Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asian Games 2023: ಮಲೇಷ್ಯಾ ವಿರುದ್ಧ ಸಿಡಿದ ಭಾರತ ವನಿತೆಯರು; ಸೆಮಿಫೈನಲ್‌ಗೆ ಅರ್ಹತೆ

ಗುರುವಾರ, ಸೆಪ್ಟೆಂಬರ್ 21ರಂದು ಚೀನಾದ ಹ್ಯಾಂಗ್‌ಝೌನಲ್ಲಿರುವ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್‌ನಲ್ಲಿ ನಡೆದ 2023ರ ಏಷ್ಯನ್ ಗೇಮ್ಸ್ ಕ್ವಾರ್ಟರ್‌ಫೈನಲ್ 1 ಪಂದ್ಯದಲ್ಲಿ ಭಾರತ ಮತ್ತು ಮಲೇಷ್ಯಾ ಮಹಿಳಾ ತಂಡಗಳು ಮುಖಾಮುಖಿಯಾಗಿದ್ದವು. ಆದರೆ, ಮಳೆಯಿಂದ ಪೂರ್ಣ ಫಲಿತಾಂಶ ಕಾಣದೆ ಪಂದ್ಯ ರದ್ದುಗೊಂಡಿತು.

ಪಂದ್ಯಾವಳಿಯಲ್ಲಿ ತಮ್ಮ ಆರಂಭಿಕ ಪಂದ್ಯವು ಮಳೆಯಿಂದ ರದ್ದುಗೊಂಡ ನಂತರ, ಭಾರತೀಯ ಮಹಿಳಾ ತಂಡವು 2023ರ ಏಷ್ಯನ್ ಗೇಮ್ಸ್‌ನ ಸೆಮಿಫೈನಲ್ ಅರ್ಹತೆ ಪಡೆದಿದೆ.

ಆದರೆ, ಮಳೆ-ಬಾಧಿತ ಟಿ20 ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಭಾರತ ವನಿತೆಯರ ಗೆಲುವಿಗೆ ವರುಣ ಅಡ್ಡಿಯಾಗಿದ್ದು, ನಿರಾಸೆ ಮೂಡಿಸಿತು. ಪಂದ್ಯ ಆರಂಭಕ್ಕೂ ಮುನ್ನವೇ ಮಳೆ ಅಡ್ಡಿಪಡಿಸಿದ ಕಾರಣ, ತಲಾ 15 ಓವರ್‌ಗಳಿಗೆ ಇಳಿಸಲಾಗಿತ್ತು.

Asian Games 2023 India vs Malaysia Womens Cricket Match Washedout Due to Rain

ಆದಾಗ್ಯೂ, ಮಹಿಳಾ ತಂಡದ ವಿರುದ್ಧ ಭಾರತ ಮಹಿಳಾ ತಂಡವು ತನ್ನ ಏಷ್ಯನ್ ಗೇಮ್ಸ್‌ನ ಚೊಚ್ಚಲ ಪಂದ್ಯದಲ್ಲೇ ವೇಗದ ಅತ್ಯಂತ ವೇಗದ ಇನ್ನಿಂಗ್ಸ್ ಅನ್ನು ದಾಖಲಿಸಿ, ಬೃಹತ್ ಗುರಿ ನೀಡಿತ್ತು.

ಮಳೆ-ಬಾಧಿತ ಟಿ20 ಪಂದ್ಯದಲ್ಲಿ 15 ಓವರ್‌ಗಳಿಗೆ ಕಡಿತಗೊಳಿಸಲಾಯಿತದಾರೂ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತೆಯರು 15 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 173 ರನ್‌ಗಳ ಬೃಹತ್ ಮೊತ್ತವನ್ನು ಗಳಿಸುವಲ್ಲಿ ಯಶಸ್ವಿಯಾದರು.

