Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asian Games 2023: ಸೆಮಿಫೈನಲ್‌ನಲ್ಲಿ ಬಾಂಗ್ಲಾ ವಿರುದ್ಧ ಗೆದ್ದು ಫೈನಲ್ ತಲುಪಿದ ಭಾರತ ಮಹಿಳಾ ಕ್ರಿಕೆಟ್ ತಂಡ

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 2023ರ 19ನೇ ಏಷ್ಯನ್ ಗೇಮ್ಸ್‌ಗೆ ಶನಿವಾರ, ಸೆಪ್ಟೆಂಬರ್ 23ರಂದು ಅಧಿಕೃತವಾಗಿ ಅದ್ಧೂರಿ ಚಾಲನೆ ದೊರೆತಿದ್ದು, ಸೆಪ್ಟೆಂಬರ್ 24ರಂದು ಭಾರತದ ಕ್ರೀಡಾಪಟುಗಳು 2 ಬೆಳ್ಳಿ ಮತ್ತು 1 ಕಂಚಿನ ಪದಕದೊಂದಿಗೆ ಆರಂಭಿಸಿದ್ದಾರೆ.

ಇನ್ನು ಮಹಿಳಾ ಕ್ರಿಕೆಟ್ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಭಾರತ ಮಹಿಳಾ ತಂಡವು ಬಾಂಗ್ಲಾದೇಶ ಮಹಿಳಾ ತಂಡವನ್ನು 8 ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ಫೈನಲ್ ತಲುಪಿದ್ದು, ಚಿನ್ನ ಅಥವಾ ಬೆಳ್ಳಿ ಪದಕ ಖಚಿತಪಡಿಸಿದ್ದಾರೆ.

Asian Games 2023 Cricket: India Womens Team Beat Bangladesh By 8 Wickets To Reach The Final

ಭಾನುವಾರ ನಡೆದ ಸೆಮಿಫೈನಲ್‌ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ತನ್ನ ಚೊಚ್ಚಲ ಏಷ್ಯನ್ ಗೇಮ್ಸ್ ಫೈನಲ್‌ ತಲುಪಲು ಪೂಜಾ ವಸ್ತ್ರಾಕರ್ ಮಾರಕ ಬೌಲಿಂಗ್ ಪ್ರದರ್ಶನ ನೀಡಿದರು.

ಚೀನಾಗೆ ತೆರಳುವ ಮುನ್ನ ಅಂಜಲಿ ಸರ್ವಾಣಿ ಬದಲಿಗೆ ಬಲಗೈ ವೇಗಿ ಪೂಜಾ ವಸ್ತ್ರಾಕರ್ ಸ್ಥಾನ ಪಡೆದಿದ್ದರು. ಈ ಪಂದ್ಯದಲ್ಲಿ 4 ಓವರ್‌ಗಳಲ್ಲಿ 17 ರನ್ ನೀಡಿ 4 ವಿಕೆಟ್‌ ಪಡೆಯುವ ಮೂಲಕ ವೃತ್ತಿಜೀವನದ ಅತ್ಯುತ್ತಮ ಅಂಕಿಅಂಶಗಳನ್ನು ಹೊಂದಿದರು.

Asian Games 2023 Cricket: India Womens Team Beat Bangladesh By 8 Wickets To Reach The Final

ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಮಹಿಳಾ ತಂಡ 17.5 ಓವರ್‌ಗಳಲ್ಲಿ ಕೇವಲ 51 ರನ್‌ಗಳಿಗೆ ಆಲೌಟ್ ಆಯಿತು. 52 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಮಹಿಳಾ ತಂಡ 8.2 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಬಾಂಗ್ಲಾದೇಶ ತಂಡದ ಪರ ಆರಂಭಿಕರಾದ ಶಥಿ ರಾಣಿ ಮತ್ತು ಶಮಿಮಾ ಸುಲ್ತಾನಾ ಯಾವುದೇ ರನ್ ಗಳಿಸದೆ, ಮೊದಲ ಓವರ್‌ನಲ್ಲೇ ವಿಕೆಟ್ ಒಪ್ಪಿಸಿದರು. ನಂತರ ಬಂದ ಸೋಬನಾ ಮೊಸ್ತಾರಿ 8 ರನ್, ನಾಯಕಿ ನಿಗರ್ ಸುಲ್ತಾನಾ 12 ರನ್ ಗಳಿಸಿದರು.

ಬಳಿಕ ಶೋರ್ನಾ ಅಕ್ಟರ್ 0, ರಿತು ಮೋನಿ 8 ರನ್, ಫಹಿಮಾ ಖತುನ್ 0, ರಬಿಯಾ ಖಾನ್ 3 ರನ್, ನಹಿದಾ ಅಕ್ಟರ್ 9 ರನ್, ಸುಲ್ತಾನಾ ಖತುನ್ 3 ರನ್ ಗಳಿಸಿದರು.

ಬೌಲಿಂಗ್‌ನಲ್ಲಿ ಭಾರತ ಪರ ಪೂಜಾ ವಸ್ತ್ರಾಕರ್ 4 ಓವರ್‌ಗಳಲ್ಲಿ 17 ರನ್ ನೀಡಿ 4 ವಿಕೆಟ್‌ ಪಡೆದರೆ, ಟಿಟಾಸ್ ಸಧು, ಅಮನ್ಜೋತ್ ಕೌರ್, ರಾಜೇಶ್ವರಿ ಗಾಯಕ್ವಾಡ್ ಮತ್ತು ದೀವಿಕಾ ವೈದ್ಯ ತಲಾ ಒಂದೊಂದು ವಿಕೆಟ್ ಪಡೆದರು.

ನಂತರ, ಗುರಿ ಬೆನ್ನಟ್ಟಿದ ಭಾರತ ಮಹಿಳಾ ತಂಡದ ಪರ ನಾಯಕಿ ಸ್ಮೃತಿ ಮಂಧಾನ 7 ರನ್, ಶಫಾಲಿ ವರ್ಮಾ 17 ರನ್ ಗಳಿಸಿ ಔಟಾದರು. ಬಳಿಕ ಜೊತೆಗೂಡಿದ ಜೆಮಿಮಾ ರೋಡ್ರಿಗಸ್ 20 ರನ್ ಮತ್ತು ಕನಿಕಾ ಅಹುಜಾ 1 ರನ್ ಗಳಿಸಿ ಗೆಲ್ಲಿಸಿದರು.

2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಫೈನಲ್ ತಲುಪಿದ್ದು, ಇನ್ನೊಂದು ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಆಡಲಿದ್ದು, ಅಲ್ಲಿ ಗೆಲ್ಲುವ ತಂಡದ ವಿರುದ್ಧ ಸೋಮವಾರ, ಸೆಪ್ಟೆಂಬರ್ 25ರಂದು ಭಾರತ ಸೆಣಸಾಡಲಿದೆ.

Story first published: Sunday, September 24, 2023, 10:06 [IST]
Other articles published on Sep 24, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+