Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯನ್ ಗೇಮ್ಸ್‌ ಕ್ರಿಕೆಟ್: ಭಾರತ vs ಬಾಂಗ್ಲಾದೇಶ ಸೆಮಿಫೈನಲ್: ಪಂದ್ಯದ ಸಮಯ, ಸಂಪೂರ್ಣ ಮಾಹಿತಿ

ಏಷ್ಯನ್ ಗೇಮ್ಸ್‌ನಲ್ಲಿ ಶುಕ್ರವಾರ ಸೆಮಿಫೈನಲ್ ಪಂದ್ಯ ನಡೆಯಲಿದ್ದು ಭಾರತ ತಂಡಕ್ಕೆ ಬಾಂಗ್ಲಾದೇಶ ಸವಾಲೊಡ್ಡಲಿದೆ. ನೇಪಾಳ ವಿರುದ್ಧ ನಡೆದ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನಿಡಿ ಗೆಲುವು ಸಾಧಿಸಿತ್ತು. ಈ ಮೂಲಕ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ತಂಡದ ಸವಾಲನ್ನು ಭಾರತೀಯ ತಂಡ ಹೇಗೆ ಎದುರಿಸಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

ಟೀಮ್ ಇಂಡಿಯಾದ ಪ್ರಮುಖ ಆಟಗಾರರ ಪಡೆ ವಿಶ್ವಕಪ್‌ನಲ್ಲಿ ಭಾಗಿಯಾಗುತ್ತಿರುವ ಕಾರಣ ಏಷ್ಯಾಕಪ್‌ನಲ್ಲಿ ದ್ವಿತೀಯ ದರ್ಜೆಯ ಯುವ ಆಟಗಾರರ ಪಡೆ ಕಣಕ್ಕಿಳಿಯುತ್ತಿದೆ. ನಾಯಕ ಋತುರಾಜ್ ಹೊರತುಪಡಿಸಿ ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಾಹುಲ್ ತ್ರಿಪಾಠಿ, ರಿಂಕಿ ಸಿಂಗ್, ವಾಶೀಂಗ್ಟನ್ ಸುಂದರ್, ಜಿತೇಶ್ ಶರ್ಮಾ, ರವಿ ಬಿಷ್ಣೋಯ್, ಅರ್ಶ್‌ದೀಪ್ ಸಿಂಗ್ ಮೊದಲಾದ ಪ್ರತಿಭಾನ್ವಿತ ಆಟಗಾರರು ಈ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.

Asian Games Men’s T20I: India vs Bangladesh; Pitch Report, Weather Forecast, and Live details

ಪಂದ್ಯದ ಸಮಯ ಹಾಗೂ ನೇರಪ್ರಸಾರದ ಮಾಹಿತಿ

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಏಷ್ಯಾಕಪ್ ಸೆಮಿ ಫೈನಲ್ ಹಂತದ ಪಂದ್ಯ ಅಕ್ಟೋಬರ್ 6 ಶುಕ್ರವಾರ ಆಯೋಜನೆಯಾಗಲಿದೆ. ಭಾರತೀಯ ಕಾಲಮಾನ ಮುಂಜಾನೆ 6:30ಕ್ಕೆ ಈ ಪಂದ್ಯ ಆರಂಭವಾಗಲಿದ್ದು ಹ್ಯಾಂಗ್‌ಝೌನ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ಆಯೋಜನೆಯಾಗಲಿದೆ.

ನೇರಪ್ರಸಾದ: ಇನ್ನು ಈ ಪಂದ್ಯ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರವಾಗಲಿದೆ. ಅಲ್ಲದೆ ಸೋನಿ ಲಿವ್‌ನಲ್ಲಿಯೂ ಪಂದ್ಯವನ್ನು ವೀಕ್ಷಿಸುವ ಅವಕಾಶವಿದೆ.

ಪಿಚ್ ರಿಪೋರ್ಟ್ ಹಾಗೂ ಹವಾಮಾನ ವರದಿ

ಹ್ಯಾಂಗ್‌ಝೌನ ಪಿಚ್ ಬ್ಯಾಟರ್‌ಗಳ ಪಾಲಿಗೆ ಅಕ್ಷರಶಃ ಸ್ವರ್ಗ ಎನಿಸಲಿದೆ. ಇಲ್ಲಿ ಟಾಸ್ ಗೆದ್ದ ತಂಡ ಆರಂಭದಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯ. ಇನ್ನು ಹ್ಯಾಂಗ್‌ಝೌನ ಹವಾಮಾನ ಪಂದ್ಯಕ್ಕೆ ಅತ್ಯಂತ ಪೂರಕವಾಗಿರಲಿದೆ. 20 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಲ್ಲಿ ಉಷ್ಣಾಂಶವಿರಲಿದೆ.

ಭಾರತ ತಂಡ:
ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್(ನಾಯಕ), ತಿಲಕ್ ವರ್ಮಾ, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಶಿವಂ ದುಬೆ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ರಾಹುಲ್ ತ್ರಿಪಾಠಿ, ಮುಖೇಶ್ ಕುಮಾರ್, ಪ್ರಭ್‌ಸಿಮ್ರಾನ್ ಸಿಂಗ್, ಶಹಬಾಜ್ ಅಹ್ಮದ್, ಆಕಾಶ್ ದೀಪ್

ಬಾಂಗ್ಲಾದೇಶ ತಂಡ:
ಪರ್ವೇಜ್ ಹೊಸೈನ್ ಎಮನ್, ಮಹ್ಮುದುಲ್ ಹಸನ್ ಜಾಯ್, ಝಾಕಿರ್ ಹಸನ್, ಸೈಫ್ ಹಸನ್(ನಾಯಕ), ಅಫೀಫ್ ಹೊಸೈನ್, ಶಹದತ್ ಹೊಸೈನ್, ಜಾಕರ್ ಅಲಿ(ವಿಕೆಟ್ ಕೀಪರ್), ರಿಶಾದ್ ಹೊಸೈನ್, ಸುಮೋನ್ ಖಾನ್, ರಕಿಬುಲ್ ಹಸನ್, ರಿಪನ್ ಮೊಂಡೋಲ್, ಮೊಸದ್ದೆಕ್ ಹೊಸೈನ್, ಯಾಸಿರ್ ಅಲಿ, ತನ್ವಿರ್ ಇಸ್ಲಾಂ, ಮೃತುನ್‌ಜೋಯ್ ಚೌಧರಿ, ತಂಜಿಮ್ ಹಸನ್ ಸಾಕಿಬ್

Story first published: Thursday, October 5, 2023, 19:30 [IST]
Other articles published on Oct 5, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+