Boxing Day Test: ಬೌಲರ್‌ಗಳ ಕೆಚ್ಚೆದೆಯ ಬ್ಯಾಟಿಂಗ್: ಸವಾಲಿನ ಮೊತ್ತದತ್ತ ಆಸ್ಟ್ರೇಲಿಯಾ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್ ರೋಚಕತೆ ಹೆಚ್ಚಿಸಿದೆ. ಈ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಪಡೆಗೆ ಸವಾಲಿನ ಮೊತ್ತದ ಗುರಿಯನ್ನು ನೀಡುವ ಸೂಚನೆ ನೀಡಿದೆ. ಆಸ್ಟ್ರೇಲಿಯಾ ದಿನದಾಟದಂತ್ಯಕ್ಕೆ 9 ವಿಕೆಟ್‌ಗೆ 228 ರನ್‌ಗಳಿಸಿದ್ದು, 333 ರನ್‌ಗಳ ಮುನ್ನಡೆ ಸಾಧಿಸಿದೆ. ಟೀಮ್ ಇಂಡಿಯಾದದ ಸ್ಟಾರ್ ಬೌಲರ್‌ಗಳ ಕರಾರುವಕ್ ದಾಳಿಯ ನೆರವಿನಿಂದ ಆಸ್ಟ್ರೇಲಿಯಾ ತಂಡದ ಬ್ಯಾಟರ್‌ಗಳನ್ನು ಎರಡನೇ ಇನಿಂಗ್ಸ್‌ನಲ್ಲಿ ಕಟ್ಟಿ ಹಾಕಿದರು. ಈ ಮೂಲಕ ಟೀಮ್ ಇಂಡಿಯಾದ ಗೆಲುವಿನ ಆಸೆಗೆ ರೆಕ್ಕೆ ಬಂದಿದೆ. ಆದರೆ ಗೆಲುವಿನ ಗುರಿ ದೊಡ್ಡದಾಗಿದೆ.
ಭಾನುವಾರ ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಪರ 369 ರನ್ ಸಾಧಿಸಿತು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 9 ವಿಕೆಟ್‌ಗೆ 228 ರನ್‌ಗಳಿಸಿದೆ. ಈ ಮೂಲಕ ಆಸ್ಟ್ರೇಲಿಯಾ ಈಗಾಗಲೇ 333 ರನ್ ಕಲೆ ಹಾಕಿದ್ದು, ಬೃಹತ್ ಮೊತ್ತದ ಮುನ್ನಡೆ ಸಾಧಿಸುವ ಸೂಚನೆ ನೀಡಿದೆ.

ಕಳಪೆ ಆರಂಭ
ಆಸ್ಟ್ರೇಲಿಯಾದ ಎರಡನೇ ಇನಿಂಗ್ಸ್‌ನಲ್ಲಿ ಕಳಪೆ ಆರಂಭವನ್ನು ಕಂಡಿತು. ಮೊದಲ ಇನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗಿದ್ದ ಸ್ಯಾಮ್ ಕಾನ್‌ಸ್ಟಾಸ್ ಅವರಿಗೆ ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಅವರು ಕಾಟ ನೀಡಿದರು. ಸ್ಯಾಮ್ 8 ರನ್‌ಗಳಿಸಿ ಮುನ್ನುಗುತ್ತಿದ್ದಾಗ ಬೋಲ್ಡ್ ಆದರು.
ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಉಸ್ಮಾನ್ ಖವಾಜ್ ಸಹ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಇವರು 21 ರನ್‌ಗಳಿಸಿದ್ದಾಗ ಸಿರಾಜ್ ತೋಡಿದ ಖೆಡ್ಡಾಗೆ ಬಲಿಯಾದರು. ಸ್ಟೀವನ್ ಸ್ಮಿತ್ 13 ರನ್ ಸಿಡಿಸಿ ಔಟ್ ಆದರು. ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ್ದ ಟ್ರಾವಿಡ್ ಹೆಡ್ ಅವರನ್ನು ಪೆವಿಲಿಯನ್‌ಗೆ ಅಟ್ಟುವಲ್ಲಿ ಜಸ್ಪ್ರಿತ್ ಬುಮ್ರಾ ಯಶಸ್ವಿಯಾದರು. ಈ ಮೂಲಕ ಆಸ್ಟ್ರೇಲಿಯಾ ದೊಡ್ಡ ಕನಸಿನ ಆಸೆಗೆ ಪೆಟ್ಟು ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಮಿಚೆಲ್ ಮಾರ್ಷ್ ಹಾಗೂ ಅಲೆಕ್ಸ್ ಕ್ಯಾರಿ ಸಿಂಗಲ್ ಡಿಜಿಟ್‌ನಲ್ಲಿ ಆಟ ಮುಗಿಸಿದರು.

ಒಂದು ಹಂತದಲ್ಲಿ 91 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸ್ಟ್ರೇಲಿಯಾ ತಂಡಕ್ಕೆ ಪ್ಯಾಟ್ ಕಮಿನ್ಸ್ ಹಾಗೂ ಮಾರ್ನಸ್ ಲಂಬುಶೇನ್ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಏಳನೇ ವಿಕೆಟ್‌ಗೆ 116 ಎಸೆತಗಳಲ್ಲಿ 57 ರನ್‌ಗಳ ಜೊತೆಯಾಟವನ್ನು ನೀಡಿತು. 70 ರನ್‌ಗಳಿಸಿ ತಂಡಕ್ಕೆ ಆಧಾರವಾಗಿದ್ದ ಲಂಬುಶೇನ್ ಸಿರಾಜ್ ಎಸೆತದಲ್ಲಿ ಔಟ್ ಆದರು.
ಕೊನೆಯ ವಿಕೆಟ್‌ಗೆ ಉತ್ತಮ ಜೊತೆಯಾಟ
ಆಸ್ಟ್ರೇಲಿಯಾದ ಪರ ನಾಥನ್ ಲಿಯಾನ್ (ಅಜೇಯ 41) ಹಾಗೂ ಸ್ಟಾಕ್ ಬಾಲೆಂಡ್ (ಅಜೇಯ 10) ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 110 ಎಸೆತಗಳಲ್ಲಿ ಅಜೇಯ 55 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿ ತಂಡವನ್ನು ಸವಾಲಿನ ಮೊತ್ತದತ್ತ ತೆಗೆದುಕೊಂಡು ಹೋಯಿತು. ಕೊನೆಯ ದಿನದಾಟದಲ್ಲಿ ನಾಥನ್ ಲಿಯಾನ್ ಹಾಗೂ ಬೋಲೆಂಡ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications