Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2027ರ ಐಪಿಎಲ್‌ನಲ್ಲಿ ವೈಭವ್ ಪ್ರದರ್ಶನ ಕುಸಿಯಲಿದೆ; ಆದಿತ್ಯ ಅರೋರಾ ಭವಿಷ್ಯ

ರಾಜಸ್ಥಾನ್ ರಾಯಲ್ಸ್ ತಂಡದ ಭರವಸೆಯ ಬ್ಯಾಟರ್‌ ವೈಭವ್ ಸೂರ್ಯವಂಶಿ 19ನೇ ಆವೃತ್ತಿಯ ಐಪಿಎಲ್‌ನಲ್ಲಿ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಇವರು ತಮ್ಮ 15ನೇ ವಯಸ್ಸಿನಲ್ಲಿ ಆಡಿದ ಧಾಟಿಗೆ ವಿಶ್ವವೇ ಸಲಾಂ ಎಂದಿದೆ. ಈ ಯುವ ಆಟಗಾರನ ಭವಿಷ್ಯದ ಕುರಿತು ಜ್ಯೋತಿಷಿ ಆದಿತ್ಯ ಅರೋರಾ ಭವಿಷ್ಯ ನುಡಿದಿದ್ದಾರೆ. ಇವರು ನೀಡಿದ ಭವಿಷ್ಯ ಈಗ ಸಖತ್ ವೈರಲ್ ಆಗುತ್ತಿದೆ. ಮುಂದಿನ ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿ ಸ್ಥಿರ ಪ್ರದರ್ಶನ ಮುಂದುವರಿಸಲು ಸಾಧ್ಯವಿಲ್ಲ ಎಂದು ಅರೋರಾ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

2025ರ ಐಪಿಎಲ್‌ನ ದ್ವಿತೀಯಾರ್ಧದಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ವೈಭವ್‌ಗೆ, 19ನೇ ಆವೃತ್ತಿಯ ಐಪಿಎಲ್‌ ಮೊದಲ ಸಂಪೂರ್ಣ ಸೀಸನ್ ಆಗಿತ್ತು. ಪ್ರಸಕ್ತ ಸೀಸನ್‌ನಲ್ಲಿ ಟಾಪ್ ಸ್ಕೋರರ್‌ಗಾಗಿ ಆರೆಂಜ್ ಕ್ಯಾಪ್‌ ಸೇರಿದಂತೆ ಐದು ವೈಯಕ್ತಿಕ ಪ್ರಶಸ್ತಿಗಳನ್ನು ಗೆದ್ದು, ತಂಡಕ್ಕೆ ದೊಡ್ಡ ಬಲವಾಗಿದ್ದರು.

Astrologer

ಜ್ಯೋತಿಷಿ ಅರೋರಾ ಪ್ರಕಾರ, ವೈಭವ್‌ನ ಅದ್ಭುತ ಪ್ರದರ್ಶನಕ್ಕೆ 'ರಾಹು'ವಿನ ಪ್ರಭಾವವೇ ಕಾರಣ. ಅವರು ಹೇಳುವಂತೆ, ರಾಹು ಏನು ನೀಡಿದರೂ ನೀವು ರಾತ್ರೋರಾತ್ರಿ ಕೋಟ್ಯಾಧಿಪತಿ ಅಥವಾ ಶತಕೋಟ್ಯಾಧಿಪತಿಯಾಗುತ್ತೀರಿ. ಏಕೆಂದರೆ ರಾಹು ಕಲಿಯುಗದ ರಾಜ. ಇದು ವೈಭವ್‌ನ ವಿಷಯದಲ್ಲೂ ನಿಜವಾಗಿದೆ. ಎರಡು ವರ್ಷಗಳ ಹಿಂದೆ ವೈಭವ್ ಅವರ ಆಸ್ತಿ ಶೂನ್ಯವಾಗಿತ್ತು. ಆದರೆ ಈ ವರ್ಷಾಂತ್ಯಕ್ಕೆ 15ರ ವಯಸ್ಸಿನಲ್ಲಿ 10 ರಿಂದ 30 ಕೋಟಿ ಗಳಿಸಿರಬಹುದು.