Asian Games 2023 India vs Malaysia Womens Cricket Match Washedout Due to Rain

ದುರ್ಬಲ ಮಲೇಷ್ಯಾ ಬೌಲಿಂಗ್ ದಾಳಿಯ ವಿರುದ್ಧ ಭಾರತೀಯ ಬ್ಯಾಟರ್‌ಗಳು ಅದ್ಭುತ ದಿನವನ್ನು ಹೊಂದಿದ್ದರು. ಎದುರಾಳಿಯ ಕಳಪೆ ಫೀಲ್ಡಿಂಗ್‌ನಿಂದ ಲಾಭ ಪಡೆದರು.

ಭಾರತದ ಇನ್ನಿಂಗ್ಸ್ ಆರಂಭಿಸಿದ ಶಫಾಲಿ ವರ್ಮಾ ಮತ್ತು ನಾಯಕ ಸ್ಮೃತಿ ಮಂಧಾನ ಮೊದಲ ವಿಕೆಟ್‌ಗೆ 57 ರನ್‌ಗಳ ಜೊತೆಯಾಟ ನಿರ್ಮಿಸಿದರು. ದುರದೃಷ್ಟವಶಾತ್ ಸ್ಮೃತಿ ಮಂಧಾನ 16 ಎಸೆತಗಳಲ್ಲಿ 5 ಬೌಂಡರಿ ಸಮೇತ 27 ರನ್ ಗಳಿಸಿದ್ದಾಗ ಔಟಾದರು.

Asian Games 2023 India vs Malaysia Womens Cricket Match Washedout Due to Rain

ಅದರೆ, ಶಫಾಲಿ ವರ್ಮಾ ತನ್ನ ಅದ್ಭುತ ಸ್ಫೋಟಕ ಬ್ಯಾಟಿಂಗ್ ಫಾರ್ಮ್‌ ಅನ್ನು ಮುಂದುವರೆಸಿದರು ಮತ್ತು ಕೇವಲ 39 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್‌ಗಳ ಮೂಲಕ 67 ರನ್ ಬಾರಿಸಿದರು.

ನಂತರ ಬಂದ ಜೆಮಿಮಾ ರೋಡ್ರಗಸ್ ಕೂಡ ಉತ್ತಮವಾಗಿ ಆಡುವ ಮೂಲಕ ತಂಡದ ಮೊತ್ತವನ್ನು ವೇಗವಾಗಿ ಹೆಚ್ಚಿಸಿದರು. 29 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ 47 ರನ್‌ಗಳ ಕೊಡುಗೆ ನೀಡಿದರು.

ಕೊನೆಯಲ್ಲಿ ಬಂದ ರಿಚಾ ಘೋಷ್ ಕೇವಲ 7 ಎಸೆತಗಳಲ್ಲಿ 21 ರನ್ ಗಳಿಸುವ ಮೂಲಕ ಅಬ್ಬರದ ಆಟದೊಂದಿಗೆ ಇನ್ನಿಂಗ್ಸ್ ಉನ್ನತ ಮಟ್ಟದಲ್ಲಿ ಕೊನೆಗೊಂಡಿತು. ಕೊನೆಯ ಓವರ್‌ನಲ್ಲಿ 20 ರನ್‌ಗಳನ್ನು ದೋಚಿದರು.

ಆದರೆ, ಎರಡನೇ ಇನ್ನಿಂಗ್ಸ್ ವೇಳೆ ಮತ್ತೆ ಮಳೆ ಸುರಿದ ಕಾರಣ ಪಂದ್ಯವು ಫಲಿತಾಂಶ ಕಾಣದೆ ರದ್ದುಗೊಂಡಿತು. ಭಾರತ ಮಹಿಳಾ ತಂಡದ ಗೆಲುವಿಗೆ ವರುಣ ತಣ್ಣೀರೆರಚಿದೆ.

Story first published: Thursday, September 21, 2023, 10:20 [IST]
Other articles published on Sep 21, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+