೂಕ್ತವಾದ ಸಂಯೋಜನೆಯೊಂದಿಗೆ ಆಡದಿರುವ ಕಾರಣದಿಂದಾಗಿ ಈ ಪರಿಸ್ಥಿತಿ ಎದುರಿಸುವಂತಾಗಿದೆ ಅಥವಾ ಆಟಗಾರರು ನಿರ್ಣಾಯಕ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿರುವುದು ಇದಕ್ಕೆ ಕಾರಣ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್.

ವಿಶ್ವಕಪ್‌ಗೆ ತಂಡ ಶೀಘ್ರ ಘೋಷಣೆ
ಈ ಮಧ್ಯೆ ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಭಾರತ ತಂಡದ ಘೋಷಣೆಯನ್ನು ಶೀಘ್ರದಲ್ಲಿಯೇ ಮಾಡುವ ಸಾಧ್ಯತೆಯಿದೆ. ಏಷ್ಯಾ ಕಪ್‌ನಲ್ಲಿನ ಪ್ರದರ್ಶನವನ್ನು ಗಮನಿಸಿಕೊಂಡು ಕೆಲ ಬದಲಾವಣೆ ಮಾಡಿಕೊಳ್ಳಲು ಆಯ್ಕೆ ಸಮಿತಿ ನಿರ್ಧರಿದ್ದ ಕಾರಣ ಭಾರತ ತಂಡದ ಆಯ್ಕೆಯನ್ನು ತಡವಾಗಿ ಮಾಡಲು ನಿರ್ಧರಿಸಲಾಗಿತ್ತು. ಇದೀಗ ಭಾರತದ ಏಷ್ಯಾ ಕಪ್ ಹೋರಾಟ ಬಹುತೇಕ ಅಂತ್ಯವಾಗಿರುವ ಕಾರಣ ಶೀಘ್ರದಲ್ಲಿಯೇ ಆಯ್ಕೆ ಸಮಿತಿ ಸಭೆ ಸೇರಲಿದ್ದು ತಂಡವನ್ನು ಘೋಷಣೆ ಮಾಡಲಿದ್ದಾರೆ. ಇನ್ನು ಈ ತಂಡದಲ್ಲಿ ಜಸ್ಪ್ರೀತ್ ಬೂಮ್ರಾ, ಹರ್ಷಲ್ ಪಟೇಲ್ ಕಮ್‌ಬ್ಯಾಕ್ ಮಾಡಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದ್ದು ಗಾಯದಿಂದ ಚೇತರಿಸಿಕೊಂಡಿದ್ದರೆ ಆಯ್ಕೆಯಾಗುವ ಸಾಧ್ಯತೆಯಿದೆ. ಮತ್ತೊಂದೆಡೆ ದೀಪಕ್ ಚಾಹರ್‌ಗೂ ಅವಕಾಶ ದೊರೆಯುವ ಬಗ್ಗೆ ಕುತೂಹಲವಿದೆ.

ಅಫ್ಘಾನಿಸ್ತಾನದ ವಿರುದ್ಧ ಔಪಚಾರಿಕ ಪಂದ್ಯ
ಇನ್ನು ಬುಧವಾರ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಪಾಕಿಸ್ತಾನ ಸೋಲಿಸುವ ಮೂಲಕ ಭಾರತ ಹಾಗೂ ಅಫ್ಘಾನಿಸ್ತಾನ ಎರಡು ತಂಡಗಳು ಕೂಡ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದೆ. ಆದರೆ ಇಂದು ಈ ಎರಡು ತಂಡಗಳು ಮುಖಾಮುಖಿಯಾಗುತ್ತಿದ್ದು ಇದು ಈ ಟೂರ್ನಿಯ ದೃಷ್ಟಿಯಿಂದ ಯಾವುದೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿಲ್ಲ.
ಇತ್ತಂಡಗಳ ಸಂಪೂರ್ಣ ಸ್ಕ್ವಾಡ್
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಾಹಲ್, ಅರ್ಶ್ದೀಪ್ ಸಿಂಗ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಆವೇಶ್ ಖಾನ್ , ರವಿ ಬಿಷ್ಣೋಯ್
ಅಫ್ಘಾನಿಸ್ತಾನ ತಂಡ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ (ನಾಯಕ), ಹಜರತುಲ್ಲಾ ಝಜೈ, ಇಬ್ರಾಹಿಂ ಜದ್ರಾನ್, ನಜಿಬುಲ್ಲಾ ಝದ್ರಾನ್, ಕರೀಮ್ ಜನತ್, ಅಜ್ಮತುಲ್ಲಾ ಒಮರ್ಝೈ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ಫರೀದ್ ಅಹ್ಮದ್ ಮಲಿಕ್, ಫರೀದ್ ಅಹ್ಮದ್ ಮಲಿಕ್, ಫರೀದ್ ಅಹ್ಮದ್ ಮಲಿಕ್, ಅಫ್ಸರ್ ಝಜೈ, ಉಸ್ಮಾನ್ ಘನಿ, ನವೀನ್-ಉಲ್-ಹಕ್, ನೂರ್ ಅಹ್ಮದ್


Click it and Unblock the Notifications












