ಅತಿಯಾಳ ಕಾಲೆಳೆದ ಕೆಎಲ್ ರಾಹುಲ್, ಡೇಟಿಂಗ್ ಗುಸುಗುಸುಗೆ ರೆಕ್ಕೆಪುಕ್ಕ!

ಬೆಂಗಳೂರು, ಮಾರ್ಚ್ 19: ಭಾರತದಲ್ಲಿ ಕ್ರಿಕೆಟ್ ಹೆಚ್ಚು ಜನಪ್ರಿಯ. ಹೀಗಾಗಿ ಕ್ರಿಕೆಟರ್‌ಗಳೆಲ್ಲ ಒಂದಿಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇಯಿರುತ್ತಾರೆ. ಕನ್ನಡಿಗ ಕೆಎಲ್ ರಾಹುಲ್ ಕೂಡ ಖ್ಯಾತ ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅತಿಯಾಳೊಂದಿಗಿನ ಗಾಳಿ ಸುದ್ದಿಗಾಗಿ ಆಗೀಗ ಸದ್ದಿಯಲ್ಲಿರುತ್ತಾರೆ. ಈ ಬಾರಿಯೂ ಅತಿಯಾ-ರಾಹುಲ್ ಜೋಡಿ ಸದ್ದು ಮಾಡುತ್ತಿದೆ. ಕೊರೊನಾ ವೈರಸ್‌ನಿಂದಾಗಿ ಎಲ್ಲಾ ಕ್ರಿಕೆಟ್ ಟೂರ್ನಿಗಳು ರದ್ದಾಗಿದ್ದರೂ ರಾಹುಲ್ ಮಾತ್ರ ಅತಿಯಾಳ ಕಾಲೆಳೆಯುತ್ತ ಬ್ಯುಸಿಯಾಗಿದ್ದಂತಿದೆ.
ಟೀಮ್ ಇಂಡಿಯಾದ ಆರಂಭಿಕರಾಗಿ ಉತ್ತಮ ಫಾರ್ಮ್‌ಗಾಗಿ ಗಮನ ಸೆಳೆದಿದ್ದ ಕೆಎಲ್ ರಾಹುಲ್, ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿರುವ ಚಿತ್ರವೊಂದಕ್ಕಾಗಿ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ರಾಹುಲ್ ಹಂಚಿಕೊಂಡಿರುವ ಫೋಟೋ, ಆತಿಯಾಳಿಗೆ ಸಂಬಂಧಿಸಿರುವುದರಿಂದ ಹೆಚ್ಚು ವೈರಲ್ ಆಗಿದೆ.
ರಾಹುಲ್-ಅತಿಯಾರ ಬಗ್ಗೆ ಆಗಾಗ ಡೇಟಿಂಗ್ ಗುಸುಗುಸು ಕೇಳಿಬರುತ್ತಿರುವುದಕ್ಕೂ ರಾಹುಲ್ ಚಿತ್ರ ಶೇರ್ ಮಾಡಿಕೊಂಡಿರುವುದಕ್ಕೂ ಎಲ್ಲೋ ಲಿಂಕ್ ಇದ್ದಂಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಬನಾನಾ ಬ್ರೆಡ್
ರಾಹುಲ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಬನಾನಾ ಬ್ರೆಡ್‌ನ ಚಿತ್ರ ಶೇರ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಚಿತ್ರವನ್ನು ಅತಿಯಾಳಿಗೂ ಟ್ಯಾಗ್ ಮಾಡಲಾಗಿರುವುದರಿಂದ ಅತಿಯಾ, ರಾಹುಲ್‌ಗಾಗಿ ಬ್ರೇಡ್ ತಯಾರಿಸುವಾಗ ಈ ಫಜೀತಿ ಆಗಿದ್ದು ಅನ್ನೋದೂ ಸ್ಪಷ್ಟವಾಗುತ್ತದೆ.

ಬ್ರೆಡ್ ಮುಂದಿಟ್ಟು ಅತಿಯಾಳಿಗೆ ತಮಾಷೆ
ರಾಹುಲ್ ಹಂಚಿಕೊಂಡಿರುವ ಮೊದಲ ಚಿತ್ರದಲ್ಲಿ 'ಗ್ಲುಟನ್ ಫ್ರೀ/ಶುಗರ್ ಫ್ರೀ ಬನಾನಾ ಬ್ರೇಡ್-ಎಕ್ಸ್‌ಪೆಕ್ಟೇಶನ್ಸ್' ಎಂದು ಬರೆದುಕೊಳ್ಳಲಾಗಿದೆ. ಮತ್ತೊಂದು ಚಿತ್ರದಲ್ಲಿ 'ರಿಯಾಲಿಟಿ' ಎಂದು ಬರೆಯಲಾಗಿದೆ. ಅಂದರೆ ಬ್ರೇಡ್ ತಯಾರಿಸಲು ಹೋಗಿ ಬ್ರೆಡ್ ಸುಟ್ಟುಕೊಂಡಿರುವ ಅತಿಯಾಳಿಗೆ ರಾಹುಲ್ ತಮಾಷೆ ಮಾಡಿದಂತಿದೆ.

ಚಿತ್ರ ಶೇರ್ ಮಾಡಿದ ಅತಿಯಾ
ಕೆಎಲ್ ರಾಹುಲ್ ಹಂಚಿಕೊಂಡಿರುವ ಎರಡೂ ಚಿತ್ರಗಳಲ್ಲೂ ಆತಿಯಾಳನ್ನು ಟ್ಯಾಗ್ ಮಾಡಿದ್ದಾರೆ. ಅಷ್ಟೇ ಅಲ್ಲ, ಅತಿಯಾ ಕೂಡ ಇದೇ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರ ಶೇರ್ ಮಾಡಿಕೊಳ್ಳುವಾಗ ಅತಿಯಾ, ಆ ಬ್ರೆಡ್ ತಯಾರಿಸುವಾಗ ಓವನ್‌ನಲ್ಲಿ ಸುಟ್ಟುಹೋಯ್ತು ಅನ್ನೋದನ್ನೂ ತಿಳಿಸಿದ್ದಾರೆ.

ಡೇಟಿಂಗ್‌ನಲ್ಲಿದ್ದಾರೆ ಅನ್ನೋ ಗುಸುಗುಸು
ಕೆಎಲ್ ರಾಹುಲ್ ಮತ್ತು ಅತಿಯಾ ಡೇಟಿಂಗ್‌ನಲ್ಲಿದ್ದಾರೆ, ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ ಎಂದು ಗಾಳಿಸುದ್ದಿಗಳು ಮೊದಲಿನಿಂದಲೂ ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಇಬ್ಬರೂ ಇನ್ನೂ ಸ್ಪಷ್ಟನೆ ನೀಡಿಲ್ಲ. ಈ ಬಗ್ಗೆ ಸುನಿಲ್ ಶೆಟ್ಟಿಯನ್ನು ಹೇಳಿದರೆ ಅವರು ಮಗಳ ವಿಚಾರ, ಮಗಳನ್ನೇ ಕೇಳಿ ಅನ್ನುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications