ಬಾಂಗ್ಲಾದಲ್ಲಿ ಏಷ್ಯಾ XI vs ವಿಶ್ವ XI: ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ

ಧಾಕಾ, ಫೆಬ್ರವರಿ 15: ಸ್ಥಾಪಕರಾದ ಶೈಕ್ ಮುಜೀಬುರ್ ರಹ್ಮಾನ್ 100ನೇ ಜನ್ಮದಿನಾಚರಣೆಯ ಅಂಗವಾಗಿ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್, ಏಷ್ಯಾ XI ಮತ್ತು ವಿಶ್ವ XI ನಡುವೆ ಕ್ರಿಕೆಟ್ ಟೂರ್ನಿ ನಡೆಸಲು ಉದ್ದೇಶಿಸಿದೆ. ಈ ಪಂದ್ಯಕ್ಕೆ ಸಂಬಂಧಿಸಿ, ಬಾಂಗ್ಲಾ ಶನಿವಾರ (ಫೆಬ್ರವರಿ 15) ವೇಳಾಪಟ್ಟಿ ಪ್ರಕಟಿಸಿದೆ.
ಪಂದ್ಯಗಳು ಮಾರ್ಚ್ 18 ಮತ್ತು ಮಾರ್ಚ್ 21ರಂದು ಧಾಕಾದ ಶೇರ್ ಇ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತದ ಐವರು ಆಟಗಾರರು ಏಷ್ಯಾ XI ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಆಟಗಾರರು ಒಂದೇ ಏಷ್ಯಾ XI ತಂಡದಲ್ಲಿ ಇರಲೂಬಹುದು. ಆದರೆ ಇದು ಸೌರವ್ ಗಂಗೂಲಿ ಅವರನ್ನ ಅವಲಂಭಿಸಿ ನಿರ್ಧಾರವಾಗಲಿದೆ,' ಎಂದು ಬಿಸಿಸಿಐ ಸಹ ಕಾರ್ಯದರ್ಶಿ ಜಯೇಶ್ ಜಾರ್ಜ್ ತಿಳಿಸಿದ್ದಾರೆ.
ಟಿ20 ಮಾದರಿಯ ಟೂರ್ನಿ ಇದಾಗಿದ್ದು, ಎರಡು ಪಂದ್ಯಗಳನ್ನು ಒಳಗೊಂಡಿರಲಿದೆ. ಧಾಕಾದಲ್ಲಿ ಈ ಟೂರ್ನಿ ನಡೆಯುವಾಗ ಭಾರತಕ್ಕೆ ಪ್ರವಾಸ ಕೈಗೊಂಡಿರುವ ದಕ್ಷಿಣ ಆಫ್ರಿಕಾ ತಂಡ ಏಕದಿನ ಸರಣಿಯನ್ನು ಆಡುತ್ತಿರಲಿದೆ. ಇತ್ತಂಡಗಳ ಮೂರನೇ ಪಂದ್ಯದ ದಿನವೇ ಏಷ್ಯಾ XI ಪಂದ್ಯವಿರಲಿದೆ.
ಪಂದ್ಯಗಳ ವೇಳಾಪಟ್ಟಿ
* ಮಾರ್ಚ್ 18, ಬುಧವಾರ: ಏಷ್ಯಾ ಇಲೆವೆನ್ vs ವರ್ಲ್ಡ್ ಇಲೆವೆನ್, 1ನೇ ಟಿ20ಐ - 6:00 PM (ಭಾರತೀಯ ಕಾಲಮಾನ), ಧಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ.
* ಮಾರ್ಚ್ 21, ಶನಿವಾರ: ಏಷ್ಯಾ ಇಲೆವೆನ್ ವರ್ಸಸ್ ವರ್ಲ್ಡ್ ಇಲೆವೆನ್, 2ನೇ ಟಿ20ಐ - 6:00 PM (ಭಾರತೀಯ ಕಾಲಮಾನ), ಧಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications