For Quick Alerts
ALLOW NOTIFICATIONS  
For Daily Alerts
 

#AskTheCoach ಅನಿಲ್ ಕುಂಬ್ಳೆಗೆ ನೇರ ಪ್ರಶ್ನೆ ಎಸೆಯಿರಿ!

By Mahesh

ಬೆಂಗಳೂರು, ಜುಲೈ 05: ಟೀಂ ಇಂಡಿಯಾದ ನೂತನ ಕೋಚ್ ಅನಿಲ್ ಕುಂಬ್ಳೆ ಅವರಿಗೆ ಸಾರ್ವಜನಿಕರು ಕೂಡಾ ಪ್ರಶ್ನೆಗಳನ್ನು ಕೇಳುವ ಅವಕಾಶವನ್ನು ಟ್ವಿಟ್ಟರ್ ಒದಗಿಸುತ್ತಿದೆ. ಮಂಗಳವಾರ (ಜುಲೈ 5) ರಂದು ಸಂಜೆ 4 ಗಂಟೆಗೆ ನಿಮ್ಮ ಪ್ರಶ್ನೆಗಳನ್ನು 'ಗೂಗ್ಲಿ' ಬೌಲರ್ ಅನಿಲ್ ಕುಂಬ್ಳೆ ಅವರತ್ತ ಎಸೆಯಬಹುದು.

ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಬಳಸಿಕೊಂಡು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಇಂಥದ್ದೊಂದು ಅವಕಾಶವನ್ನು ನೀಡುತ್ತಿದೆ.ಜೂನ್ 23 ರಂದು 43 ವರ್ಷ ವಯಸ್ಸಿನ ಅನಿಲ್ ಕುಂಬ್ಳೆ ಅವರು ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಒಂದು ವರ್ಷದ ಅವಧಿಗೆ ಅಧಿಕಾರ ಸ್ವೀಕರಿಸಿದರು.

#AskTheCoach - Question Anil Kumble on Twitter at 4 PM IST today #TeamIndia

ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾವನ್ನು ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅನಿಲ್ ಕುಂಬ್ಳೆ ಅವರು ಅಣಿಗೊಳಿಸುತ್ತಿದ್ದಾರೆ.

ಜುಲೈ 21ರಿಂದ 49 ದಿನಗಳ ಪ್ರವಾಸ ಆರಂಭವಾಗಲಿದೆ. 17 ಮಂದಿ ಸದಸ್ಯರಿರುವ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಬೆಂಗಳೂರಿನ ರಾಷ್ಟೀಯ ಕ್ರಿಕೆಟ್ ಅಕಾಡೆಮಿ (ಎನ್ ಸಿಎ) ಮೈದಾನದಲ್ಲಿ ತರಬೇತಿ ನೀಡಲಾಗಿದೆ. ಜುಲೈ 4ರಂದು ತರಬೇತಿ ಶಿಬಿರ ಮುಕ್ತಾಯವಾಗಿದೆ.

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ನಾಲ್ಕು ಟೆಸ್ಟ್ ಸೇರಿದಂತೆ ಟೀಂ ಇಂಡಿಯಾ ಪ್ರಸಕ್ತ ವರ್ಷದಲ್ಲಿ ತವರು ನೆಲದಲ್ಲಿ 13 ಟೆಸ್ಟ್ ಪಂದ್ಯಗಳನ್ನಾಡಲಿದೆ. ನ್ಯೂಜಿಲೆಂಡ್, ಬಾಂಗ್ಲಾದೇಶ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಭಾರತ ಪ್ರವಾಸ ಕೈಗೊಳ್ಳಲಿವೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:04 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+