Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asian Games 2023 Cricket: ನೇಪಾಳ ವಿರುದ್ಧ ಗೆದ್ದು ಬೀಗಿದ ಭಾರತ ತಂಡ ಸೆಮಿಫೈನಲ್‌ಗೆ ಲಗ್ಗೆ

ಮಂಗಳವಾರ, ಅಕ್ಟೋಬರ್ 3ರಂದು ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 2023ರ ಏಷ್ಯನ್ ಗೇಮ್ಸ್‌ನ ಕ್ರಿಕೆಟ್ ಪಂದ್ಯಾವಳಿಯ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ನೇಪಾಳ ವಿರುದ್ಧ ಬಲಿಷ್ಠ ಭಾರತ ತಂಡ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರ ಭರ್ಜರಿ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತ್ತು.

Asian Games 2023 Cricket: India Defeat Nepal By 23 Runs And Enters To Semifinal

203 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ನೇಪಾಳ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 179 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 23 ರನ್‌ಗಳ ವಿರೋಚಿತ ಸೋಲು ಕಂಡಿತು.

ನೇಪಾಳ ತಂಡದ ಪರ ಕುಶಾಲ್ ಭುರ್ಟೆಲ್ 28 ರನ್, ಆಸೀಫ್ ಶೇಖ್ 10 ರನ್, ಕುಶಾಲ್ ಮಲ್ಲ 29 ರನ್, ರೋಹಿತ್ ಪೌಡೆಲ್ 3 ರನ್, ದೀಪೇಂದ್ರ ಸಿಂಗ್ ಐರಿ 32 ರನ್, ಸಂದೀಪ್ ಜೋರಾ 29 ರನ್, ಸೋಂಪಾಲ್ ಕಾಮಿ 7 ರನ್, ಗುಲ್ಸನ್ ಝಾ 6 ರನ್, ಕರಣ್ ಕೆಸಿ 18 ರನ್, ಸಂದೀಪ್ ಲ್ಯಾಮಿಶ್ಚಾನೆ 5 ರನ್ ಗಳಿಸಿದರು.

ಭಾರತ ತಂಡದ ಪರ ಬೌಲಿಂಗ್‌ನಲ್ಲಿ ರವಿ ಬಿಷ್ಣೋಯ್ 4 ಓವರ್‌ಗಳಲ್ಲಿ 24 ರನ್ ನೀಡಿ 3 ವಿಕೆಟ್ ಪಡೆದರೆ, ಅವೇಶ್ ಖಾನ್ 4 ಓವರ್‌ಗಳಲ್ಲಿ 32 ರನ್ ನೀಡಿ 3 ವಿಕೆಟ್ ಕಬಳಿಸಿದರು. ಉಳಿದಂತೆ ಅರ್ಶ್‌ದೀಪ್ ಸಿಂಗ್ 2 ವಿಕೆಟ್ ಮತ್ತು ರವಿಶ್ರೀನಿವಾಸ್ ಸಾಯಿ ಕಿಶೋರ್ 1 ವಿಕೆಟ್ ಪಡೆದರು.

Asian Games 2023 Cricket: India Defeat Nepal By 23 Runs And Enters To Semifinal

ಇದಕ್ಕೂ ಮುನ್ನ ಭಾರತದ ಇನ್ನಿಂಗ್ಸ್ ಆರಂಭಿಸಿದ್ದ ನಾಯಕ ರುತುರಾಜ್ ಗಾಯಕ್ವಾಡ್ ಮತ್ತು ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್‌ಗೆ 9.5 ಓವರ್‌ಗಳಲ್ಲಿ 103 ರನ್‌ಗಳ ಜೊತೆಯಾಟದ ಮೂಲಕ ಉತ್ತಮ ಆರಂಭ ಒದಗಿಸಿದರು.

ಈ ವೇಳೆ 23 ಎಸೆತಗಳಲ್ಲಿ 4 ಬೌಂಡರಿ ಸಮೇತ 25 ರನ್ ಗಳಿಸಿದ್ದ ರುತುರಾಜ್ ಗಾಯಕ್ವಾಡ್ ವಿಕೆಟ್ ಒಪ್ಪಿಸಿದರು. ನಂತರ ಬಂದ ತಿಲಕ್ ವರ್ಮಾ 2 ರನ್, ಜಿತೇಶ್ ಶರ್ಮಾ 5 ರನ್ ಗಳಿಸಿ ಬೇಗನೇ ಔಟಾದರು.

ಆ ಬಳಿಕ ಜೊತೆಗೂಡಿದ ಶಿವಂ ದುಬೆ ನಿಧಾನಗತಿ ಬ್ಯಾಟಿಂಗ್ ಆರಂಭಿಸಿದರು. ಆರಂಭಿಕ ಯಶಸ್ವಿ ಜೈಸ್ವಾಲ್ ಕೇವಲ 49 ಎಸೆತಗಳನ್ನು ಎದುರಿಸಿ 8 ಬೌಂಡರಿ ಮತ್ತು 7 ಸಿಕ್ಸರ್‌ಗಳ ನೆರವಿನಿಂದ 100 ರನ್ ಬಾರಿಸಿ ಔಟಾದರು.

ಕೊನೆಯಲ್ಲಿ ಶಿವಂ ದುಬೆ ಮತ್ತು ರಿಂಕು ಸಿಂಗ್ ಹೊಡಿಬಡಿ ಆಟ ಪ್ರದರ್ಶಿಸಿದರು. ಶಿವಂ ದುಬೆ 19 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 25 ರನ್ ಗಳಿಸಿದರೆ, ಸ್ಫೋಟಕ ಬ್ಯಾಟರ್ ರಿಂಕು ಸಿಂಗ್ 15 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ಸಹಾಯದಿಂದ 37 ರನ್ ಬಾರಿಸಿದರು. ಇವರಿಬ್ಬರು ಮುರಿಯದ 5ನೇ ವಿಕೆಟ್‌ಗೆ 22 ಎಸೆತಗಳಲ್ಲಿ 52 ರನ್‌ಗಳ ಜೊತೆಯಾಟವಾಡಿದರು.

ಇನ್ನು ಬೌಲಿಂಗ್‌ನಲ್ಲಿ ನೇಪಾಳ ತಂಡದ ಪರ ದೀಪೆಂದ್ರ್ ಸಿಂಗ್ ಐರಿ 4 ಓವರ್‌ಗಳಲ್ಲಿ 31 ರನ್ ನೀಡಿ 2 ವಿಕೆಟ್ ಪಡೆದರೆ, ಸೋಂಪಾಲ್ ಕಾಮಿ 4 ಓವರ್‌ಗಳಲ್ಲಿ 38 ರನ್ ನೀಡಿ 1 ವಿಕೆಟ್ ಮತ್ತು ಸಂದೀಪ್ ಲ್ಯಾಮಿಶ್ಚಾನೆ 3 ಓವರ್‌ಗಳಲ್ಲಿ 28 ರನ್ ನೀಡಿ 1 ವಿಕೆಟ್ ಕಬಳಿಸಿದರು.

Story first published: Tuesday, October 3, 2023, 10:28 [IST]
Other articles published on Oct 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+