For Quick Alerts
ALLOW NOTIFICATIONS  
For Daily Alerts
 

Asian Games: ಟಿ20I ದಾಖಲೆಗಳೆಲ್ಲಾ ಧ್ವಂಸ ಮಾಡಿದ ನೇಪಾಳ!: 300ಕ್ಕೂ ಅಧಿಕ ರನ್, 9 ಎಸೆತದಲ್ಲಿ ಅರ್ಧ ಶತಕ.. 34 ಎಸೆತದಲ್ಲಿ ಶತಕ!

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್‌ನಲ್ಲಿ ನೇಪಾಳ ತಂಡ ವಿಶ್ವದಾಖಲೆಗಳನ್ನೆಲ್ಲಾ ಮುರಿದು ಹೊಸ ಇತಿಹಾಸ ಬರೆದಿದೆ. ಮಂಗೋಲಿಯಾ ವಿರುದ್ಧದ ಪಂದ್ಯದಲ್ಲಿ ನೇಪಾಳ ತಂಡದ ಬ್ಯಾಟರ್‌ಗಳು ಅಬ್ಬರಿಸಿದ್ದು 20 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ಕಳೆದುಕೊಂಡು ಬರೊಬ್ಬರಿ 314 ರನ್ ಗಳಿಸಿ ವಿಶ್ವ ದಾಖಲೆ ಬರೆದಿದೆ. ಟಿ20I ಇತಿಹಾಸದಲ್ಲಿ ತಂಡವೊಂದು 300 ರನ್ ದಾಟಿದ್ದು ಇದೇ ಮೊದಲು. ನೇಪಾಳದ ಬ್ಯಾಟ್ಸ್‌ಮನ್‌ಗಳು ದುರ್ಬಲ ಮಂಗೋಲಿಯಾ ಬೌಲರ್‌ಗಳನ್ನು ಅಕ್ಷರಶಃ ಧ್ವಂಸಮಾಡಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ದಾಖಲೆ ಮಾತ್ರವಲ್ಲದೆ ಇನ್ನೂ ಕೆಲ ಪ್ರಮುಖ ವಿಶ್ವದಾಖಲೆಗಳು ಈ ಪಂದ್ಯದಲ್ಲಿ ನಿರ್ಮಾಣವಾಗಿದೆ. ಇದೊಂದೇ ಪಂದ್ಯದಲ್ಲಿ ಅತ್ಯಂತ ವೇಗದ ಅರ್ಧ ಶತಕ ಕೂಡ ದಾಖಲಾಗಿದ್ದು ಟಿ20 ಇತಿಹಾಸದಲ್ಲಿ ಅತ್ಯಂತ ವೇಗದ ಶತಕದ ದಾಖಲೆ ಕೂಡ ಇದೇ ಪಂದ್ಯದಲ್ಲಿ ನಿರ್ಮಾಣವಾಗಿದೆ.

Asian Games 2023: Nepal world record in T20I, scored 1st ever 300 plus runs, fastest fifty and fastest century in t20I

ಏಷ್ಯನ್ ಗೇಮ್ಸ್ ಟೂರ್ನಿಯ ಪುರುಷರ ಪ್ರಪ್ರಥಮ ಪಂದ್ಯದಲ್ಲಿಯೇ ಈ ವಿಧ್ವಂಸಕ ಪ್ರದರ್ಶನ ಹೊರಹೊಮ್ಮಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮಂಗೋಲಿಯಾ ತಂಡ ಎದುರಾಳಿಯನ್ನು ಮೊದಲಿಗೆ ಬ್ಯಾಟಿಂಗ್‌ಗೆ ಆಹ್ವಾನಿಸಿ ದೊಡ್ಡ ಎಡವಟ್ಟು ಮಾಡಿಕೊಂಡಿತ್ತು. ಮೊದಲ ಎರಡು ವಿಕೆಟ್‌ಗಳನ್ನು ಪಡೆಯುವವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ 7.2 ಓವರ್‌ಗಳಾದಾಗ ನೇಪಾಳ 66 ರನ್‌ಗಳಿಗೆ 2ನೇ ವಿಕೆಟ್ ಕಳೆದುಕೊಂಡ ಬಳಿಕ ಆರಂಔವಾಗಿದ್ದು ಯಾರೂ ನಿರೀಕ್ಷೆಯೇ ಮಾಡದ ಅಬ್ಬರದ ಬ್ಯಾಟಿಂಗ್.

ರೋಹಿತ್ ದಾಖಲೆ ಪುಡಿ

ಕುಶಾಲ್ ಮಲ್ಲ ಹಾಗೂ ನಾಯಕ ರೋಹಿತ್ ಪೌಡೆಲ್ ಸ್ಪೋಟಕ ಆಟಕ್ಕೆ ಇಳಿದರು. 19ರ ಹರೆಯದ ಕುಶಾಲ್ ಮಲ್ಲ ಟಿ20 ಕ್ರಿಕೆಟ್‌ನಲ್ಲಿ ಈವರೆಗೆ ಅತ್ಯಂತ ವೇಗದ ಶತಕ ದಾಖಲಿಸಿದ ದಾಖಲೆ ಹೊಂದಿದ್ದ ಭಾರತದ ರೋಹಿತ್ ಶರ್ಮಾ ಹಾಗೂ ಡೇವಿಡ್ ಮಿಲ್ಲರ್ ಅವರ ಹೆಸರಿನಲ್ಲಿದ್ದ ಮುರಿದಿದ್ದು ಕೇವಲ 34 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. 3ನೇ ಕ್ರಮಾಂಕದ ಬ್ಯಾಟಿಂಗ್‌ಗೆ ಇಳಿದ ಈ ಯುವ ಆಟಗಾರ 12 ಸಿಕ್ಸರ್ ಹಾಗೂ 8 ಬೌಂಡರಿ ಬಾರಿಸಿದ್ದು 137 ರನ್‌ಗಳನ್ನು ಗಳಿಸಿ ಅಜೇಯವಾಗುಳಿದಿದ್ದಾರೆ.

ಯುವರಾಜ್ ಸಿಂಗ್ ದಾಖಲೆ ಮುರಿದ ದೀಪೇಂದ್ರ ಸಿಂಗ್

ಇನ್ನು ನೇಪಾಳ ತಂಡದ ಮತ್ತೋರ್ವ ಆಟಗಾರ ದೀಪೇಂದ್ರ ಸಿಂಗ್ ಐರಿ ಮತ್ತೋರ್ವ ಭಾರತೀಯನ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಕೂಡ ಮುರಿದಿದ್ದಾರೆ. ಈ ಪಂದ್ಯದಲ್ಲಿ ದೀಪೇಂದ್ರ ಸಿಂಗ್ ಕೇವಲ 9 ಎಸೆತಗಳಲ್ಲಿ ಅರ್ಧ ಶತಕ ಸಿಡಿಸುವ ಮೂಲಕ 16 ವರ್ಷಗಳ ಹಿಂದಿನ ಯುವರಾಜ್ ಸಿಂಗ್ ಅವರ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಭಗ್ನಗೊಳಿಸಿದ್ದಾರೆ. ಯುವರಾಜ್ ಸಿಂಗ್ 2007ರ ವಿಶ್ವಕಪ್‌ನಲ್ಲಿ ಕೇವಲ 12 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಅಬ್ಬರಿಸಿದ್ದರು.

ಇನ್ನು ನೇಪಾಳ ತಂಡದ ಈ ಅಬ್ಬರದ ಬ್ಯಾಟಿಂಗ್‌ನಿಂದಾಗಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಹಿಂದೆಂದೂ ಕಾಣದಷ್ಟು ರನ್ ಕಲೆಹಾಕಿದೆ. 20 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ನೇಪಾಳ ತಂಡ 314 ರನ್‌ಗಳನ್ನು ಗಳಿಸಿದೆ. ಇದು ಟಿ20 ಇತಿಹಾಸದಲ್ಲಿ 300ಕ್ಕೂ ಅಧಿಕ ರನ್‌ಗಳು ದಾಖಲಾದ ಪ್ರಪ್ರಥಮ ದೃಷ್ಟಾಂತವಾಗಿದೆ. ಈ ಮೂಲಕ ಅತಿ ಹೆಚ್ಚು ರನ್‌ಗಳನ್ನು ದಾಖಳಿಸಿದ ವಿಶ್ವದಾಖಲೆ ಕೂಡ ಈ ಪಂದ್ಯದಲ್ಲಿ ನಿರ್ಮಾಣವಾದಂತಾಗಿದೆ. ಇದಕ್ಕೂ ಮುನ್ನ ಅಫ್ಘಾನಿಸ್ತಾನ ತಂಡ 2019ರಲ್ಲಿ ಐರ್ಲೆಂಡ್ ವಿರುದ್ಧ 278/3 ರನ್‌ಗಳಿಸಿದ್ದು ಈವರೆಗಿನ ಅತಿ ಹೆಚ್ಚಿನ ಸ್ಕೋರ್ ಎನಿಸಿತ್ತು.

Story first published: Wednesday, September 27, 2023, 9:57 [IST]
Other articles published on Sep 27, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+