ಹರಿಣಗಳಿಗೆ ಮಿಲ್ಲರ್ ಶತಕದ ಆಸರೆ: ವಿಶ್ವಕಪ್ ನಾಕೌಟ್‌ನಲ್ಲಿ ದ. ಆಫ್ರಿಕಾ ಪರ ಶತಕ ಸಿಡಿಸಿದ ಮೊದಲ ಆಟಗಾರ
ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ವಿಭಾಗ ಆಘಾತಕಾರಿ ಪ್ರದರ್ಶನ ನೀಡಿದೆ. ಟೂರ್ನಿಯುದ್ದಕ್ಕೂ ಅಬ್ಬರಿಸಿದ್ದ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳು ನಿರ್ಣಾಯಕ ಘಟ್ಟದಲ್ಲಿ ಕೈಕೊಟ್ಟಿದ್ದಾರೆ. ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಬೌಲರ್‌ಗಳು ಅದ್ಬುತ ಯಶಸ್ಸು ಸಾಧಿಸಿದ್ದು ದಕ್ಷೀಣ ಆಫ್ರಿಕಾ ದಾಂಡಿಗರು ಆಘಾತ ಅನುಭವಿಸಿದ್ದಾರೆ.
ಆದರೆ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಅಕ್ಷರಶಃ ಆಸರೆಯಾಗಿದ್ದು ಡೇವಿಡ್ ಮಿಲ್ಲರ್. ಏಕಾಂಗಿ ಹೋರಾಟ ನೀಡಿದ ಡೇವಿಡ್ ಮಿಲ್ಲರ್ 116 ಎಸೆತಗಳಲ್ಲಿ ಅಮೂಲ್ಯ 101 ರನ್‌ಗಳನ್ನು ಬಾರಿಸಿ ಮಿಂಚಿದ್ದಾರೆ. ಅವರಿಗೆ ಕೆಲ ಕಾಲ ಸಾಥ್ ನಿಡಿದ ಕ್ಲಾಸೆನ್ ಅವರಿಂದ 47 ರನ್‌ಗಳ ಮಹತ್ವದ ಕೊಡುಗೆ ಬಂದಿದೆ. ಈ ಮೂಲಕ ದಕ್ಷೀಣ ಆಫ್ರಿಕಾ ತಂಡ ಈ ಪಂದ್ಯದಲ್ಲಿ 212 ರನ್‌ಗಳನ್ನು ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ.

ಒಂದು ಹಂತದಲ್ಲಿ ದಕ್ಷಿಣ ಆಫ್ರಿಕಾ ತಂಡ 12ನೇ ಓವರ್‌ನಲ್ಲಿ ಕೇವಲ 24 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಅತ್ಯಂತ ದಯನೀಯ ಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ಕ್ಲಾಸೆನ್ ಅವರೊಂದಿಗೆ ಸೇರಕೊಂಡು ಮಿಲ್ಲರ್ ಉತ್ತಮ ಜೊತೆಯಾಟವನ್ನು ನೀಡಿದರು. ತಂಡದ ಮೊತ್ತ 115 ರನ್‌ಗಳಾಗಿದ್ದಾಗ ಕ್ಲಾಸೆನ್ 47 ರನ್‌ಗಳಿಸಿ ವಿಕೆಟ್ ಕಳೆದುಕೊಂಡ ಬಳಿಕ ಮಿಲ್ಲರ್ ತಂಡದ ಸಂಪೂರ್ಣ ಜವಾಬ್ಧಾರಿಯನ್ನು ತಾವೇ ವಹಿಸಿಕೊಂಡರು.
ಬಾಲಂಗೋಚಿಗಳ ಸಹಾಯದಿಂದ ಡೇವಿಡ್ ಮಿಲ್ಲರ್ ತಮ್ಮ ಹೋರಾಟವನ್ನು ಮುಂದುವರಿಸಿದ್ದರು. ಗೆರಾಲ್ಡ್ ಕೊಯೆಟ್ಜೀ ಈ ಸಂದರ್ಭದಲ್ಲಿ ಉತ್ತಮವಾಗಿ ಸಾಥ್ ನೀಡಿದರು. ಈ ಸಂದರ್ಭದಲ್ಲಿ ಭರ್ಜರಿ ಶತಕವನ್ನು ಪೂರ್ಣಗೊಳಿಸಿದ ಮಿಲ್ಲರ್ ದಕ್ಷಿಣ ಆಫ್ರಿಕಾ ತಂಡದ ಪರವಾಗಿ ವಿಶ್ವಕಪ್‌ನ ನಾಕೌಟ್‌ನಲ್ಲಿ ಶತಕ ಸಿಡಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಫಾಫ್ ಡು ಪ್ಲೆಸಿಸ್ 2015ರ ಸೆಮಿಫೈನಲ್‌ನಲ್ಲಿ 82 ರನ್ ಸಿಡಿಸಿದ್ದು ದಕ್ಷಿಣ ಆಫ್ರಿಕಾ ಪರ ವಿಶ್ವಕಪ್ ನಾಕೌಟ್ನಲ್ಲಿ ದಾಖಲಾದ ಅತಿ ಹೆಚ್ಚಿನ ಸ್ಕೋರ್ ಆಗಿತ್ತು.
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಜೆರಾಲ್ಡ್ ಕೋಟ್ಜಿ, ಕಗಿಸೊ ರಬಾಡ, ತಬ್ರೈಜ್ ಶಮ್ಸಿ
ಬೆಂಚ್: ಲುಂಗಿ ಎನ್ಗಿಡಿ, ಲಿಜಾಡ್ ವಿಲಿಯಮ್ಸ್, ರೀಜಾ ಹೆಂಡ್ರಿಕ್ಸ್, ಆಂಡಿಲೆ ಫೆಹ್ಲುಕ್ವಾಯೊ
ಆಸ್ಟ್ರೇಲಿಯಾ: ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್
ಬೆಂಚ್: ಮಾರ್ಕಸ್ ಸ್ಟೊಯಿನಿಸ್, ಸೀನ್ ಅಬ್ಬೋಟ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications