Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asia cup 2023: ಭಾರತಕ್ಕೆ ನೇಪಾಳದ ಸವಾಲು, ಆಡುವ ಬಳಗ, ಪಂದ್ಯದ ಸಂಪೂರ್ಣ ಮಾಹಿತಿ

ಭಾರತ ತಂಡಕ್ಕೆ ಎರಡನೇ ಪಂದ್ಯದಲ್ಲಿ ಎದುರಾಳಿಯಾಗಿ ನೇಪಾಳ ತಂಡ ಕಣಕ್ಕಿಳಿಯಲಿದೆ. ಇದೇ ಮೊದಲ ಬಾರಿಗೆ ಏಷ್ಯಾಕಪ್ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದುಕೊಂಡಿರುವ ನೇಪಾಳ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಿತ್ತು. ಆ ಪಂದ್ಯದಲ್ಲಿ ಪಾಕಿಸ್ತಾನ ತಂಡ ನೇಪಾಳವನ್ನು ಸುಲಭವಾಗಿ ಮಣಿಸಿತ್ತು. ಇದೀಗ ಏಷ್ಯಾದ ಮತ್ತೊಂದು ಬಲಿಷ್ಠ ತಂಡವಾದ ಭಾರತ ತಂಡವನ್ನು ಎದುರಿಸಲಿದೆ.

ಭಾರತ ಹಾಗೂ ಪಾಕಿಸ್ತಾನ ತಮಡಗಳು ಲೀಗ್ ಹಂತದಲ್ಲಿ ಮುಖಾಮುಖಿಯಾದ್ದ ಪಂದ್ಯ ಮಳೆಗೆ ಆಹುತಿಯಾಗಿದೆ. ಹೀಗಾಗಿ ನೇಪಾಳ ವಿರುದ್ಧದ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲುವು ಅಗತ್ಯವಾಗಿದ್ದು ಈ ಮೂಲಕ ಸೂಪರ್ 4 ಹಂತದಲ್ಲಿ ಸ್ಥಾನವನ್ನು ಖಚಿತಪಡಿಸಿಕೊಳ್ಳಬೇಕಿದೆ. ಇನ್ನು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ವಿಭಾಗಕ್ಕೆ ಉತ್ತಮ ಉತ್ತಮ ಸವಾಲು ದೊರೆತಿತ್ತು. ಅಗ್ರ ಕ್ರಮಾಂಕ ಹಿನ್ನಡೆ ಅನುಭವಿಸಿದ್ದರೂ ಮಧ್ಯಮ ಕ್ರಮಾಂಕದಿಂದ ಅದ್ಭುತ ಪ್ರದರ್ಶನ ಬಂದಿತ್ತು.

Asiacup 2023, India vs Nepal match preview, probable playing XI and pitch report

ಪಂದ್ಯದ ಸಮಯ ಹಾಗೂ ನೇರಪ್ರಸಾರದ ಮಾಹಿತಿ

ಭಾರತ ಹಾಗೂ ನೇಪಾಳ ತಂಡಗಳ ನಡುವಿನ ಪಂದ್ಯ ಸೋಮವಾರ ಸೆಪ್ಟೆಂಬರ್ 4ರಂದು ನಡೆಯಲಿದ್ದು ಶ್ರೀಲಂಕಾದ ಕ್ಯಾಂಡಿಯಲ್ಲಿರುವ ಪಲ್ಲೆಕೆಲೆ ಕ್ರೀಡಾಂಗಣದಲ್ಲಿಯೇ ಈ ಪಂದ್ಯ ಕೂಡ ಆಯೋಜನಯಾಗಲಿದೆ. ಸ್ಟಾರ್‌ಸ್ಪೋರ್ಟ್ಸ್ ವಾಹಿನಿ ಈ ಪಂದ್ಯದ ನೇರಪ್ರಸಾರವನ್ನು ಮಾಡಲಿದ್ದು ಹಾಟ್‌ಸ್ಟಾರ್‌ಮಲ್ಲಿಯೂ ಪಂದ್ಯವನ್ನು ಲೈವ್‌ಸ್ಟ್ರೀಮಿಂಗ್ ಮೂಲಕ ವೀಕ್ಷಿಸಬಹುದು.

ಪಿಚ್ ರಿಪೋರ್ಟ್

ಪಲ್ಲೆಕೆಲೆ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗಕ್ಕೂ ಸಮಾನವಾಗಿ ನೆರವು ನೀಡುವ ಗುಣವನ್ನು ಹೊಂದಿದೆ. ವೇಗುಗಳಿಗಿಂತಲೂ ಇಲ್ಲಿ ಸ್ಪಿನ್ನರ್‌ಗಳು ಸಾಮಾನ್ಯವಾಗಿ ಪರಿಣಾಮಕಾರಿಯಾಗಿರುತ್ತಾರೆ. ಆದರೆ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ವೇಗಿಗಳು ಸಂಪೂರ್ಣ ಮೇಲುಗೈ ಸಾಧಿಸಿದ್ದಯ ಕೂಡ ಗಮನಿಸಬಹುದು.

ಇನ್ನು ಭಾರತ ಹಾಗೂ ನೇಪಾಳ ತಂಡಗಳು ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಏಕದಿನ ಮಾದರಿಯಲ್ಲಿ ಮುಖಾಮುಖಿಯಾಗುತ್ತಿದೆ ಎನ್ನುವುದು ಈ ಪಂದ್ಯದ ವಿಶೇಷತೆ.

ಇತ್ತಂಡಗಳ ಆಡುವ ಬಳಗ

ಭಾರತ ಸಂಭಾವ್ಯ ಆಡುವ ಬಳಗ: ರೋಹಿತ್ ಶರ್ಮಾ, ಸಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್

ನೇಪಾಳ ಸಂಭಾವ್ಯ ಆಡುವ ಬಳಗ: ಕುಶಾಲ್ ಭುರ್ಟೆಲ್, ರೋಹಿತ್ ಪೌಡೆಲ್ (ನಾಯಕ), ಕುಶಾಲ್ ಮಲ್ಲಾ, ಗುಲ್ಸನ್ ಝಾ, ಸೋಂಪಾಲ್ ಕಾಮಿ, ಪ್ರತಿಸ್ ಜಿಸಿ, ಆಸಿಫ್ ಶೇಖ್ (ವಿಕೆಟ್ ಕೀಪರ್), ಭೀಮ್ ಶರ್ಕಿ, ಪವನ್ ಸರ್ರಾಫ್, ಲಲಿತ್ ರಾಜ್ಬನ್ಶಿ, ಅರ್ಜುನ್ ಸೌದ್

ಸಂಪೂರ್ಣ ಸ್ಕ್ವಾಡ್

ನೇಪಾಳ: ದೇವ್ ಖಾನಲ್, ಕಿಶೋರ್ ಮಹತೋ, ಸೂರ್ಯ ತಮಾಂಗ್, ಸಂದೀಪ್ ಜೋರಾ, ಕುಶಾಲ್ ಭುರ್ಟೆಲ್, ರೋಹಿತ್ ಪೌಡೆಲ್ (ನಾಯಕ), ಕುಶಾಲ್ ಮಲ್ಲಾ, ಗುಲ್ಸನ್ ಝಾ, ಸೋಂಪಾಲ್ ಕಾಮಿ, ಪ್ರತಿಸ್ ಜಿಸಿ, ಆಸಿಫ್ ಶೇಖ್ (ವಿಕೆಟ್ ಕೀಪರ್ ), ಭೀಮ್ ಶಾರ್ಕಿ, ಪವನ್ ಸರ್ರಾಫ್, ಲಲಿತ್ ರಾಜ್ಬನ್ಶಿ, ಅರ್ಜುನ್ ಸೌದ್

ಭಾರತ ಸಂಪೂರ್ಣ ಸ್ಕ್ವಾಡ್: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ.

Story first published: Sunday, September 3, 2023, 16:23 [IST]
Other articles published on Sep 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+