Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Aus vs NZ: ಹೆಡ್, ವಾರ್ನರ್ ಆರ್ಭಟ! ಬೃಹತ್ ಮೊತ್ತ ಕಲೆ ಹಾಕಿದ ಆಸ್ಟ್ರೇಲಿಯಾ

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಎಚ್‌ಪಿಸಿಎ) ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಬ್ಯಾಟರ್ ಗಳು ರನ್ ಹೊಳೆಯನ್ನೇ ಹರಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 49.2 ಓವರ್ ಗಳಲ್ಲಿ 388 ರನ್‌ಗಳಿಗೆ ಆಲೌಟ್ ಆಗಿದೆ.

ಆಸ್ಟ್ರೇಲಿಯಾ ಆರಂಭಿಕ ಬ್ಯಾಟರ್ ಗಳು ಧರ್ಮಶಾಲಾದಲ್ಲಿ ಅಬ್ಬರಿಸಿ ಬೊಬ್ಬಿರಿದರು. ಟ್ರಾವಿಸ್ ಹೆಡ್ ಮತ್ತು ಡೇವಿಡ್ ವಾರ್ನರ್ ಮೊದಲ ಓವರ್ ನಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಆರಂಭಿಸಿದರು. ಆಸ್ಟ್ರೇಲಿಯಾ ಕೇವಲ 4.1 ಓವರ್ ಗಳಲ್ಲಿ 50 ರನ್ ಕಲೆಹಾಕಿತು. 8.5 ಓವರ್ ಗಳಲ್ಲೇ 100 ರನ್‌ಗಳನ್ನು ಗಳಿಸಿದ ಆಸ್ಟ್ರೇಲಿಯಾ ಬೃಹತ್ ಮೊತ್ತ ಗಳಿಸುವ ಸೂಚನೆ ನೀಡಿತ್ತು.

 Aus vs NZ: Australia Allout For 388 Runs Against New Zealand

ಡೇವಿಡ್ ವಾರ್ನರ್ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರೆಸಿದರು. ಕೇವಲ 65 ಎಸೆತಗಳಲ್ಲಿ 5 ಬೌಂಡರಿ 6 ಸಿಕ್ಸರ್ ಸಹಿತ 81 ರನ್ ಗಳಿಸಿ ಔಟಾದರು. ನೆದರ್ಲ್ಯಾಂಡ್ಸ್ ವಿರುದ್ಧ ಶತಕ ಗಳಿಸಿದ್ದ ಅವರು ಇಂದು ಶತಕವನ್ನು ತಪ್ಪಿಸಿಕೊಂಡರು.

1
1-2023

ಟ್ರಾವಿಸ್ ಹೆಡ್ ಅಬ್ಬರದ ಶತಕ

ಗಾಯದಿಂದ ಚೇತರಿಸಿಕೊಂಡ ಬಳಿಕ ತಂಡವನ್ನು ಸೇರಿಕೊಂಡ ಟ್ರಾವಿಸ್ ಹೆಡ್ ತಮ್ಮ ಏಕದಿನ ವಿಶ್ವಕಪ್‌ನ ಮೊದಲ ಶತಕದಲ್ಲೇ ಅಬ್ಬರಿಸಿದರು. ಕೇವಲ 67 ಎಸೆತಗಳಲ್ಲಿ 10 ಬೌಂಡರಿ 7 ಸಿಕ್ಸರ್ ಸಹಿತ 109 ರನ್ ಗಳಿಸಿ ಮಿಂಚಿದರು.

ನಂತರ ಬಂದ ಮಿಚೆಲ್ ಮಾರ್ಷ್ 36 ರನ್ ಗಳಿಸಿದರೆ, ಸ್ಟೀವ್ ಸ್ಮಿತ್ 18 , ಮಾರ್ನಸ್ ಲ್ಯಾಬುಸ್ಚಾಗ್ನೆ 18 ರನ್ ಗಳಿಸಿ ಔಟಾದರು. ಗ್ಲೆನ್ ಮ್ಯಾಕ್ಸ್‌ವೆಲ್ 24 ಎಸೆತಗಳಲ್ಲಿ 5 ಬೌಂಡರಿ ಎರಡು ಸಿಕ್ಸರ್ ಸಹಿತ 41 ರನ್ ಗಳಿಸಿ ಔಟಾದರು. ಜೋಶ್ ಇಂಗ್ಲಿಸ್ 28 ಎಸೆತಗಳಲ್ಲಿ 38 ರನ್ ಗಳಿಸಿದರೆ, ಆಯಕ ಪ್ಯಾಟ್ ಕಮ್ಮಿನ್ಸ್ 14 ಎಸೆತಗಳಲ್ಲಿ 2 ಬೌಂಡರಿ 4 ಸಿಕ್ಸರ್ ಸಹಿತ 37 ರನ್ ಗಳಿಸಿ ಮಿಂಚಿದರು.

ಒಂದು ಹಂತದಲ್ಲಿ ಆಸ್ಟ್ರೇಲಿಯಾ ಬೃಹತ್ ಮೊತ್ತ ಗಳಿಸುತ್ತದೆ ಎಂದೇ ಭಾವಿಸಲಾಗಿತ್ತು, ಆದರೆ ಗ್ಲೆನ್ ಫಿಲಿಪ್ಸ್ ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್ ಮತ್ತು ಸ್ಟೀವ್ ಸ್ಮಿತ್ ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ರನ್ ಗಳಿಕೆಗೆ ಸ್ವಲ್ಪ ಕಡಿವಾಣ ಹಾಕಿದರು. ಟ್ರೆಂಟ್ ಬೋಲ್ಟ್ ಕೂಡ 3 ವಿಕೆಟ್ ಪಡೆದರೆ, ಮಿಚೆಲ್ ಸ್ಯಾಂಟ್ನರ್ 2 ವಿಕೆಟ್ ಪಡೆದರು.

ಉಭಯ ತಂಡಗಳ ಆಡುವ ಬಳಗ

ಆಸ್ಟ್ರೇಲಿಯಾ : ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಪ್ಯಾಟ್ ಕಮಿನ್ಸ್ (‍ನಾಯಕ), ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್.

ನ್ಯೂಜಿಲೆಂಡ್ : ಡೆವೊನ್ ಕಾನ್ವೆ, ವಿಲ್ ಯಂಗ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್/ ನಾಯಕ), ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.

Story first published: Saturday, October 28, 2023, 14:21 [IST]
Other articles published on Oct 28, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+