ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ಫೈನಲ್: ಚಿನ್ನದ ಪದಕಕ್ಕಾಗಿ ಭಾರತ vs ಶ್ರೀಲಂಕಾ ಕದನ ಆರಂಭ: Live ಸ್ಕೋರ್
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಫೈನಲ್‌ನಲ್ಲಿ ಶ್ರೀಲಂಕಾ ತಂಡದ ವಿರುದ್ಧ ಚಿನ್ನದ ಪದಕ್ಕಾಗಿ ಸೆಣೆಸಾಟ ಆರಂಭಿಸಿದೆ. ಹರ್ಮನ್‌ಪ್ರೀತ್ ನಾಯಕತ್ವದಲ್ಲಿ ಕಣಕ್ಕಿಳಿದಿರುವ ಭಾರತ ಮಹಿಳಾ ತಂಡ ಟಾಸ್ ಗೆದ್ದುಕೊಂಡಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಶ್ರೀಲಂಕಾ ಈ ಪಂದ್ಯದಲ್ಲಿ ಆರಂಭದಲ್ಲಿ ಬೌಲಿಂಗ್ ನಡೆಸುವ ಸವಾಲು ಪಡೆದುಕೊಂಡಿದೆ.
ಇನ್ನು ಹರ್ಮನ್‌ಪ್ರೀತ್ ಕೌರ್ ಈ ಪಂದ್ಯದ ಮೂಲಕ ತಂಡಕ್ಕೆ ಮರಳಲಿದ್ದು ತಂಡದ ಬಲ ಮತ್ತಷ್ಟು ಹೆಚ್ಚಾಗಿದೆ. ಕಳೆದ ಜುಲೈನಲ್ಲಿ ಬಾಂಗ್ಲಾದೇಶ ಪ್ರವಾಸದ ಸಂದರ್ಭದಲ್ಲಿ ತಮ್ಮ ನಡತೆಗಾಗಿ ಹರ್ಮನ್‌ಪ್ರೀತ್ ಕೌರ್ ಎರಡು ಪಂದ್ಯಗಳ ನಿಷೇಧಕ್ಕೆ ಗುರಿಯಾಗಿದ್ದರು. ಹೀಗಾಗಿ ಏಷ್ಯನ್‌ಗೇಮ್ಸ್‌ನಲ್ಲಿ ಆರಂಬಿಕ ಎರಡು ಪಂದ್ಯಕ್ಕೆ ಅನುಭವಿ ಆಟಗಾರ್ತಿ ಅಲಭ್ಯವಾಗಿದ್ದರು. ಇದೀಗ ಫೈನಲ್ ಪಂದ್ಯದಲ್ಲಿ ಅವರು ತಂಡವನ್ನು ಮುನ್ನಡೆಸುತ್ತಿದ್ದಾರೆ.

ಹ್ಯಾಂಗ್‌ಝೌನ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಮೈದಾನದಲ್ಲಿ ಈ ಕ್ರಿಕೆಟ್ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ ಬೆಳಿಗ್ಗೆ 11:30ಕ್ಕೆ ಪಂದ್ಯ ಆರಂಭವಾಗಲಿದೆ. ಇನ್ನು ಸೋನಿ ಸ್ಪೋರ್ಟ್ಸ್‌ವಾಹಿನಿ ಈ ಕ್ರೀಡಾಕೂಟದ ನೇರಪ್ರಸಾರದ ಹಕ್ಕನ್ನು ಹೊಂದಿದ್ದು ಸೋನಿ ಸ್ಪೋರ್ಟ್ಸ್ ಟೆನಿ 2 SD & HD, ಸೋನಿ ಸ್ಪೋರ್ಟ್ಸ್ ಟೆನ್ 3 SD & HD ಚಾನೆಲ್‌ಗಳಲ್ಲಿ ಪಂದ್ಯವನ್ನು ನೇರವಾಗಿ ವೀಕ್ಷಿಸಬಹುದು. ಇನ್ನು ಸೋನಿ ಲಿವ್‌ನಲ್ಲಿಯೂ ಪಂದ್ಯದ ನೇರಪ್ರಸಾರವಿರಲಿದೆ.
LIVE ಸ್ಕೋರ್ ಹೀಗಿದೆ
ಭಾರತ ಆಡುವ ಬಳಗ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ದೇವಿಕಾ ವೈದ್ಯ, ಅಮನ್ಜೋತ್ ಕೌರ್, ಪೂಜಾ ವಸ್ತ್ರಾಕರ್, ಟೈಟಾಸ್ ಸಾಧು, ರಾಜೇಶ್ವರಿ ಗಾಯಕ್ವಾಡ್
ಬೆಂಚ್: ಕನಿಕಾ ಅಹುಜಾ, ಮಿನ್ನು ಮಣಿ, ಅಂಜಲಿ ಸರ್ವಾಣಿ, ಬಾರೆಡ್ಡಿ ಅನುಷಾ, ಉಮಾ ಚೆಟ್ರಿ
ಶ್ರೀಲಂಕಾ ಆಡುವ ಬಳಗ: ಚಾಮರಿ ಅಥಾಪತ್ತು (ನಾಯಕಿ), ಅನುಷ್ಕಾ ಸಂಜೀವನಿ (ವಿಕೆಟ್ ಕೀಪರ್), ವಿಶ್ಮಿ ಗುಣರತ್ನೆ, ನೀಲಾಕ್ಷಿ ಡಿ ಸಿಲ್ವಾ, ಹಾಸಿನಿ ಪೆರೇರಾ, ಓಷದಿ ರಣಸಿಂಗ್, ಇನೋಕಾ ರಣವೀರ, ಕವಿಶಾ ದಿಲ್ಹಾರಿ, ಉದೇಶಿಕಾ ಪ್ರಬೋಧನಿ, ಸುಗಂದಿಕಾ ಕುಮಾರಿ, ಇನೋಶಿ ಪ್ರಿಯದರ್ಶನಿ
ಬೆಂಚ್: ಹರ್ಷಿತಾ ಸಮರವಿಕ್ರಮ, ಅಚಿನಿ ಕುಲಸೂರ್ಯ, ಇಮೇಶಾ ದುಲಾನಿ, ಕೌಶಾನಿ ನುತ್ಯಂಗನಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications