ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸಿಸ್ ವಿರುದ್ಧ ಬಾಂಗ್ಲಾಗೆ ಐತಿಹಾಸಿಕ ಸರಣಿ ಗೆಲುವು: 3ನೇ ಟಿ20 ಪಂದ್ಯದಲ್ಲೂ ಸೋತ ಆಸ್ಟ್ರೇಲಿಯಾ

Aus vs Ban: Australia lost 3rd t20 match and t20 series against bangladesh

ಟಿ20 ಸರಣಿಯನ್ನಾಡಲು ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಂಡಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಹಿಂದೆಂದೂ ಕಾಣದಂತಾ ಆಘಾತಕಾರಿ ಸೋಲು ಅನುಭವಿಸಿದೆ. ಟಿ20 ಸರಣಿಯ ಸತತ ಮೂರನೇ ಪಂದ್ಯವನ್ನು ಕೂಡ ಆಸ್ಟ್ರೇಲಿಯಾ ತಂಡ ಸೋಲು ಕಂಡಿದೆ. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ 0-3 ಅಂತರದಿಂದ ಬಾಂಗ್ಲಾದೇಶಕ್ಕೆ ಸರಣಿಯನ್ನು ಒಪ್ಪಿಸಿದೆ.

ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶದ ಸರಣಿಯ ಮೂರನೇ ಪಂದ್ಯವು ಕೂಡ ಲೋಸ್ಕೋರಿಂಗ್ ಪಂದ್ಯವಾಗಿದ್ದಿದ್ದು ವಿಶೇಷ. ಆದರೆ ಮೂರನೇ ಪಂದ್ಯದಲ್ಲಿ ಕೂಡ ಆಸ್ಟ್ರೇಲಿಯಾ ಬಾಂಗ್ಲಾದೇಶದ ಬೌಲಿಂಗ್ ಎದುರು ಸಂಪೂರ್ಣವಾಗಿ ಮಂಡಿಯೂರಿತ್ತು. ಈ ಮೂಲಕ ಟಿ20 ವಿಶ್ವಕಪ್‌ಗೆ ಕೆಲವೇ ದಿನಗಳಿರುವಾಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಭಾರೀ ಆಘಾತವನ್ನು ಅನುಭವಿಸಿದೆ. ಆದರೆ ಬಾಂಗ್ಲಾದೇಶಕ್ಕೆ ಈ ಸರಣಿ ಗೆಲುವು ಭಾರೀ ಶಕ್ತಿ ನೀಡಿರುವುದರಲ್ಲಿ ಅನುಮಾನವಿಲ್ಲ.

ಢಾಕಾದ ಶೇರ್ ಎ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಈ ಪಂದ್ಯದಲ್ಲಿಯೂ ಬಾಂಗ್ಲಾದೇಶ ದೊಡ್ಡ ಮೊತ್ತವನ್ನು ಗಳಿಸುವಲ್ಲಿ ವಿಫಲವಾಗಿತ್ತು. ನಾಯಕ ಮೊಹಮ್ಮದುಲ್ಲಾ ಅರ್ಧ ಶತಕದ ನೆರವಿನಿಂದ ಬಾಂಗ್ಲದೇಶ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 127 ರನ್‌ಗಳಿಸಲಷ್ಟೇ ಶಕ್ತವಾಗಿತ್ತು.

ಈ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಪ್ರವಾಸಿ ಆಸ್ಟ್ರೇಲಿಯಾ ಮೊದಲ ವಿಕೆಟ್ ಬೇಗನೆ ಕಳೆದುಕೊಂಡರೂ ಎರಡಮೇ ವಿಕೆಟ್‌ಗೆ ಉತ್ತಮ ಜೊತೆಯಾಟ ಲಭಿಸಿತ್ತು. ಮೆಕ್‌ಡೆರ್ಮಾಟ್ ಹಾಗೂ ಮಿಚೆಲ್ ಮಾರ್ಶ್ ಅರ್ಧ ಶತಕದ ಜೊತೆಯಾಟವನ್ನು ನೀಡಿದರು. ಬಳಿಕ 35 ರನ್‌ಗಳಿಸಿದ್ದ ಮೆಕ್‌ಡೆರ್ಮಾರ್ಟ್ ಶಕೀಬ್‌ಗೆ ಬೌಲ್ಡ್ ಆಗುವ ಮೂಲಕ ವಿಕೆಟ್ ಒಪ್ಪಿಸಿದರು. ನಂತರ ಮೋಯ್ಸಿಸ್ ಹೆನ್‌ರಿಕ್ಯೂಸ್ ಅಲ್ಪಮೊತ್ತಕ್ಕೆ ಔಟಾದರು.

ನಂತರ ಅಲೆಕ್ಸ್ ಕ್ಯಾರಿ ಹಾಗೂ ಶಾನ್ ಮಾರ್ಶ್ ತಂಡವನ್ನು ಗೆಲುವಿನತ್ತ ಸಾಗಿಸಿದರು. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ಪಂದ್ಯವನ್ನು ಗೆಲ್ಲಲಿದೆ ಎಂದೇ ಭಾವಿಸಲಾಗಿತ್ತು. ಆದರೆ ತಮಡದ ಮೊತ್ತ 94 ರನ್‌ಗಳಾಗಿದ್ದಾಗ ಮಾರ್ಶ್ 51 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಬಳಿಕ ಅಲೆಕ್ಸ್ ಕ್ಯಾರಿಗೆ ಡೇನಿಯಲ್ ಕ್ರಿಶ್ಚಿಯನ್ ಜೊತೆಯಾದರು. ಆದರೆ ಬಾಂಗ್ಲಾದೇಶದ ಬೌಲರ್‌ಗಳ ಮುಂದೆ ಈ ಇಬ್ಬರ ಆಟ ಸಾಗಲೇ ಇಲ್ಲ. 128 ರನ್‌ಗಳ ಗುರಿಯನ್ನು ಪಡೆದಿದ್ದ ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ ಅಂತಿಮವಾಗಿ ಗಳಿಸಿದ್ದು ಕೇವಲ 117 ರನ್ ಮಾತ್ರ. ಹೀಗಾಗಿ 10 ರನ್‌ಗಳ ಅಂತರದಿಂದ ಬಾಂಗ್ಲಾದೇಶ ಗೆದ್ದು ಬೀಗಿತ್ತು.

ಈ ಗೆಲುವಿನ ಮೂಲಕ ಬಾಂಗ್ಲಾದೇಶ ಇತಿಹಾಸ ನಿರ್ಮಿಸಿದೆ. ಆಸ್ಟ್ರೇಲಿಯಾ ವಿರುದ್ಧ ಮೊಟ್ಟ ಮೊದಲ ಬಾರಿಗೆ ಸರಣಿಯನ್ನು ಗೆಲ್ಲುವಲ್ಲಿ ಬಾಂಗ್ಲಾದೇಶ ಯಶಸ್ವಿಯಾಗಿದೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಪ್ರಮುಖ ಆಟಗಾರರು ಅಲಭ್ಯವಾಗಿದ್ದರೂ ಇಷ್ಟು ಹೀನಾಯವಾಗಿ ಅನುಭವಿಸಿದ ಸೋಲು ತಂಡಕ್ಕೆ ದೊಡ್ಡ ಮಟ್ಟದ ಆಘಾತ ನೀಡಿರುವುದರಲ್ಲಿ ಅನುಮಾನಲ್ಲ.

ಈ ಗೆಲುವಿನ ಮೂಲಕ ಬಾಂಗ್ಲಾದೇಶ ಇತಿಹಾಸ ನಿರ್ಮಿಸಿದೆ. ಆಸ್ಟ್ರೇಲಿಯಾ ವಿರುದ್ಧ ಮೊಟ್ಟ ಮೊದಲ ಬಾರಿಗೆ ಸರಣಿಯನ್ನು ಗೆಲ್ಲುವಲ್ಲಿ ಬಾಂಗ್ಲಾದೇಶ ಯಶಸ್ವಿಯಾಗಿದೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಪ್ರಮುಖ ಆಟಗಾರರು ಅಲಭ್ಯವಾಗಿದ್ದರೂ ಇಷ್ಟು ಹೀನಾಯವಾಗಿ ಅನುಭವಿಸಿದ ಸೋಲು ತಂಡಕ್ಕೆ ದೊಡ್ಡ ಮಟ್ಟದ ಆಘಾತ ನೀಡಿರುವುದರಲ್ಲಿ ಅನುಮಾನಲ್ಲ.

ಈ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ 23 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ನೀಡಿದ್ದ 132 ರನ್‌ಗಳ ಗುರಿಯನ್ನು ಆಸ್ಟ್ರೇಲಿಯಾ 23 ರನ್‌ಗಳ ಅಂತರದಿಮದ ಸೋಲು ಕಂಡಿತ್ತು. ಎರಡನೇ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡ ಆ ಪಂದ್ಯದಲ್ಲಿ 122 ರನ್‌ಗಳ ಗುರಿಯನ್ನು ನಿಗದಿಪಡಿಸಿತ್ತು. ಈ ಪಂದ್ಯವನ್ನು ಬಾಂಗ್ಲಾದೇಶ ಐದು ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು.

ಸಿರಾಜ್ & ಆಂಡರ್ಸನ್ ನಡುವೆ ಪಂದ್ಯದ ವೇಳೆ ಮಾತಿನ ಚಕಮಕಿ, ವಿಡಿಯೋ ವೈರಲ್ | Oneindia Kannada

ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ಈಗಾಗಲೇ 0-3 ಅಂತರದಿಂದ ಸೋಲು ಕಂಡು ಆಘಾತವನ್ನು ಅನುಭವಿಸಿದೆ. ಸರಣಿಯನ್ನು ವಶಕ್ಕೆ ಪಡೆದಿರುವ ಬಾಂಗ್ಲಾದೇಶ ಈಗ ಉಳಿದ ಎರಡು ಪಂದ್ಯಗಳನ್ನು ಕೂಡ ಗೆದ್ದು ವೈಟ್‌ವಾಶ್ ಮಾಡಿ ಇತಿಹಾಸ ಬರೆಯುವತ್ತ ಚಿತ್ತ ನೆಟ್ಟಿದೆ. ಕೊನೆಯ ಎರಡು ಪಂದ್ಯಗಳನ್ನಾದರೂ ಗೆದ್ದು ಆಸ್ಟ್ರೇಲಿಯಾ ವೈಟ್‌ವಾಶ್ ಅವಮಾನದಿಂದ ಪಾರಾಗುತ್ತಾ ಎಂಬುದು ಈಗ ಉಳಿದಿರುವ ಕುತೂಹಲವಾಗಿದೆ.

Story first published: Friday, August 6, 2021, 22:55 [IST]
Other articles published on Aug 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X