ಏಷ್ಯನ್ ಗೇಮ್ಸ್‌ನ ಭಾರತದ ಪುರುಷರ ಕ್ರಿಕೆಟ್ ತಂಡ ಮಂಗಳವಾರದಿಂದ ಸ್ಪರ್ಧೆಗಿಳಿಯಲಿದೆ. ಭಾರತ ನೇರವಾಗಿ ಕ್ವಾರ್ಟರ್‌ಫೈನಲ್‌ನಲ್ಲಿ ಕಣಕ್ಕಿಳಿಯಲಿದ್ದು ನೇಪಾಳ ಭಾರತಕ್ಕೆ ಸವಾಲೊಡ್ಡಲಿದೆ. ಟಿ20 ಮಾದರಿಯಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಕ್ರಿಕೆಟ್ ಸ್ಪರ್ದೆಯಲ್ಲಿ ಭಾರತ ತಂಡದ ನಾಯಕತ್ವವನ್ನು ಋತುರಾಜ್ ಗಾಯಕ್ವಾಡ್ ವಹಿಸಿಕೊಂಡಿದ್ದಾರೆ.
ಟೀಮ್ ಇಂಡಿಯಾದ ಪ್ರಮುಖ ಆಟಗಾರರ ಪಡೆ ವಿಶ್ವಕಪ್‌ನಲ್ಲಿ ಭಾಗಿಯಾಗುತ್ತಿರುವ ಕಾರಣ ಏಷ್ಯಾಕಪ್‌ನಲ್ಲಿ ದ್ವಿತೀಯ ದರ್ಜೆಯ ಯುವ ಆಟಗಾರರ ಪಡೆ ಕಣಕ್ಕಿಳಿಯುತ್ತಿದೆ. ನಾಯಕ ಋತುರಾಜ್ ಹೊರತುಪಡಿಸಿ ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಾಹುಲ್ ತ್ರಿಪಾಠಿ, ರಿಂಕಿ ಸಿಂಗ್, ವಾಶೀಂಗ್ಟನ್ ಸುಂದರ್, ಜಿತೇಶ್ ಶರ್ಮಾ, ರವಿ ಬಿಷ್ಣೋಯ್, ಅರ್ಶ್‌ದೀಪ್ ಸಿಂಗ್ ಮೊದಲಾದ ಪ್ರತಿಭಾನ್ವಿತ ಆಟಗಾರರು ಈ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಭಾರತ ಹಾಗೂ ನೇಪಾಳ ನಡುವಿನ ಏಷ್ಯಾಕಪ್ ಕ್ವಾರ್ಟರ್ ಫೈನಲ್ ಹಂತದ ಪಂದ್ಯ ಅಕ್ಟೋಬರ್ 3 ಮಂಗಳವಾರ ಆಯೋಜನೆಯಾಗಲಿದೆ. ಭಾರತೀಯ ಕಾಲಮಾನ ಮುಂಜಾನೆ 6:30ಕ್ಕೆ ಈ ಪಂದ್ಯ ಆರಂಭವಾಗಲಿದ್ದು ಹ್ಯಾಂಗ್‌ಝೌನ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ಆಯೋಜನೆಯಾಗಲಿದೆ.
ನೇರಪ್ರಸಾದ: ಇನ್ನು ಈ ಪಂದ್ಯ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರವಾಗಲಿದೆ. ಅಲ್ಲದೆ ಸೋನಿ ಲಿವ್‌ನಲ್ಲಿಯೂ ಪಂದ್ಯವನ್ನು ವೀಕ್ಷಿಸುವ ಅವಕಾಶವಿದೆ.
ಹ್ಯಾಂಗ್‌ಝೌನ ಪಿಚ್ ಬ್ಯಾಟರ್‌ಗಳ ಪಾಲಿಗೆ ಅಕ್ಷರಶಃ ಸ್ವರ್ಗ ಎನಿಸಲಿದೆ. ಇಲ್ಲಿ ಟಾಸ್ ಗೆದ್ದ ತಂಡ ಆರಂಭದಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯ. ಇನ್ನು ಹ್ಯಾಂಗ್‌ಝೌನ ಹವಾಮಾನ ಪಂದ್ಯಕ್ಕೆ ಅತ್ಯಂತ ಪೂರಕವಾಗಿರಲಿದೆ. 20 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಲ್ಲಿ ಉಷ್ಣಾಂಶವಿರಲಿದೆ.
ಟೀಮ್ ಇಂಡಿಯಾ: ಋತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಾಹುಲ್ ತ್ರಿಪಾಠಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್.
ನೇಪಾಳ: ಕುಶಾಲ್ ಭುರ್ಟೆಲ್, ಆಸಿಫ್ ಶೇಖ್, ಕುಶಾಲ್ ಮಲ್ಲಾ, ರೋಹಿತ್ ಪೌಡೆಲ್ (ನಾಯಕ), ದೀಪೇಂದ್ರ ಸಿಂಗ್ ಐರಿ, ಬಿನೋದ್ ಭಂಡಾರಿ (ವಿಕೆಟ್ ಕೀಪರ್), ಸಂದೀಪ್ ಜೋರಾ, ಗುಲ್ಸನ್ ಝಾ, ಸೋಂಪಾಲ್ ಕಾಮಿ, ಅಬಿನಾಶ್ ಬೋಹರಾ, ಸಂದೀಪ್ ಲಮಿಚಾನೆ