Asian Games 2023: ಭಾರತ vs ಮಲೇಷ್ಯಾ ಮಹಿಳಾ ತಂಡಗಳ ಟಾಸ್ ವರದಿ, ಆಡುವ 11ರ ಬಳಗ, Live ಸ್ಕೋರ್
ಗುರುವಾರ, ಸೆಪ್ಟೆಂಬರ್ 21ರಂದು ಚೀನಾದ ಹ್ಯಾಂಗ್‌ಝೌನಲ್ಲಿರುವ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್‌ನಲ್ಲಿ ನಡೆಯುತ್ತಿರುವ 2023ರ ಏಷ್ಯನ್ ಗೇಮ್ಸ್ ಕ್ವಾರ್ಟರ್‌ಫೈನಲ್ 1 ಪಂದ್ಯದಲ್ಲಿ ಮಲೇಷ್ಯಾ ಮಹಿಳಾ ತಂಡದ ವಿರುದ್ಧ ಭಾರತ ಮಹಿಳಾ ಕ್ರಿಕೆಟ್ ತಂಡವು ಚೊಚ್ಚಲ ಪಂದ್ಯವನ್ನಾಡುತ್ತಿದೆ.
ಟಾಸ್ ಗೆದ್ದ ಮಲೇಷ್ಯಾ ತಂಡದ ನಾಯಕಿ ವಿನಿಫ್ರೆಡ್ ಡುರಾಯಿಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಸ್ಮೃತಿ ಮಂಧಾನ ನಾಯಕತ್ವದ ಭಾರತ ಮಹಿಳಾ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.

ಹರ್ಮನ್‌ಪ್ರೀತ್ ಕೌರ್‌ಗೆ ಐಸಿಸಿ ಎರಡು ಪಂದ್ಯಗಳ ನಿಷೇಧ ಹೇರಿರುವುದರಿಂದ ಸ್ಮೃತಿ ಮಂಧಾನ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಐಸಿಸಿ ಮಹಿಳಾ ಟಿ20 ಶ್ರೇಯಾಂಕದಲ್ಲಿ ಅಗ್ರ ಏಷ್ಯನ್ ತಂಡಗಳಾಗಿರುವುದರಿಂದ ಕ್ವಾರ್ಟರ್‌ಫೈನಲ್‌ಗೆ ನೇರ ಪ್ರವೇಶ ಪಡೆದಿವೆ.
ಮತ್ತೊಂದೆಡೆ, ಮಲೇಷ್ಯಾ ಮಹಿಳಾ ತಂಡ ಅಂತಿಮ 8 ಹಂತಕ್ಕೆ ಅರ್ಹತೆ ಪಡೆಯಬೇಕಿತ್ತು. ಅವರು ಹಾಂಕಾಂಗ್ ಮಹಿಳಾ ತಂಡವನ್ನು 22 ರನ್‌ಗಳಿಂದ ಸೋಲಿಸಿ ಭಾರತದ ವಿರುದ್ಧ ಮುಖಾಮುಖಿಯಾಗಿದೆ.
9 ವರ್ಷಗಳ ನಂತರ ಏಷ್ಯನ್ ಗೇಮ್ಸ್‌ಗೆ ಕ್ರಿಕೆಟ್ ಪುನರಾಗಮನ ಮಾಡುತ್ತಿರುವುದರಿಂದ ಭಾರತವು ಚಿನ್ನದ ಪದಕ ಗೆಲ್ಲುವ ನೆಚ್ಚಿನ ತಂಡವಾಗಿದೆ. 2010 ಮತ್ತು 2014ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಚಿನ್ನದ ಪದಕ ಗೆದ್ದಿದ್ದರೆ, ಭಾರತ ತಂಡ ಈ ವರ್ಷ ಚೊಚ್ಚಲ ಪಂದ್ಯವನ್ನಾಡುತ್ತಿದೆ.
ಭಾರತ vs ಮಲೇಷ್ಯಾ ಮಹಿಳಾ ತಂಡಗಳ ಆಡುವ 11ರ ಬಳಗ
ಭಾರತ: ಸ್ಮೃತಿ ಮಂಧಾನ(ನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಕನಿಕಾ ಅಹುಜಾ, ರಿಚಾ ಘೋಷ್(ವಿಕೆಟ್ ಕೀಪರ್), ದೀಪ್ತಿ ಶರ್ಮಾ, ದೇವಿಕಾ ವೈದ್ಯ, ಅಮಂಜೋತ್ ಕೌರ್, ಪೂಜಾ ವಸ್ತ್ರಾಕರ್, ಮಿನ್ನು ಮಣಿ, ರಾಜೇಶ್ವರಿ ಗಾಯಕ್ವಾಡ್.
ಮಲೇಷ್ಯಾ: ಐನ್ನಾ ಹಮೀಜಾ ಹಾಶಿಮ್, ವಿನಿಫ್ರೆಡ್ ದುರೈಸಿಂಗಮ್(ನಾಯಕಿ), ಮಾಸ್ ಎಲಿಸಾ, ವಾನ್ ಜೂಲಿಯಾ(ವಿಕೆಟ್ ಕೀಪರ್), ಮಹಿರಾ ಇಜ್ಜತಿ ಇಸ್ಮಾಯಿಲ್, ಐನಾ ನಜ್ವಾ, ವಾನ್ ನಾರ್ ಝುಲೈಕಾ, ನೂರ್ ಅರಿಯಾನ್ನಾ ನಟ್ಯಾ, ಐಸ್ಯಾ ಎಲೀಸಾ, ನೂರ್ ದನಿಯಾ ಸ್ಯುಹದಾ, ನಿಕ್ ನೂರ್ ಅಟಿಯೆಲಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications