Aus vs SA 3ನೇ ODI: ಪಾಥುಮ್ ನಿಸ್ಸಂಕಾ ಶತಕದಾಟಕ್ಕೆ ಪತರುಗುಟ್ಟಿದ ಆಸೀಸ್

ಭಾನುವಾರದಂದು ಶ್ರೀಲಂಕಾದ ಪಾಥುಮ್ ನಿಸ್ಸಾಂಕಾ ಅವರು ಚೊಚ್ಚಲ ಏಕದಿನ ಶತಕ ಬಾರಿಸಿದ್ದು, ಶ್ರೀಲಂಕಾ ತಂಡವು ಮೂರನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಈ ಮೂಲಕ ಶ್ರೀಲಂಕಾ 5 ಪಂದ್ಯಗಳ ಏಕದಿನ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿದೆ.
ಆಸ್ಟ್ರೇಲಿಯ ಪರ ಟ್ರಾವಿಸ್ ಹೆಡ್ ಅವರ ಅಮೋಘ ಅರ್ಧಶತಕ (70) ನಂತರ ಶ್ರೀಲಂಕಾ ಗೆಲ್ಲಲು ಕಠಿಣ 292 ರನ್‌ಗಳ ಗುರಿ ನೀಡಿತು. ಕೊಲಂಬೊದಲ್ಲಿ ಆತಿಥೇಯ ಶ್ರೀಲಂಕಾ ಐದು ಪಂದ್ಯಗಳ ಸರಣಿಯಲ್ಲಿ ಸತತ ಎರಡನೇ ಗೆಲುವಿನಲ್ಲಿ ಒಂಬತ್ತು ಎಸೆತಗಳು ಬಾಕಿ ಇರುವಂತೆಯೇ ಆರಾಮವಾಗಿ ಗೆದ್ದರು.

ಟ್ರಾವಿಸ್ ಹೆಡ್ ಅಜೇಯ 70, ಆರನ್ ಫಿಂಚ್ ಅವರ 62 ರನ್
ಟಾಸ್ ಗೆದ್ದ ನಂತರ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು ಮತ್ತು ಟ್ರಾವಿಸ್ ಹೆಡ್‌ರಿಂದ ಅಜೇಯ 70 ಮತ್ತು ನಾಯಕ ಆರನ್ ಫಿಂಚ್ ಅವರ 62 ರನ್‌ಗಳ ನೆರವಿನಿಂದ ಕೊಲಂಬೊ ಸ್ಟೇಡಿಯಂನಲ್ಲಿ ಸ್ಪರ್ಧಾತ್ಮಕ 291-6 ರನ್ ಗಳಿಸಿತು.
ಹೆಡ್ ಮತ್ತು ಅಲೆಕ್ಸ್ ಕ್ಯಾರಿ (49) ಅವರ 72 ರನ್ ಜೊತೆಯಾಟದ ಸಮಯದಲ್ಲಿ ಆಸ್ಟ್ರೇಲಿಯಾವು 121/4 ರಲ್ಲಿ ಕಷ್ಟಕರವಾದ ಸ್ಥಿತಿಯಲ್ಲಿ ಬಲ ತುಂಬಿದ ಗ್ಲೆನ್ ಮ್ಯಾಕ್ಸ್‌ವೆಲ್ 18 ಎಸೆತಗಳಲ್ಲಿ 33 ರನ್ ಗಳಿಸಿ ಉತ್ತಮ ಮೊತ್ತ ಕಲೆಹಾಕಿದರು.

ಆಸ್ಟ್ರೇಲಿಯಾದ ಬೌಲಿಂಗ್ ಪಡೆ ಧೂಳಿಪಟ
ನಂತರ ಬ್ಯಾಟಿಂಗ್ ಆರಭಿಸಿದ ಶ್ರೀಲಂಕಾದ ಆರಂಭಿಕ ನಿರೋಶನ್ ಡಿಕ್ವೆಲ್ಲಾ ಅವರು 25 ರನ್ ಗಳಿಸಿದ್ದಾಗ ಗ್ಲೆನ್ ಮ್ಯಾಕ್ಸ್‌ವೆಲ್ ಬೌಲ್ಡ್ ಮಾಡಿದರು. ಆದರೆ ಇಬ್ಬನಿಯಿಂದ ನಿಸ್ಸಾಂಕಾ ಮತ್ತು ಕುಸಾಲ್ ಮೆಂಡಿಸ್ ಇವರಿಬ್ಬರು ಜೋಶ್ ಹ್ಯಾಜಲ್‌ವುಡ್, ಜ್ಯೆ ರಿಚರ್ಡ್‌ಸನ್ ಮತ್ತು ಮ್ಯಾಥ್ಯೂ ಕುಹ್ನೆಮನ್‌ರ ಆಸ್ಟ್ರೇಲಿಯಾದ ಬೌಲಿಂಗ್ ಪಡೆಯನ್ನು ಧೂಳಿಪಟ ಮಾಡಿದರು.
ಕುಸಾಲ್ ಮೆಂಡಿಸ್ 85 ಎಸೆತಗಳಲ್ಲಿ ಅಜೇಯ 87 ರನ್ ಗಳಿಸಿ ಗಾಯದಿಂದ ನಿವೃತ್ತರಾದರು ಮತ್ತು ಧನಂಜಯ ಡಿ ಸಿಲ್ವಾ 25 ರನ್ ಗಳಿಸಿದರು. ಆದರೆ ಮಾಥುಮ್ ನಿಸ್ಸಾಂಕಾ ಬಹುತೇಕ ಕೊನೆಯವರೆಗೂ ಆಡಿ 147 ಎಸೆತಗಳಲ್ಲಿ 137 ರನ್ ಗಳಿಸಿ ರಿಚರ್ಡ್ಸನ್ ಎಸೆತದಲ್ಲಿ ಕ್ಯಾಚ್ ನೀಡಿದರು. ಅವರ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಒಳಗೊಂಡಿದ್ದವು.

