For Quick Alerts
ALLOW NOTIFICATIONS  
For Daily Alerts
 

IND vs SL 1st ODI: ವಿರಾಟ್ ಕೊಹ್ಲಿಗೆ ಆಗಸ್ಟ್ 2 ವಿಶೇಷ ದಿನ!

ಜುಲೈ 22 ಸೋಮವಾರ, ಟಿ20 ವಿಶ್ವಕಪ್ ಗೆದ್ದು ಕುಟುಂಬದ ಜೊತೆಗೆ ಕಾಲ ಕಳೆಯುತ್ತಿರುವ ಭಾರತ ತಂಡದ ಸ್ಟಾರ್ ಬ್ಯಾಟರ್‌ ವಿರಾಟ್ ಕೊಹ್ಲಿ ಶ್ರೀಲಂಕಾ ಪ್ರವಾಸದ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಆಗಸ್ಟ್ 2 ರಂದು ಉಭಯ ತಂಡಗಳ ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದೆ. ವಿರಾಟ್ ಕೊಹ್ಲಿ ಈ ದಿನವನ್ನು ಐತಿಹಾಸಿಕ ಮತ್ತು ವಿಶೇಷವಾಗಿಸಬಹುದು. ಈಗಾಗಲೇ ಟಿ20 ಕ್ರಿಕೆಟ್‌ಗೆ ವಿರಾಟ್ ವಿದಾಯ ಹೇಳಿದ್ದಾರೆ.

August 2 is a special day for Virat Kohli

ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ತಮ್ಮ ಹೆಸರಿನಲ್ಲಿ ಮತ್ತೊಂದು ವಿಶೇಷ ದಾಖಲೆ ಮಾಡಲು ಸಜ್ಜಾಗಿದ್ದಾರೆ. ಆಗಸ್ಟ್‌ 2 ರಂದು ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ತಲುಪುವ ನಿರೀಕ್ಷೆಯಲ್ಲಿದ್ದಾರೆ.

ಆಗಸ್ಟ್ 2 ರಂದು ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಟದ ಮೇಲೆ ಎಲ್ಲರ ಗಮನ ಇರಲಿದೆ. ಏಕೆಂದರೆ ಏಕದಿನದಲ್ಲಿ 14000 ರನ್‌ಗಳ ದಾಖಲೆಯನ್ನು ಕೊಹ್ಲಿ ಮಾಡಲಿದ್ದಾರೆ. ವಿರಾಟ್ ಕೊಹ್ಲಿ 50 ಓವರ್ ಮಾದರಿಯಲ್ಲಿ 14000 ರನ್ ಪೂರೈಸುವ ಕಾಲ ದೂರವಿಲ್ಲ.

ಇದುವರೆಗೆ ಕೊಹ್ಲಿ 292 ಪಂದ್ಯಗಳ 280 ಇನ್ನಿಂಗ್ಸ್‌ಗಳಲ್ಲಿ 13848 ರನ್ ಗಳಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ 152 ರನ್ ಗಳಿಸುವಲ್ಲಿ ಯಶಸ್ವಿಯಾದರೆ, ಈ ಸ್ವರೂಪದಲ್ಲಿ 14000 ರನ್ ಗಳಿಸಿದ ವಿಶ್ವದ ಮೂರನೇ ಬ್ಯಾಟರ್‌ ಆಗಲಿದ್ದಾರೆ.

ಏಕದಿನ ಮಾದರಿಯಲ್ಲಿ 14000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸುವಲ್ಲಿ ವಿಶ್ವದ ಇಬ್ಬರು ಬ್ಯಾಟರ್‌ ಮಾತ್ರ ಯಶಸ್ವಿಯಾಗಿದ್ದಾರೆ. ಭಾರತ ತಂಡದ ದಿಗ್ಗಜ ಬ್ಯಾಟರ್‌ ಸಚಿನ್ ತೆಂಡೂಲ್ಕರ್ ಮತ್ತು ಶ್ರೀಲಂಕಾ ಮಾಜಿ ನಾಯಕ ಹೆಸರು ಕುಮಾರ್ ಸಂಗಕ್ಕಾರ.

ಸಚಿನ್ ತೆಂಡೂಲ್ಕರ್ ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದು, 18426 ರನ್‌ಗಳನ್ನು ಬಾರಿಸಿದ್ದಾರೆ. ಇನ್ನು ಕುಮಾರ ಸಂಗಕ್ಕಾರ ಅವರು 14234 ರನ್ ಹೊಡೆದು ಎರಡನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಮೂರನೇ ಸ್ಥಾನದಲ್ಲಿದ್ದಾರೆ.

14 ಸಾವಿರ ಪೂರೈಸಿದ ಇಬ್ಬರು ಭಾರತೀಯರು!

ಕೊಹ್ಲಿ ಏಕದಿನದಲ್ಲಿ 14000 ರನ್ ಪೂರೈಸಿದ ತಕ್ಷಣ ಸಚಿನ್‌ ದಾಖಲೆಯನ್ನು ಸರಿಗಟ್ಟಿ ಭಾರತದ ಎರಡನೇ ಬ್ಯಾಟರ್‌ ಆಗಲಿದ್ದಾರೆ. 2023ರ ಏಕದಿನ ವಿಶ್ವಕಪ್‌ನಲ್ಲಿ ವಿರಾಟ್, ಸಚಿನ್ ತೆಂಡೂಲ್ಕರ್ ಅವರ ಶ್ರೇಷ್ಠ ರೆಕಾರ್ಡ್ ಅನ್ನು ಬ್ರೇಕ್‌ ಮಾಡಿ ಏಕದಿನದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ 50 ಶತಕಗಳನ್ನು ಹೊಂದಿದ್ದಾರೆ. ತೆಂಡೂಲ್ಕರ್ ತಮ್ಮ ವೃತ್ತಿಜೀವನದಲ್ಲಿ 49 ಏಕದಿನ ಶತಕಗಳನ್ನು ಗಳಿಸಲು ಸಾಧ್ಯವಾಯಿತು. ಏಕದಿನದಲ್ಲಿ 50 ಶತಕ ಸಿಡಿಸಿದ ವಿಶ್ವದ ಏಕೈಕ ಬ್ಯಾಟರ್‌ ಕೂಡ ಕೊಹ್ಲಿ.

Story first published: Monday, July 22, 2024, 8:15 [IST]
Other articles published on Jul 22, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+