For Quick Alerts
ALLOW NOTIFICATIONS  
For Daily Alerts
 

ಅಂಡರ್ -19 ಯೂತ್ ಟೆಸ್ಟ್: ಅಥರ್ವ ತೈಡೆ, ಪವನ್ ಶಾ ಆಕರ್ಷಕ ಶತಕ

Atharwa Taide, Pavan Shah slam hundreds as India U-19

ಹ್ಯಾಂಬಂಟೊಟ, ಜುಲೈ 25: ಶ್ರೀಲಂಕಾದ ಹ್ಯಾಂಬಂಟೊಟದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಎರಡನೇ ದಿನದ ಅಂಡರ್ -19 ಯೂತ್ ಟೆಸ್ಟ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾರತದ ಅಥರ್ವ ತೈಡೆ ಮತ್ತು ಪವನ್ ಶಾ ಭರ್ಜರಿ ಶತಕ ಸಿಡಿಸುವ ಮೂಲಕ ಭಾರತ ಬೃಹತ್ ಮೊತ್ತ ಕಲೆ ಹಾಕುವಲ್ಲಿ ನೆರವಾಗಿದ್ದಾರೆ.

ಜುಲೈ 24ರಂದು ಆರಂಭಗೊಂಡಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿತು. ತಂಡದ ಪರ ಆರಂಭಿಕರಾಗಿ ಇಳಿದ ತೈಡೆ 172 ಎಸೆತಗಳಿಗೆ ಸ್ಫೋಟಕ 177 ರನ್ ಸಿಡಿಸಿದರು. ನಂತರ 57.4ನೇ ಓವರ್ ನಲ್ಲಿ ವಿಯಾಸ್ ಕಾಂತ್ ಎಸೆತಕ್ಕೆ ವಿಕೆಟ್ ಒಪ್ಪಿಸಿ ಹೊರನಡೆದರು.

ಅದಾಗಿ ಬ್ಯಾಟಿಂಗ್ ಗೆ ಇಳಿದ ನಾಯಕ ಅಂಜು ರಾವತ್ 38 ಎಸೆತಗಳನ್ನು ಎದುರಿಸಿ 11 ರನ್ ನೊಂದಿಗೆ ಬೇಗನೆ ನಿರ್ಗಮಿಸಿದರು. ಆದರೆ ಮೂರನೆಯವರಾಗಿ ಬ್ಯಾಟ್ ಎತ್ತಿಕೊಂಡ ಪವನ್ ಶಾ (118 ಓವರ್ ಮುಕ್ತಾಯಕ್ಕೆ ) 299 ಎತೆತಗಳಿಗೆ 241 ರನ್ ನೊಂದಿಗೆ ದ್ವಿಶತಕ ಬಾರಿಸಿದ್ದಾರೆ.

ಪಂದ್ಯಕ್ಕೀಗ ಬಿಡುವು ನೀಡಲಾಗಿದ್ದು ಭಾರತ 118 ಓವರ್ ಮುಕ್ತಾಯಕ್ಕೆ 4 ವಿಕೆಟ್ ಕಳೆದು 550 ರನ್ ಪೇರಿಸಿದೆ. ಪವನ್ ಶಾ ಮತ್ತು ನೇಹಲ್ ವಢೇರಾ (63/129) ಪಂದ್ಯವನ್ನಾಡುತ್ತಿದ್ದಾರೆ. ದಿನದಾಂತ್ಯಕ್ಕೆ ಭಾರತ ಯುವತಂಡ ಎದುರಾಳಿ ಶ್ರೀಲಂಕಾನ್ನರ ಎದುರು ದೊಡ್ಡ ಮೊತ್ತ ಕಲೆ ಹಾಕುವ ನಿರೀಕ್ಷೆಯಿದೆ.

Story first published: Wednesday, July 25, 2018, 12:52 [IST]
Other articles published on Jul 25, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+