ವೈಭವ್ ಭವಿಷ್ಯ

ಆದರೆ, ರಾಹು ನೀಡಿದ್ದನ್ನು ಹಿಂದಕ್ಕೆ ಪಡೆಯುತ್ತದೆ ಎಂಬುದು ಆಸಕ್ತಿದಾಯಕ ಸಂಗತಿ. ವೈಭವ್ 2027ರ ಐಪಿಎಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಾರರು. ಪ್ರಸಕ್ತ ಸೀಸನ್‌ನ ರನ್ ರೇಟ್ ಅವರ ವೃತ್ತಿಜೀವನದಲ್ಲೇ ಅತ್ಯುತ್ತಮ. 2026ರ ಆಟ ನಿರೀಕ್ಷಿಸಿ ವೈಭವ್ ಮೇಲೆ ₹10-40 ಕೋಟಿ ಹೂಡಿಕೆ ಮಾಡಿದರೆ ಅದು ತಂಡಗಳಿಗೆ ನಷ್ಟವಾಗುತ್ತದೆ. 2028ರ ಐಪಿಎಲ್ ಏಪ್ರಿಲ್ 30ಕ್ಕೂ ಮುನ್ನ ಮುಗಿದರೆ, ಆ ಆವೃತ್ತಿಯಲ್ಲಿ ಅವರು ಅಬ್ಬರಿಸಲು ಆಗದು ಎಂದು ತಿಳಿದಿದ್ದಾರೆ.

ವೈಭವ್‌ನ ಈ ವರ್ಷ ನವೆಂಬರ್ ತನಕ ಅವರು ಸಾಕಷ್ಟು ಹಣ ಸಂಪಾದಿಸುತ್ತಾರೆ. "ರಾಹು ನಿಮ್ಮನ್ನು ಭ್ರಮೆಗೆ ಒಳಪಡಿಸುತ್ತದೆ, ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ಯಶಸ್ಸು ಸಿಕ್ಕಾಗ ಅದನ್ನು ಅರಗಿಸಿಕೊಳ್ಳುವುದು ಕಷ್ಟ. ಇದು ಗಮನ ಕಳೆದುಕೊಳ್ಳಲು ಕಾರಣವಾಗುತ್ತದೆ. ರಾಹುವಿನ ದೊಡ್ಡ ಕೊಡುಗೆ ಮತ್ತು ಶಾಪ ಒಂದೇ. ಅದು ಅನಿರೀಕ್ಷಿತ ಯಶಸ್ಸು" ಎಂದು ಅರೋರಾ ಎಕ್ಸ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಈ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್‌ ಪರ ವೈಭವ್ ಸೂರ್ಯವಂಶಿ ಅಮೋಘ ಪ್ರದರ್ಶನ ನೀಡಿದ್ದಾರೆ. ಯಶಸ್ವಿ ಜೈಸ್ವಾಲ್, ನಾಯಕ ರಿಯಾನ್ ಪರಾಗ್ ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳು ವಿಫಲರಾದಾಗ, ವೈಭವ್ ತಂಡವನ್ನು ಎರಡನೇ ಕ್ವಾಲಿಫೈಯರ್‌ಗೆ ಬಹುತೇಕ ಏಕಾಂಗಿಯಾಗಿ ತಲುಪಿಸಿದ್ದರು. ಅವರ ಆಟ ಮಂಕಾಗಿದ್ದರೆ ರಾಯಲ್ಸ್ ಪ್ಲೇಆಫ್‌ಗೂ ತಲುಪುವುದು ಕಷ್ಟವಾಗುತ್ತಿತ್ತು. ಈ ಆವೃತ್ತಿಯಲ್ಲಿ ವೈಭವ್ 15ರ ಹರೆಯದ ವೈಭವ್ 16 ಪಂದ್ಯಗಳಿಂದ 776 ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದರು.

Story first published: Wednesday, June 3, 2026, 17:18 [IST]
Other articles published on Jun 3, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+