For Quick Alerts
ALLOW NOTIFICATIONS  
For Daily Alerts
 

AUS Vs SA 2nd Test: 100ನೇ ಟೆಸ್ಟ್ ಪಂದ್ಯದಲ್ಲಿ 200 ರನ್ ಗಳಿಸಿ ಇತಿಹಾಸ ನಿರ್ಮಿಸಿದ ಡೇವಿಡ್ ವಾರ್ನರ್

Aus vs SA 2nd Test : David Warner Becomes The First Australian To Score Double Hundred On 100th Test

ಡೇವಿಡ್ ವಾರ್ನರ್ ಎಂಸಿಜಿ ಅಂಗಳದಲ್ಲಿ ದ್ವಿಶತಕ ಸಿಡಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. 100ನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಡೇವಿಡ್ ವಾರ್ನರ್ ಮೊದಲನೇ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಸಿಡಿಸಿದ ಸಾಧನೆ ಮಾಡಿದರು.

100ನೇ ಪಂದ್ಯದಲ್ಲಿ 200 ರನ್ ಗಳಿಸಿದ ಮೊದಲ ಆಸ್ಟ್ರೇಲಿಯಾ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ಈ ಮೊದಲು ಇಂಗ್ಲೆಂಡ್‌ನ ಜೋ ರೂಟ್ ಮಾತ್ರ ತಮ್ಮ 100ನೇ ಟೆಸ್ಟ್‌ನಲ್ಲಿ 200 ರನ್ ಗಳಿಸಿದ ಸಾಧನೆ ಮಾಡಿದ್ದರು.

ಫಾರ್ಮ್‌ಗೆ ಮರಳಲು ಪ್ರಯತ್ನ ಪಡುತ್ತಿದ್ದ ಡೇವಿಡ್ ವಾರ್ನರ್ ತಮ್ಮ 100ನೇ ಟೆಸ್ಟ್‌ನಲ್ಲಿ ರನ್‌ ಬರವನ್ನು ನೀಗಿಸಿಕೊಂಡರು. ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ದ್ವಿಶತಕದ ಸಾಧನೆ ಮಾಡುವ ಮೂಲಕ ಸ್ಮರಣೀಯ ಇನ್ನಿಂಗ್ಸ್ ಆಗಿಸಿದರು.

ದ್ವಿಶತಕ ಗಳಿಸಿದ ಸಾಧನೆ ಜೊತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 8000 ರನ್‌ ಪೂರೈಸಿದ ಸಾಧನೆ ಮಾಡಿದರು. ಆಸ್ಟ್ರೇಲಿಯಾ ಪರವಾಗಿ 8 ಸಾವಿರ ರನ್ ಪೂರೈಸಿದ 8ನೇ ಆಟಗಾರ ಎನಿಸಿಕೊಂಡಿದ್ದಾರೆ. 2011ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವಾರ್ನರ್, 100ನೇ ಟೆಸ್ಟ್ ಪಂದ್ಯದಲ್ಲಿ 8000 ರನ್‌ಗಳನ್ನು ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು 25 ಶತಕಗಳನ್ನು ಗಳಿಸಿದ್ದು, 3 ದ್ವಿಶತಕ ಗಳಿಸಿದ ಸಾಧನೆ ಮಾಡಿದ್ದಾರೆ.

ಶತಕವನ್ನು ಪೂರೈಸಿದ ನಂತರ ಅವರು ಕಾಲು ನೋವಿನಿಂದ ಬಳಲಿದರು. ಆದರೂ ಇನ್ನಿಂಗ್ಸ್ ಮುಂದುವರೆಸಿದ ಅವರು ಅಮೋಘ ದ್ವಿಶತಕವನ್ನು ಪೂರೈಸಿದರು. 200 ರನ್ ಗಳಿಸುತ್ತಿದ್ದಂತೆ ರಿಟೈರ್ಡ್ ಹರ್ಟ್ ಆದ ವಾರ್ನರ್, ವಿಶ್ರಾಂತಿ ಪಡೆಯಲು ಪೆವಿಲಿಯನ್‌ಗೆ ತೆರಳಿದರು.

Aus vs SA 2nd Test : David Warner Becomes The First Australian To Score Double Hundred On 100th Test

ಬೃಹತ್ ಮುನ್ನಡೆಯತ್ತ ಆಸ್ಟ್ರೇಲಿಯಾ

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಬೃಹತ್ ಮುನ್ನಡೆ ಸಾಧಿಸುವ ಸೂಚನೆ ನೀಡಿದೆ. ದಕ್ಷಿಣ ಆಫ್ರಿಕಾ ತಂಡವನ್ನು ಮೊದಲನೇ ಇನ್ನಿಂಗ್ಸ್‌ನಲ್ಲಿ 189 ರನ್‌ಗಳಿಗೆ ಆಲೌಟ್ ಮಾಡಿದ ಆಸ್ಟ್ರೇಲಿಯಾ, ಡೇವಿಡ್‌ ವಾರ್ನರ್‍‌ ಅಮೋಘ ದ್ವಿಶತಕದ ನೆರವಿನಿಂದ ಮುನ್ನಡೆ ಪಡೆದುಕೊಂಡಿತು.

ಭಾರತೀಯ ಕಾಲಮಾನ ಬೆಳಿಗ್ಗೆ 11.45 ರ ವೇಳೆಗೆ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ ನಷ್ಟಕ್ಕೆ 355 ರನ್ ಗಳಿಸಿದ್ದು, 168 ರನ್‌ಗಳ ಮುನ್ನಡೆ ಪಡೆದುಕೊಂಡಿದೆ.

ಆಸ್ಟ್ರೇಲಿಯಾ ಪರವಾಗಿ ಡೇವಿಡ್ ವಾರ್ನರ್ 200 ರನ್ ಗಳಿಸಿದರೆ, ಸ್ಟೀವ್ ಸ್ಮಿತ್ 85 ರನ್ ಗಳಿಸಿದರು. ಉಸ್ಮಾನ್ ಖವಾಜ 1 ರನ್ ಗಳಿಸಿ ಔಟಾದರೆ, ಮಾರ್ನಸ್ ಲ್ಯಾಬುಸ್ಚಾಗ್ನೆ 14 ರನ್‌ ಗಳಿಸಿದ್ದಾಗ ರನೌಟ್ ಆಗುವ ಮೂಲಕ ನಿರಾಸೆ ಅನುಭವಿಸಿದರು.

Story first published: Tuesday, December 27, 2022, 11:47 [IST]
Other articles published on Dec 27, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+