ಏಷ್ಯನ್ ಗೇಮ್ಸ್ ಫೈನಲ್ಸ್: ಫೈನಲ್ ಪಂದ್ಯದಲ್ಲಿ ಶ್ರೀಲಂಕಾಗೆ ಸಾಧಾರಣ ಗುರಿ ನೀಡಿದ ಭಾರತ ವನಿತೆಯರು
ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಕ್ರಿಕೆಟ್ ಮಹಿಳಾ ವಿಭಾಗದಲ್ಲಿ ಭಾರತ ಫೈನಲ್ಸ್‌ನಲ್ಲಿ ಚಿನ್ನದ ಪದಕಕ್ಕಾಗಿ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ ಹೋರಾಟ ನಡೆಸುತ್ತಿದೆ. ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿರುವ ಭಾರತ ಮಹಿಳೆಯರ ತಂಡ ಸಾಧಾರಣ ಮೊತ್ತವನ್ನು ಪೇರಿಸಿದೆ. ಬ್ಯಾಟಿಂಗ್‌ಗೆ ಅತ್ಯಂತ ಸವಾಲಾಗಿರುವ ಪಿಚ್‌ನಲ್ಲಿ ಭಾರತ 116 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಗಿದ್ದು ಈ ಮೊತ್ತವನ್ನು ರಕ್ಷಣೆ ಮಾಡಿಕೊಳ್ಳಲಿದೆಯಾ ಎನ್ನುವುದು ಕುತೂಹಲ ಮೂಡಿಸಿದೆ.
ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ಭಾರತ ತಂಡ ಮೊದಲ ವಿಕೆಟನ್ನು ಶೀಘ್ರದಲ್ಲಿಯೇ ಕಳೆದುಕೊಂಡಿತಾದರೂ ನಂತರ ಎರಡನೇ ವಿಕೆಟ್‌ಗೆ ಉತ್ತಮ ಜೊತೆಯಾಟ ಪಡೆದುಕೊಂಡಿತು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ 9 ರನ್‌ಗಳಿಸಿ ವಿಕೆಟ್ ಕಳೆದುಕೊಂಡ ಬಳಿಕ ಸ್ಮೃತಿ ಮಂಧಾನ ಹಾಗೂ ಜಮಿಮಾ ರೋಡ್ರಿಗಸ್ 73 ರನ್‌ಗಳ ಉತ್ತಮ ಜೊತೆಯಾಟವನ್ನು ನೀಡಿದರು. ರನ್‌ಗಳಿಸಲು ಸವಾಲಾಗಿದ್ದ ಪಂದ್ಯದಲ್ಲಿ ಈ ಜೋಡಿ ವೇಗವ ಆಗಿ ರನ್‌ಗಳಿಸದಿದ್ದರೂ ಈ ಜೊತೆಯಾಟ ಭಾರತ ತಂಡಕ್ಕೆ ದೊಡ್ಡ ಬಲ ತುಂಬಿತು.

ಸ್ಮೃತಿ ಮಂಧಾನ 45 ಎಸೆತಗಳಲ್ಲಿ 46 ರನ್‌ಗಳನ್ನು ಗಳಿಸುವ ಮೂಲಕ ಈ ಪಂದ್ಯದಲ್ಲಿ ಭಾರತದ ಪರವಾಗಿ ಅತಿ ಹೆಚ್ಚಿ ನಸ್ಕೋರ್ ಗಳಿಸಿದ ಆಟಗಾರ್ತಿ ಎನಿಸಿದರು. 89 ರನ್‌ಗಳಾಗಿದ್ದಾಗ ಈ ಜೊಡಿ ಬೇರ್ಪಟ್ಟಿತು. ನಂತರ ಬಂದ ಆಟಗಾರ್ತಿಯರಿಂದ ಉತ್ತಮ ಜೊತೆಯಾಟ ಬಾರಲಿಲ್ಲ. ಜಮಿಮಾ 40 ಎಸೆತಗಳಲ್ಲಿ 42 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ಅಂತಿಮವಾಗಿ ಭಾರತ ನಿಗದಿತ 20 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 116 ರನ್‌ಗಳನ್ನು ಗಳಿಸಲು ಶಕ್ತವಾಗಿದೆ.
ಭಾರತ ಆಡುವ ಬಳಗ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ದೇವಿಕಾ ವೈದ್ಯ, ಅಮನ್ಜೋತ್ ಕೌರ್, ಪೂಜಾ ವಸ್ತ್ರಾಕರ್, ಟೈಟಾಸ್ ಸಾಧು, ರಾಜೇಶ್ವರಿ ಗಾಯಕ್ವಾಡ್
ಬೆಂಚ್: ಕನಿಕಾ ಅಹುಜಾ, ಮಿನ್ನು ಮಣಿ, ಅಂಜಲಿ ಸರ್ವಾಣಿ, ಬಾರೆಡ್ಡಿ ಅನುಷಾ, ಉಮಾ ಚೆಟ್ರಿ
ಶ್ರೀಲಂಕಾ ಆಡುವ ಬಳಗ: ಚಾಮರಿ ಅಥಾಪತ್ತು (ನಾಯಕಿ), ಅನುಷ್ಕಾ ಸಂಜೀವನಿ (ವಿಕೆಟ್ ಕೀಪರ್), ವಿಶ್ಮಿ ಗುಣರತ್ನೆ, ನೀಲಾಕ್ಷಿ ಡಿ ಸಿಲ್ವಾ, ಹಾಸಿನಿ ಪೆರೇರಾ, ಓಷದಿ ರಣಸಿಂಗ್, ಇನೋಕಾ ರಣವೀರ, ಕವಿಶಾ ದಿಲ್ಹಾರಿ, ಉದೇಶಿಕಾ ಪ್ರಬೋಧನಿ, ಸುಗಂದಿಕಾ ಕುಮಾರಿ, ಇನೋಶಿ ಪ್ರಿಯದರ್ಶನಿ
ಬೆಂಚ್: ಹರ್ಷಿತಾ ಸಮರವಿಕ್ರಮ, ಅಚಿನಿ ಕುಲಸೂರ್ಯ, ಇಮೇಶಾ ದುಲಾನಿ, ಕೌಶಾನಿ ನುತ್ಯಂಗನಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications