2 ಹೆಚ್ಚುವರಿ ಐಪಿಎಲ್ ತಂಡಗಳಿಗೆ ಅಕ್ಟೋಬರ್ 17ಕ್ಕೆ ಹರಾಜು ಪ್ರಕ್ರಿಯೆ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಎರಡು ಹೆಚ್ಚುವರಿ ತಂಡಗಳನ್ನು ಸೇರಿಸುವ ಪ್ರಕ್ರಿಯೆ ಮುಂದಿನ ತಿಂಗಳಿನಿಂದ ಶುರುವಾಗಲಿದೆ. ಐಪಿಎಲ್ 2021ರ ದ್ವಿತೀಯ ಹಂತದ ಆವೃತ್ತಿ ಮುಕ್ತಾಯವಾದ ಬಳಿಕ ಅಂದರೆ ಅಕ್ಟೋಬರ್ 17ಕ್ಕೆ ಐಪಿಎಲ್ ನೂತನ ಎರಡು ಫ್ರಾಂಚೈಸಿಗಳಿಗಾಗಿ ಹರಾಜು ನಡೆಯಲಿದೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮಾಹಿತಿ ನೀಡಿದೆ.
ಐಪಿಎಲ್ ದ್ವಿತೀಯ ಹಂತ ಟೂರ್ನಿಯ ಫೈನಲ್ ಮುಗಿದು ಟಿ20 ವಿಶ್ವಕಪ್ ಆರಂಭದ ದಿನದಂದೇ ನೂತನ ಐಪಿಎಲ್ ತಂಡಗಳಿಗಾಗಿ ಹರಾಜು ಪ್ರಕ್ರಿಯೆ ನಡೆಯಲಿದೆ. ಹರಾಜು ಪ್ರಕ್ರಿಯೆ ಮಧ್ಯಪ್ರಾಚ್ಯ ನಗರಗಳಾದ ದುಬೈ ಅಥವಾ ಮಸ್ಕತ್‌ನಲ್ಲಿ ನಡೆಯಲಿದೆ.
ಸೆಪ್ಟೆಂಬರ್ 21, ಅಕ್ಟೋಬರ್ 5 ಮತ್ತು ಅಕ್ಟೋಬರ್ 17ರ ಮೂರು ಪ್ರಮುಖ ದಿನಾಂಕಗಳನ್ನು ಬಿಸಿಸಿಐ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿರುವ ಪಾರ್ಟಿಗಳಿಗೆ ತಿಳಿಸಿದೆ. ಅಕ್ಟೋಬರ್ 17 ರಂದು ಬಹುತೇಕ ಹರಾಜು ಪ್ರಕ್ರಿಯೆ ನಡೆಯಲಿದೆ. ಫ್ರಾಂಚೈಸಿಗಳ ಖರೀದಿಗೆ ಸಂಬಂಧಿಸಿ ಟೆಂಡರ್ ಇನ್ವಿಟೇಶನ್ ಅಕ್ಟೋಬರ್ 5ರ ವರೆಗೂ ವಿತರಿಸಲಾಗುತ್ತದೆ. ಈ ಬಾರಿ ಇ-ಹರಾಜು ಇರುವುದಿಲ್ಲ. ಹಳೆಯ ಸಂಪ್ರದಾಯದಂತೆ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.
ಹೊಸ ತಂಡಗಳು ಬಂದ ಮೇಲೆ, ಲೀಗ್ ಹಂತದಲ್ಲಿ ಪ್ರತೀ ತಂಡಕ್ಕೂ 14 ಅಥವಾ 18 ತಂಡಗಳನ್ನು ಭರವಸೆ ನೀಡಲಾಗಿದೆ. ಈ ಪಂದ್ಯಗಳಲ್ಲಿ 7 ತವರಿನಲ್ಲಿ ಪಂದ್ಯಗಳು ಮತ್ತು ಬೇರೆ ತಾಣಗಳಲ್ಲಿ ಪಂದ್ಯಗಳೆಂದು ಮಾಹಿತಿ ಒದಗಿಸಲಾಗಿದೆ. ಎರಡು ಹೆಚ್ಚುವರಿ ತಂಡಗಳು ಸೇರ್ಪಡೆಯ ಬಳಿಕ ಲೀಗ್‌ನಲ್ಲಿ ಒಟ್ಟು 74 ಅಥವಾ 94 ಪಂದ್ಯಗಳು ನಡೆಯುವುದನ್ನು ನಿರೀಕ್ಷಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications