For Quick Alerts
ALLOW NOTIFICATIONS  
For Daily Alerts
 

Asian Games 2023: ಚೊಚ್ಚಲ ಟಿ20 ಶತಕ ಬಾರಿಸಿ ಹಲವು ದಾಖಲೆ ಬರೆದ ಯಶಸ್ವಿ ಜೈಸ್ವಾಲ್

ಮಂಗಳವಾರ, ಅಕ್ಟೋಬರ್ 3ರಂದು ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 2023ರ ಏಷ್ಯನ್ ಗೇಮ್ಸ್‌ನ ಕ್ರಿಕೆಟ್ ಪಂದ್ಯಾವಳಿಯ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ನೇಪಾಳ ವಿರುದ್ಧ ಭಾರತ ತಂಡ 202 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ಈ ವೇಳೆ ಭಾರತದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಹ್ಯಾಂಗ್‌ಝೌನ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ನೇಪಾಳ ವಿರುದ್ಧ ಪಂದ್ಯದಲ್ಲಿ ತಮ್ಮ ಚೊಚ್ಚಲ ಟಿ20 ಅಂತಾರಾಷ್ಟ್ರೀಯ ಶತಕ ಗಳಿಸಿದ ಅತ್ಯಂತ ಕಿರಿಯ ಭಾರತೀಯ ಎಂಬ ಗಮನಾರ್ಹ ಸಾಧನೆ ಮಾಡಿದರು.

Asian Games 2023: Yashasvi Jaiswal Created Many Records On Debut T20I Century

ಯಶಸ್ವಿ ಜೈಸ್ವಾಲ್ 21 ವರ್ಷ 9 ತಿಂಗಳು ಮತ್ತು 13 ದಿನಗಳ ವಯಸ್ಸಿನಲ್ಲಿ ಚೊಚ್ಚಲ ಟಿ20 ಅಂತಾರಾಷ್ಟ್ರೀಯ ಶತಕ ಗಳಿಸುವ ಮೂಲಕ, 23 ವರ್ಷ ಮತ್ತು 146 ದಿನಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಶತಕ ಬಾರಿಸಿದ್ದ ಶುಭ್ಮನ್ ಗಿಲ್ ಅವರ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿದರು.

ಈ ಸಾಧನೆ ಮೂಲಕ ಯಶಸ್ವಿ ಜೈಸ್ವಾಲ್ ಟಿ20ಯಲ್ಲಿ ಶತಕ ಬಾರಿಸಿದ ಅತಿ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನೇಪಾಳ ವಿರುದ್ಧದ ಪಂದ್ಯದಲ್ಲಿ ವಿಕೆಟ್‌ನ ಎರಡೂ ಬದಿಗಳಲ್ಲಿ ಅದ್ಭುತ ಶಾಟ್‌ಗಳನ್ನು ಪ್ರಯೋಗಿಸಿದರು ಮತ್ತು ನೇಪಾಳದ ಬೌಲರ್‌ಗಳನ್ನು ದಂಡಿಸಿದರು.

ಯಶಸ್ವಿ ಜೈಸ್ವಾಲ್ ಅವರ ಅತ್ಯುನ್ನತ ಆತ್ಮವಿಶ್ವಾಸ ಮತ್ತು ಗಮನಾರ್ಹ ಪ್ರದರ್ಶನ ಸರಾಗವಾಗಿ ಮೈದಾನದ ಎಲ್ಲಾ ಭಾಗಗಳಿಗೆ ಚೆಂಡನ್ನು ಕಳುಹಿಸುತ್ತಿದ್ದರು.

Asian Games 2023: Yashasvi Jaiswal Created Many Records On Debut T20I Century

ಟಿ20 ಸ್ವರೂಪದಲ್ಲಿ ಅವರ 6ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ನೇಪಾಳ ವಿರುದ್ಧದ ಏಷ್ಯನ್ ಗೇಮ್ಸ್ 2023 ಕ್ವಾರ್ಟರ್‌ಫೈನಲ್‌ನಲ್ಲಿ ಕೇವಲ 48 ಎಸೆತಗಳಲ್ಲಿ ತಮ್ಮ ಮೊದಲ ಟಿ20 ಶತಕವನ್ನು ತಲುಪಿದರು. 16ನೇ ಓವರ್‌ನಲ್ಲಿ ಸೋಂಪಾಲ್ ಕಾಮಿ ಎಸೆತದಲ್ಲಿ ಒಂದು ರನ್ ಗಳಿಸುವ ಮೂಲಕ ಅವರು ಈ ಮೈಲಿಗಲ್ಲು ಸಾಧಿಸಿದರು.

ಇದೇ ವೇಳೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಅತಿ ವೇಗದ ಶತಕ ಬಾರಿಸಿದ ಐದನೇ ಭಾರತೀಯ ಆಟಗಾರನೆಂಬ ಹೆಗ್ಗಳಿಕೆಗೂ ಭಾಜನರಾದರು.

ಟಿ20 ಕ್ರಿಕೆಟ್‌ನಲ್ಲಿ ಭಾರತೀಯ ಆಟಗಾರರ ವೇಗದ ಶತಕ

* ರೋಹಿತ್ ಶರ್ಮಾ - 35 ಎಸೆತಗಳು
* ಸೂರ್ಯಕುಮಾರ್ ಯಾದವ್ - 45 ಎಸೆತಗಳು
* ಕೆಎಲ್ ರಾಹುಲ್ - 46 ಎಸೆತಗಳು
* ಸೂರ್ಯಕುಮಾರ್ ಯಾದವ್ - 48 ಎಸೆತಗಳು
* ಯಶಸ್ವಿ ಜೈಸ್ವಾಲ್ - 48 ಎಸೆತಗಳು
* ಸೂರ್ಯಕುಮಾರ್ ಯಾದವ್ - 49 ಎಸೆತಗಳು

ಯಶಸ್ವಿ ಜೈಸ್ವಾಲ್ ಅವರ ಗಮನಾರ್ಹ ಸಾಧನೆಯು ಅವರನ್ನು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಶತಕಗಳನ್ನು ಗಳಿಸಿದ ಗಣ್ಯ ಭಾರತೀಯ ಕ್ರಿಕೆಟಿಗರ ಪಟ್ಟಿಯಲ್ಲಿ ಸ್ಥಾನ ಪಡೆಯುವಂತಾಯಿತು.

ಈ ಆಟಗಾರರಲ್ಲಿ ಸುರೇಶ್ ರೈನಾ, ಕೆಎಲ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ ಸೇರಿದ್ದಾರೆ.

ಡೊಮಿನಿಕಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶತಕ (171 ರನ್) ಗಳಿಸುವ ಮೂಲಕ ಯಶಸ್ವಿ ಜೈಸ್ವಾಲ್ ಈಗಾಗಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಭಾವಶಾಲಿ ಚೊಚ್ಚಲ ಪಂದ್ಯವನ್ನು ಆಡಿದ್ದಾರೆ ಎಂಬುದು ಗಮನಾರ್ಹ ಸಂಗತಿ.

Story first published: Tuesday, October 3, 2023, 9:10 [IST]
Other articles published on Oct 3, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+