ಅಂತಿಮ ಓವರ್‌ನಲ್ಲಿ ಸಿಕ್ಸರ್‌ನೊಂದಿಗೆ ಶ್ರೀಲಂಕಾಗೆ ಗೆಲುವು
ಲಂಕಾ ನಾಯಕ ದಸುನ್ ಶನಕ ಅವರನ್ನು ರಿಚರ್ಡ್‌ಸನ್ ಡಕ್ ಔಟ್ ಮಾಡಿದರು, ಆದರೆ ಚರಿತ್ ಅಸಲಂಕಾ ಅವರು ಹ್ಯಾಜಲ್‌ವುಡ್‌ನ ಅಂತಿಮ ಓವರ್‌ನಲ್ಲಿ ಸಿಕ್ಸರ್‌ನೊಂದಿಗೆ ಶ್ರೀಲಂಕಾವನ್ನು ಗೆಲ್ಲಿಸಿದರು.
"ಡ್ರೆಸ್ಸಿಂಗ್ ರೂಮ್‌ನಲ್ಲಿ ನಾವು ಜಾಗೃತ ಅಟದ ಬಗ್ಗೆ ಮಾತನಾಡಿದ್ದೇವೆ, ಈ ತಂಡಕ್ಕೆ ಸರಣಿ ಗೆಲುವು ಸಾಧಿಸಲು ಇದು ಉತ್ತಮ ಅವಕಾಶ." ಎಂದು ದಸುನ್ ಶನಕ ಹೇಳಿದರು.
"ಉಭಯ ತಂಡಗಳಿಗೆ ಉಷ್ಣಾಂಶ ಮತ್ತು ತೇವಾಂಶವು ಸವಾಲಾಗಿತ್ತು. ಆದರೆ ನಾವು ಅದನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ನಿಭಾಯಿಸಿದ್ದೇವೆ," ಎಂದು 24 ವರ್ಷದ ಮಾಥುಮ್ ನಿಸ್ಸಾಂಕ ಪಂದ್ಯದ ನಂತರ ತಿಳಿಸಿದರು.

ಎರಡು ತಂಡಗಳ ಸಂಕ್ಷಿಪ್ತ ಸ್ಕೋರ್‌ಗಳು
"ವಿಕೆಟ್ ಸ್ವಲ್ಪ ಉತ್ತಮವಾದಂತೆ ತೋರುತ್ತಿದೆ, ಅದು ಮೇಲ್ನೋಟಕ್ಕೆ ಹೆಚ್ಚು ನಿಲ್ಲುತ್ತಿಲ್ಲ. ಅದು ಉತ್ತಮ ರನ್ ಚೇಸ್ ಆಗಿತ್ತು, ಆದರೆ ಶ್ರೀಲಂಕಾಕ್ಕೆ ಎಲ್ಲಾ ಕ್ರೆಡಿಟ್ ಸಲ್ಲಬೇಕು," ಎಂದು ಆಸ್ಟ್ರೇಲಿಯಾದ ನಾಯಕ ಆರನ್ ಫಿಂಚ್ ಹೇಳಿದರು.
ಸಂಕ್ಷಿಪ್ತ ಸ್ಕೋರ್‌ಗಳು:
ಆಸ್ಟ್ರೇಲಿಯಾ: 291/6 (ಟ್ರಾವಿಸ್ ಹೆಡ್ 70 (ನಿ), ಆರನ್ ಫಿಂಚ್ 62, ಅಲೆಕ್ಸ್ ಕ್ಯಾರಿ 49; ಜೆಫ್ರಿ ವಾಂಡರ್ಸೆ 3/49)
ಶ್ರೀಲಂಕಾ: 48.3 ಓವರ್‌ಗಳಲ್ಲಿ 292/4 (ಪಾಥುಮ್ ನಿಸ್ಸಂಕಾ 137, ಕುಸಲ್ ಮೆಂಡಿಸ್ 70)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications