For Quick Alerts
ALLOW NOTIFICATIONS  
For Daily Alerts
 

AUS vs SA: ವಿಶ್ವಕಪ್‌ನಲ್ಲಿ 31 ವರ್ಷಗಳ ಹಿಂದಿನ ಕಳಪೆ ದಾಖಲೆ ಮರುಕಳಿಸಿದ ಆಸ್ಟ್ರೇಲಿಯಾ; ಆಘಾತದ ಮೇಲೆ ಆಘಾತ!

ಗುರುವಾರ, ಅಕ್ಟೋಬರ್ 12ರಂದು ಲಕ್ನೋದ ಏಕನಾ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ 10ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ಆಲ್‌ರೌಂಡ್ ಪ್ರದರ್ಶನ ನೀಡಿ 134 ರನ್‌ಗಳ ಬೃಹತ್ ಗೆಲುವು ಸಾಧಿಸಿತು.

ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ಈ ಸೋಲು 1992ರ ನಂತರ ವಿಶ್ವಕಪ್ ಅಭಿಯಾನದ ಪ್ರಾರಂಭದಲ್ಲಿ ಸತತ ಎರಡು ಸೋಲು ಅನುಭವಿಸಿದ ಮೊದಲ ನಿದರ್ಶನವಾಗಿದೆ.

Aus vs SA Match: Australia Repeats Their 31-Year-Old Worst Record at ICC World Cup 2023

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಕ್ವಿಂಟನ್ ಡಿ ಕಾಕ್ ಅವರ ಅದ್ಭುತ ಸತತ ಎರಡನೇ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 311 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತ್ತು.

ದಕ್ಷಿಣ ಆಫ್ರಿಕಾ ನೀಡಿದ್ದ 312 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 40.5 ಓವರ್‌ಗಳಲ್ಲಿ 177 ರನ್‌ಗಳಿಗೆ ಸರ್ವಪತನ ಕಂಡಿತು ಮತ್ತು 134 ರನ್‌ಗಳ ಬೃಹತ್ ಅಂತರದ ಸೋಲು ಅನುಭವಿಸಿತು. ಗಮನಾರ್ಹವಾಗಿ, ಈ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ತಂಡದ ಸತತ ಎರಡನೇ ಸೋಲು ಇದಾಗಿದೆ.

2019ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಗುಂಪು-ಹಂತದ ಪಂದ್ಯದ ಸೋಲು ಮತ್ತು ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಸೋಲಿನ ನಂತರ ಆಸ್ಟ್ರೇಲಿಯಾ ತಂಡ ಮೊದಲ ಬಾರಿಗೆ ಸತತ ನಾಲ್ಕು ವಿಶ್ವಕಪ್ ಪಂದ್ಯಗಳನ್ನು ಕಳೆದುಕೊಂಡಿತು.

Aus vs SA Match: Australia Repeats Their 31-Year-Old Worst Record at ICC World Cup 2023

ಅಲ್ಲದೆ, ದಕ್ಷಿಣ ಆಫ್ರಿಕಾ ವಿರುದ್ಧದ 134 ರನ್‌ಗಳ ಸೋಲು, ಏಕದಿನ ವಿಶ್ವಕಪ್‌ನಲ್ಲಿ ರನ್‌ಗಳ ಅಂತರದಲ್ಲಿ ಆಸ್ಟ್ರೇಲಿಯಾ ತಂಡದ ಅತಿದೊಡ್ಡ ಸೋಲು ಕೂಡ ಆಗಿದೆ.

ತನ್ನ 96 ವಿಶ್ವಕಪ್ ಪಂದ್ಯಗಳಲ್ಲಿ 25ರಲ್ಲಿ ಮಾತ್ರ ಸೋತಿರುವ ಆಸ್ಟ್ರೇಲಿಯಾ, 1992ರ ವಿಶ್ವಕಪ್‌ನಲ್ಲಿ ಸತತ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸೋತಿತ್ತು. ಅದು ಮೊದಲ ಬಾರಿಗೆ ಐಸಿಸಿ ಚತುರ್ವಾರ್ಷಿಕ ಪಂದ್ಯಾವಳಿಗೆ ಆತಿಥ್ಯ ವಹಿಸಿತ್ತು ಕೂಡ.

ಅಂತಿಮವಾಗಿ, ತವರಿನಲ್ಲಿ ನಡೆದ ಆ ವಿಶ್ವಕಪ್ ಆವೃತ್ತಿಯಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಆಸ್ಟ್ರೇಲಿಯಾ ತಂಡ ವಿಫಲವಾಯಿತು.

ಆಸ್ಟ್ರೇಲಿಯಾ ತನ್ನ ಮೊದಲ ಸತತ ಎರಡು ಪಂದ್ಯಗಳನ್ನು 1983ರ ವಿಶ್ವಕಪ್ (ಭಾರತ ಮತ್ತು ವೆಸ್ಟ್ ಇಂಡೀಸ್ ವಿರುದ್ಧ) ಮತ್ತು 1979ರ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಸೋಲು ಅನುಭವಿಸಿತ್ತು.

ಗಮನಾರ್ಹವಾಗಿ, 2011ರ ವಿಶ್ವಕಪ್ ನಂತರ ದಕ್ಷಿಣ ಆಫ್ರಿಕಾ ತಂಡ ವಿಶ್ವಕಪ್‌ನಲ್ಲಿ ತನ್ನ ಮೊದಲ ಎರಡು ಸತತ ಗುಂಪು-ಹಂತದ ಪಂದ್ಯಗಳನ್ನು ಗೆದ್ದಿರುವುದು ಇದೇ ಮೊದಲಾಗಿದೆ.

Story first published: Thursday, October 12, 2023, 23:15 [IST]
Other articles published on Oct 12, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+